ಹೃತಿಕ್ ರೋಷನ್ ಚಿತ್ರದ ವಿರುದ್ಧ ಸಿಡಿದ ಪಾಕಿಸ್ತಾನಿ ಸೆಲಬ್ರಿಟಿಗಳು: ನಿರ್ದೇಶಕನ ಪ್ರತಿಕ್ರಿಯೆ!

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ ಆಕ್ಷನ್ ಎಂಟರ್‌ಟೈನರ್ 'ಫೈಟರ್' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್‌ಗೆ ಸಿನಿ ಪ್ರಿಯರಿಂದ ಸಕತ್ ರೆಸ್ಪಾನ್ಸ ಬಂದಿದೆ. ಇದೆ ಬೆನ್ನಲ್ಲೇ ಪಾಕಿಸ್ತಾನನ ಸೆಲಬ್ರಿಟಿಗಳು ಫೈಟರ್ ಚಿತ್ರದ ಬಗ್ಗೆ ಟೀಕೆ ಮಾಡಿದ್ದಾರೆ.

ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಮೇಲೆ ಭಾರತೀಯ ವಾಯುಪಡೆಯ ವೈಮಾನಿಕ ದಾಳಿಯ ಹಿನ್ನೆಲೆಯನ್ನು ಕಥೆ ಹೊಂದಿದೆ. 'ಫೈಟರ್' ಸಿನಿಮಾ ಟ್ರೈಲರ್‌ನ ದೃಶ್ಯಗಳು ಮತ್ತು ಆಕ್ಷನ್ ಪ್ಯಾಕ್ಡ್ ಸೀನ್‌ಗಳನ್ನು ಹಲವರು ಶ್ಲಾಘಿಸಿದರೆ, ಕೆಲವರು ಚಿತ್ರವು ಅತಿರೇಕದ ರಾಷ್ಟ್ರಪ್ರೇಮವನ್ನು ಹೊಂದಿದೆ ಎಂದು ಟೀಕಿಸಿದ್ದಾರೆ.

Pakistani actors Hania Aamir and others slam Fighter trailer for spreading hate: Siddharth Anand reacts

ಫೈಟರ್ ವಿರುದ್ಧ ಆಕ್ರೋಶ ಹೊರಹಾಕಿದ ಪಾಕಿಸ್ತಾನಿ ನಟರು!

ಫೈಟರ್ ಸಿನಿಮಾ 2019 ರ ಪುಲ್ವಾಮಾ ದಾಳಿಯ ಸುತ್ತ ಸುತ್ತುತ್ತದೆ. ಇದರಲ್ಲಿ ಪಾಕಿಸ್ತಾನವನ್ನು ಅನ್ಯಾಯವಾಗಿ ವಿಲನ್‌ನಂತೆ ಚಿತ್ರಿಸಲಾಗಿದೆ ಮತ್ತು ಪಾಕಿಸ್ತಾನ ವಿರೋಧ ದ್ವೇಷ ಹಂಚಲಾಗುತ್ತಿದೆ ಎಂದು ಪಾಕಿಸ್ತಾನದ ಹಲವಾರು ನಟರು, ಸೆಲಬ್ರಿಟಿಗಳು ಕಿಡಿ ಕಾರಿದ್ದಾರೆ. ನಟಿ ಹನಿಯಾ ಅಮೀರ್, ಅದ್ನಾನ್ ಸಿದ್ದಿಕಿ ಮತ್ತು ಇತರ ಅನೇಕ ಪಾಕಿಸ್ತಾನಿ ನಟರು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರನ್ನು ಟೀಕಿಸಿದ್ದಾರೆ.

ಚಿತ್ರದ ಹೆಸರನ್ನು ಉಲ್ಲೇಖಿಸದೆ, ಪಾಕಿಸ್ತಾನಿ ನಟ ಶ್ರೀದೇವಿಯೊಂದಿಗೆ ಮಾಮ್‌ ಸಿನಿಮಾದಲ್ಲಿ ಕೆಲಸ ಮಾಡಿ ಮೆಚ್ಚುಗೆ ಪಡೆದ ನಟ ಅದ್ನಾನ್ ಸಿದ್ದಿಕಿ ತಮ್ಮ ಟ್ವಿಟರ್‌ನಲ್ಲಿ "ಒಂದು ಕಾಲದಲ್ಲಿ ಪ್ರೀತಿಗಾಗಿ ಸಂಭ್ರಮಿಸಿದ ಬಾಲಿವುಡ್ ಈಗ ದ್ವೇಷ ತುಂಬಿದ ನಿರೂಪಣೆಗಳನ್ನು ರೂಪಿಸುತ್ತಿದೆ. ನಮ್ಮನ್ನು ಖಳನಾಯಕರನ್ನಾಗಿ ಚಿತ್ರಿಸುತ್ತದೆ. ನಿಮ್ಮ ಚಲನಚಿತ್ರಗಳ ಮೇಲಿನ ನಮ್ಮ ಪ್ರೀತಿಯ ಹೊರತಾಗಿಯೂ, ಇದು ನಿರಾಶಾದಾಯಕವಾಗಿದೆ. ಕಲೆ ಗಡಿಗಳನ್ನು ಮೀರಿದೆ. ಪ್ರೀತಿ ಮತ್ತು ಶಾಂತಿಯನ್ನು ಉತ್ತೇಜಿಸಲು ಅದನ್ನು ಬಳಸೋಣ. ಎರಡು ರಾಷ್ಟ್ರಗಳು, ರಾಜಕೀಯದ ಬಲಿಪಶುಗಳು" ಎಂದು ಹೇಳಿದ್ದಾರೆ.

