ಸೆಮೀಸ್ ಮ್ಯಾಚ್ ಫಿಕ್ಸ್ ಆಗಿತ್ತು.. BCCI, BJP ಸರ್ವನಾಶವಾಗುತ್ತೆ: ವಿಷ ಕಕ್ಕಿದ ಪಾಕ್ ನಟಿ
ವಿಶ್ವಕಪ್‌ನಲ್ಲಿ ಭಾರತ ತಂಡದ ವಿಜಯಯಾತ್ರೆ ಮುಂದುವರೆದಿದೆ. ಸತತ 9 ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಿಡಿದು ಫೈನಲ್ ಪ್ರವೇಶಿಸಿದೆ. ಭಾನುವಾರ ವಿಶ್ವಕಪ್‌ಗಾಗಿ ಅಂತಿಮ ಹಣಾಹಣಿ ನಡೀತಿದೆ.
ಕೀವಿಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಶಮಿ ಅದ್ಭುತ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕಿಂಗ್ ಕೊಹ್ಲಿ ಸಾಧನೆಗೆ ಕ್ರಿಕೆಟ್ ಜಗತ್ತು ಬಹುಪರಾಕ್ ಎಂದಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಟೀಂ ಇಂಡಿಯಾ ವಿರುದ್ಧ ಸದಾ ವಿಷ ಕಾರುವ ಪಾಕ್ ನಟಿ ಸೆಹರ್ ಶಿನ್ವಾರಿ ಮತ್ತೊಮ್ಮೆ ಮಂಗಾಟ ಶುರು ಮಾಡಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಭಾರತ- ಕೀವಿಸ್ ಸೆಮಿಫೈನಲ್ ಪಂದ್ಯದ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾಳೆ. ಈ ಹಿಂದೆ ಭಾರತ ತಂಡವನ್ನು ಸೋಲಿಸಿದರೆ ಬಾಂಗ್ಲಾ ಯುವಕನ ಜೊತೆ ಡೇಟಿಂಗ್ ಮಾಡ್ತೀನಿ ಎಂದು ಸೆಹರ್ ಶಿನ್ವಾರಿ ಟ್ವೀಟ್ ಮಾಡಿದ್ದಳು. ಇದೀಗ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಗೆದ್ದು ಫೈನಲ್ ಹಂತಕ್ಕೇರಿದ್ದು ನನ್ನಿಂದ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾಳೆ.
ಭಾರತ-ನ್ಯೂಜಿಲೆಂಟ್ ಸೆಮಿ ಫೈನಲ್ ಪಂದ್ಯದ ನಂತರ, ಶಿನ್ವಾರಿ ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಪ್ರತಿಕ್ರಿಯಿಸಿದ್ದಾಳೆ. "ಭಾರತ ಎಲ್ಲ ಕ್ಷೇತ್ರಗಳಲ್ಲಿ ಪಾಕಿಸ್ತಾನಕ್ಕಿಂತ ಮುಂದಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಬಿಸಿಸಿಐ ಮತ್ತು ಬಿಜೆಪಿ ಶೀಘ್ರದಲ್ಲೇ ಸರ್ವನಾಶವಾಗಲಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಮತ್ತೊಂದು ಟ್ವೀಟ್‌ನಲ್ಲಿ "ಭಾರತ ತಂಡದಲ್ಲಿರುವ ಆಟಗಾರರು ಉತ್ತಮ ನಟರು. ಅವರಿಗೆ ಈ ಪಂದ್ಯ ಫಿಕ್ಸ್ ಆಗಿದೆ ಎಂದು ಗೊತ್ತು. ಆದರೆ ಈ ಪಂದ್ಯದಲ್ಲಿ ಅವರು ನಿಜವಾಗಿಯೂ ಗೆಲುವಿಗಾಗಿ ಹೋರಾಡಿದಂತೆ ಉತ್ತಮವಾಗಿ ನಟಿಸಿದ್ದಾರೆ" ