ನಾನು ನಾಲ್ಕು ಮದುವೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಸ್ಟಾರ್ ನಟ..!

ಮದುವೆ ಎನ್ನುವುದು ಮಕ್ಕಾಳಿಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಬಂಧನ.

ಅದಕ್ಕೆ ಹಿರಿಯರು ಹೇಳಿರುವುದು ಮದುವೆ ಎನ್ನುವುದು ಒಂದೆರಡು ದಿನದ ಆಟವಲ್ಲ. ಜೀವನಪೂರ್ತಿಯಾಗಿ ಸಂಗಾತಿ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸಂದರ್ಭ.ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆಯ ರೂಪುರೇಶೆ ಬದಲಾಗಿದೆ. ಮದುವೆಯ ಅರ್ಥ ಕೂಡ ಬದಲಾಗಿದೆ. ಇದಕ್ಕೆ ಡ್ಯಾನಿಶ್ ತೈಮೂರ್ ಮಾತನಾಡಿದ ಮಾತುಗಳು ಸದ್ಯದ ಸಾಕ್ಷಿ.

pakistani-actor-danish-taimoor-claims-he-s-allowed-four-marriages-sparking-online-outrage

ಹೌದು, ಡ್ಯಾನಿಶ್ ತೈಮೂರ್.. ಪಾಕಿಸ್ತಾನದ ಸುಪ್ರಸಿದ್ದ ಕಿರುತೆರೆ ನಟ. ಅಬ್ ದೇಖ್ ಖುದಾ ಕ್ಯಾ ಕರ್ತಾ ಹೈ, ರಿಹಾಯಿ, ದಿವಾನಗಿ ಸೇರಿ ಹಲವು ಧಾರಾವಾಹಿಗಳ ಮೂಲಕ ಮನೆ ಮಾತಾದವರು ಡ್ಯಾನಿಶ್. ಇಂಥಾ ಡ್ಯಾನಿಶ್ ಸದ್ಯ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಬಹುಪತ್ನಿತ್ವದ ಕುರಿತು ತಮ್ಮ ಪತ್ನಿ ಆಯೆಜಾ ಖಾನ್ ಸಮ್ಮಖದಲ್ಲಿಯೇ ಮಾತನಾಡಿದ್ದಾರೆ.

ಹೌದು, ಅಸಲಿಗೆ ಡ್ಯಾನಿಶ್ ಮೆಹಫಿಲ್ ಎ ರಂಜಾನ್ ಎಂಬ ಕಾರ್ಯಕ್ರಮ ನಡೆಸಿಕೊಡ್ತಾರೆ. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಇವರ ಪತ್ನಿ ಆಯೆಜಾ ಖಾನ್ ಭಾಗವಹಿಸಿದ್ದರು. ಇದೇ ಸಮಯದಲ್ಲಿಯೇ ಜಸ್ಟ್ ಮಾತ್ ಮಾತಲ್ಲೇ ತಮ್ಮ ಮನದ ಮಾತನ್ನು ಹೊರ ಹಾಕಿರುವ ಡ್ಯಾನಿಶ್ ತೈಮೂರ್ ನನಗೆ ನಾಲ್ಕು ಮದುವೆಯಾಗಲು ಅನುಮತಿ ಇದೆ ಎಂದು ಹೇಳಿದ್ದಾರೆ. ನನಗೆ ನಾಲ್ಕು ಮದುವೆಯಾಗಲು ಅನುಮತಿ ಇದೆ, ಈ ಅನುಮತಿಯನ್ನು ನನಗೆ ಅಲ್ಲಾಹ್ ನೀಡಿದ್ದಾನೆ ಎಂದಿರುವ ಡ್ಯಾನಿಶ್ ತೈಮೂರ್ ನನ್ನ ಈ ಹಕ್ಕನ್ನು ಯಾರಿಂದ ಕೂಡ ಕಸಿದುಕೊಳ್ಳಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಮದುವೆಯಾಗುವ ಅನುಮತಿ ಇದ್ದರೂ ಕೂಡ ನಾನು ಇನ್ನೂ ಬೇರೆ ಮದುವೆಯಾಗಿಲ್ಲ ಎಂದಿರುವ ಡ್ಯಾನಿಶ್ ತೈಮೂರ್ ತಮ್ಮ ಪತ್ನಿ ಆಯೆಜಾ ಅವರತ್ತ ಬೆರಳು ತೋರಿಸಿ ಸದ್ಯಕ್ಕೆ ನಾನು ಆಯೆಜಾ ಜೊತೆ ಖುಷಿಯಾಗಿದ್ದೇನೆ, ಅವರೊಂದಿಗೆ ಜೀವನ ಕಳೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಡ್ಯಾನಿಶ್ ತೈಮೂರ್ ಅವರ ಹೇಳಿಕೆಗೆ ಪಾಕಿಸ್ತಾನದ ಕಥೆ ಗೊತ್ತಿಲ್ಲ ಆದರೆ ಭಾರತದಲ್ಲಿ ತೀವೃ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಡ್ಯಾನಿಶ್ ತೈಮೂರ್ ಅವರ ಈ ಬಹುಪತ್ನಿತ್ವದ ಹೇಳಿಕೆಯ ಕುರಿತು ಚರ್ಚೆ ನಡೆಯುತ್ತಿದೆ. ತನ್ನ ಪತ್ನಿಯನ್ನು ಸಾರ್ವಜನಿಕವಾಗಿ ಈ ತರ ಮುಜುಗರಕ್ಕೀಡು ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆಯನ್ನು ಕೇಳುತ್ತಿರುವ ಅನೇಕರು ಡ್ಯಾನಿಶ್ ಪತ್ನಿ ಆಯೇಜಾ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಿದ್ದಾರೆ. ಡ್ಯಾನಿಶ್ ಅವರಷ್ಟು ಮೂರ್ಖ ಮತ್ತು ಅಸಹ್ಯ ವ್ಯಕ್ತಿ ಮತ್ತೊಬ್ಬರು ಇರಲಾರರು ಎನ್ನುತ್ತಿದ್ದಾರೆ.

