For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸೂಪರ್ ಸ್ಟಾರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪಾಕಿಸ್ತಾನದ ನಟ ಫಹಾದ್ ಮುಸ್ತಾಫಾ: ವಿಡಿಯೋ ವೈರಲ್

  By ಫಿಲ್ಮಿಬೀಟ್ ಡೆಸ್ಕ್
  |

  ದುಬೈನಲ್ಲಿ ಫಿಲ್ಮ್‌ಫೇರ್ ಮಿಡ್ಲ್ ಈಸ್ಟ್ ಅಚೀವರ್ಸ್ ನೈಟ್ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನೆರವೇರಿದೆ. ಬಾಲಿವುಡ್ ಹಾಗೂ ಪಾಕಿಸ್ತಾದ ಕಲಾವಿದರು ಈ ಈವೆಂಟ್‌ನಲ್ಲಿ ಭಾಗಿ ಆಗಿದ್ದರು. ಬಿಟೌನ್ ನಟ ಗೋವಿಂದ ಅವರನ್ನು ನೋಡಿದ ಕೂಡಲೇ ಪಾಕಿಸ್ತಾನದ ನಟ ಫಹಾದ್ ಮುಸ್ತಾಫಾ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

  ಪಾಕ್ ನಟ ಫಹಾದ್ ಮುಸ್ತಾಫಾ "ನೀವೇ ನನ್ನ ಇನ್ಸ್ಪಿರೇಷನ್ ಎಂದು ಎಮೋಷನಲ್" ಆಗಿದ್ದಾರೆ. ಗೋವಿಂದ ಕೂಡ ಫಹಾದ್ ಅವರನ್ನು ಅಪ್ಪಿಕೊಂಡು ಕೈ ಕುಲುಕಿದ್ದಾರೆ. ಪಕ್ಕದಲ್ಲೇ ಇದ್ದ ರಣ್‌ವೀರ್ ಸಿಂಗ್ ಕೂಡ ಫಹಾದ್ ಜೊತೆ ಮಾತನಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ನಟ ರಣವೀರ್ ಸಿಂಗ್ ಕೂಡ ಫಹಾದ್ ಕೈ ಕುಲುಕಿ ಪರಸ್ಪರ ಅಪ್ಪಿಕೊಂಡಿದ್ದಾರೆ. ಗೋವಿಂದ ಕಪ್ಪು ಮತ್ತು ಗೋಲ್ಡನ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ರೆ, ರಣವೀರ್ ಕೆಂಪು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅದ್ಧೂರಿ ಈವೆಂಟ್‌ಗೆ ಫಹಾದ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರು. ಸಜಲ್ ಅಲಿ ಪಾಕಿಸ್ತಾನ ಚಿತ್ರರಂಗದ ಜನಪ್ರಿಯ ನಟ, ಸಯೀದ್ ಪಾಕಿಸ್ತಾನ ಚಿತ್ರರಂಗದ ಟ್ರೆಂಡ್‌ಸೆಟರ್ ಮತ್ತು ಮುಸ್ತಫಾ ಫಹಾದ್ ಪಾಕಿಸ್ತಾನದ ಪ್ರಾಮಿಸಿಂಗ್ ಸ್ಟಾರ್ ಅವಾರ್ಡ್ ಪಡೆದುಕೊಂಡರು.

  pakistani-actor-fahad-mustafa-express-his-love-for-bollywood-star-govinda-at-filmfare-middle-east-ac

  ಇನ್ನು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆ ಏರಿದ ಫಹಾದ್ ಮುಸ್ತಾಫಾ "ಗೋವಿಂದ ಸರ್ ಅವರಿಂದಲೇ ನಾನು ನಟಿಸೋಕೆ ಆರಂಭಿಸಿದೆ. ಅವರಿಗೆ ನಾನು ದೊಡ್ಡ ಅಭಿಮಾನಿ. ಎಂದೆಂದಿಗೂ ಈ ಅಭಿಮಾನ ಇದೇ ರೀತಿ ಇರುತ್ತದೆ. ನಮ್ಮ ದೇಶದಲ್ಲಿ ನಿಮ್ಮಂತೆ ನಟಿಸಬೇಕು ಎಂದುಕೊಳ್ಳುವವರು ಬಹಳ ಜನ ಇದ್ದಾರೆ. ಇಂದು ನಿಮ್ಮ ಮುಂದೆ ವೇದಿಕೆ ಏರಿ ನಿಂತಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಈ ಕ್ಷಣಕ್ಕೂ ಇದನ್ನೆಲ್ಲಾ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಭಾರತ- ಪಾಕ್ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆಶಿಸುತ್ತೇನೆ" ಎಂದಿದ್ದಾರೆ.

  ಹೇಮಾ ಮಾಲಿನಿ, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ಜಾನ್ವಿ ಕಪೂರ್, ಶೆಹನಾಜ್ ಗಿಲ್, ಭೂಮಿ ಪೆಡ್ನೇಕರ್, ಸನ್ನಿ ಲಿಯೋನ್, ಮಾನುಷಿ ಛಿಲ್ಲರ್, ವಾಣಿ ಕಪೂರ್, ಮನೀಷ್ ಪಾಲ್, ರಾಖಿ ಸಾವಂತ್, ತಮನ್ನಾ ಸಿಂಗ್, ಭಾರತಿ, ಭಾರತಿ ಕಪೂರ್, ಶರ್ವರಿ ವಾಘ್, ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಸೇರಿದಂತೆ ಸಾಕಷ್ಟು ಜನ ಬಾಲಿವುಡ್ ಸೆಲೆಬ್ರೆಟಿಗಳು ಫಿಲ್ಮ್‌ಫೇರ್ ಮಿಡ್ಲ್ ಈಸ್ಟ್ ಅಚೀವರ್ಸ್ ನೈಟ್ ಈವೆಂಟ್‌ನಲ್ಲಿ ಭಾಗಿ ಆಗಿದ್ದರು.

  ಪಾಕಿಸ್ತಾನದಲ್ಲೂ ಸಿನಿಮಾ ಈಗ ಸಖತ್ ಸದ್ದು ಮಾಡುತ್ತಿವೆ. ಇತ್ತೀಚೆಗೆ 'ದಿ ಲೆಜೆಂಡ್ ಆಫ್ ಮೌಲ್ ಝಾಟ್' ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿತ್ತು. ಪಾಕಿಸ್ತಾನ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸದ್ಯ ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ 150 ಕೋಟಿ ಗಡಿ ದಾಟಿದ್ದು, ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ. ಇತ್ತೀಚಗೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಸಿನಿಮಾ ವೀಕ್ಷಿಸಿ ನಿರ್ದೇಶಕರಿಗೆ ಕರೆ ಮಾಡಿ ಅಭಿನಂದಿಸಿದ್ದರು.

  English summary
  Pakistani actor Fahad Mustafa Express his love for Bollywood star Govinda at Filmfare Middle East Achiever's Night. Fahad Mustafa touches Govinda's feet at event. Know More.
  Monday, November 21, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X