Pakistani actors Hania Aamir and others slam Fighter trailer for spreading hate: Siddharth Anand reacts

ಮತ್ತೊಬ್ಬ ನಟಿ, ಭಾರತದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಹನಿಯಾ ಅಮೀರ್ ಕೂಡ ಟ್ರೈಲರ್‌ ಅನ್ನು ಖಂಡಿಸಿದ್ದಾರೆ. "ಇಂದಿನ ಕಾಲದಲ್ಲಿ ಚಿತ್ರರಂಗ ಹೊಂದಿರುವ ಶಕ್ತಿಯನ್ನು ಅರಿತುಕೊಂಡು ಎರಡು ದೇಶಗಳ ನಡುವೆ ಬಿರುಕನ್ನು ಮುಂದಿಟ್ಟುಕೊಂಡು ಹೋಗುವ ಕಲಾವಿದರು ಇದ್ದಾರೆ ಎನ್ನುವುದು ತುಂಬಾ ದುಃಖ ಮತ್ತು ದುರದೃಷ್ಟಕರ. ತಮ್ಮ ಕಲೆಯನ್ನು ಮಾಧ್ಯಮವಾಗಿ ನಂಬಿ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುವ ಕಲಾವಿದರ ಬಗ್ಗೆ ನನಗೆ ವಿಷಾದವಿದೆ. ಅಸಹ್ಯಕರ. ಕಲೆಯನ್ನು ಉಸಿರಾಡಲು ಬಿಡಿ" ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಪಾಕ್ ಸೆಲಬ್ರಿಟಿಗಳಿಗೆ ಸಿದ್ಧಾರ್ಥ್ ಆನಂದ್ ಪ್ರತಿಕ್ರಿಯೆ

ಹನಿಯಾ ಅಮೀರ್ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಸ್ಟೋರಿಗಳ ಕುರಿತು ಮಾಡಿದ ಟ್ವೀಟ್‌ಗೆ 'ಯೋಚಿಸುವ' ಎಮೋಜಿ ಹಾಕಿದ್ದಾರೆ. ಇನ್ನು, ಟ್ವೀಟ್‌ನಲ್ಲಿ, "ಹನಿಯಾ ಅಮೀರ್ ಅಕ್ಷರಶಃ ಭಾರತ ವಿರೋಧಿ ಚಲನಚಿತ್ರದಲ್ಲಿ ಕೆಲಸ ಮಾಡಲಿಲ್ಲವೇ..? ಚಲನಚಿತ್ರಗಳಲ್ಲಿ ಭಾರತ ವಿರೋಧಿ ಸಂಗತಿಗಳ ಬಗ್ಗೆ ಭಾರತೀಯ ಸೆಲೆಬ್ರಿಟಿಗಳು ಏನು ಮಾತಾಡದೇ ಇರುವಾಗ, ಪಾಕ್ ಸೆಲೆಬ್ರಿಟಿಗಳು ಏಕೆ ಇಷ್ಟೊಂದು ಮಾತನಾಡುತ್ತಾರೆ ಎಂದು ಕಾಳಜಿ ವಹಿಸುತ್ತಾರೆ?" ಎಂದಿದ್ದಾರೆ.

ಫೈಟರ್

ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಅವರಲ್ಲದೆ, ಫೈಟರ್‌ನಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಅಶುತೋಷ್ ರಾಣಾ ಮತ್ತು ಸಂಜೀದಾ ಶೇಖ್ ಸಹ ನಟಿಸಿದ್ದಾರೆ. ಈ ಚಿತ್ರವನ್ನು ವಾರ್ ಮತ್ತು ಪಠಾಣ್ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಫೈಟರ್ ಜನವರಿ 25, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಗಲಿದೆ.

More from Filmibeat

English summary
Pakistani actors slam Fighter trailer for 'spreading hate'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X