ಅಂದ್ಹಾಗೇ ಆಯೆಜಾ ಖಾನ್ ಕೂಡ ಪಾಕಿಸ್ತಾನದ ಖ್ಯಾತ ನಾಯಕಿ. ಕಿರುತೆರೆಯ ಮೂಲಕ ಅನೇಕರ ಹೃದಯವನ್ನು ಗೆದ್ದವರು ಇವರು. 2009ರಲ್ಲಿ ತುಮ್ ಜೋ ಮಿಲೇ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಆಯೆಜಾ ಆ ನಂತರ್ ಮೇರೆ ಮೆಹರಬಾನ್, ತುಮ್ ಕೌನ್ ಪಿಯಾ, ಚುಪ್ಕೆ ಚುಪ್ಕೆ ಸೇರಿ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಇನ್ನು ನಾಲ್ಕು ಮದುವೆಯಾಗುವ ಆಸೆಯನ್ನು ಹೊಂದಿರುವ ಡ್ಯಾನಿಶ್ ತೈಮೂರ್ ಕಿರುತೆರೆಗೆ ಆಯೆಜಾ ಖಾನ್ ಅವರಿಗಿಂತ ನಾಲ್ಕು ವರ್ಷ ಮುಂಚೆ ಅಂದರೆ 2005ರಲ್ಲಿ ಬಂದರು. ಅಬ್ ದೇಖ್ ಖೂದಾ ಕ್ಯಾ ಕರ್ತಾ ಹೈ ಇವರಿಗೆ ಅಪಾರವಾದ ಹೆಸರನ್ನು ತಂದು ಕೊಟ್ಟಿತ್ತು.

ಇಂಥಾ ಡ್ಯಾನಿಶ್ ತೈಮೂರ್ ಮತ್ತು ಆಯೆಜಾ ಖಾನ್ ಅನೇಕ ವರ್ಷಗಳ ಕಾಲ ಪರಸ್ಪರ ಪ್ರೀತಿಸಿದರು. ಜೊತೆಯಲ್ಲಿ ಸುತ್ತಾಡಿದರು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರ 2014ರಲ್ಲಿ ಮದುವೆಯಾದರು. 2015ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಇಬ್ಬರು 2017ರಲ್ಲಿ ಮತ್ತೊಂದು ಮಗುವನ್ನು ಬರಮಾಡಿಕೊಂಡರು.

ಸದ್ಯ ಡ್ಯಾನಿಶ್ ತೈಮೂರ್ ಅವರ ಬಹುಪತ್ನಿತ್ವದ ಕುರಿತ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಅನೇಕ ಸ್ಟಾರ್‌ಗಳು ಡ್ಯಾನಿಶ್ ಅವರ ಈ ಹೇಳಿಕೆಗೆ ಕಿಡಿ ಕಾರುತ್ತಿದ್ದಾರೆ. ಈ ಹಿನ್ನೆಲೆ ಡ್ಯಾನಿಶ್ ತೈಮೂರ್ ತಮ್ಮ ಹೇಳಿಕೆಗೆ ಸದ್ಯ ಕ್ಷಮೆಯನ್ನು ಕೂಡ ಕೇಳಿದ್ದಾರೆ. ಮಾತನಾಡುವ ಭರದಲ್ಲಿ ಏನೋ ತಪ್ಪಾಯ್ತು ಕ್ಷಮಿಸಿ ಎಂದಿದ್ದಾರೆ.

More from Filmibeat

Read more about: marriage filmibeat news wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X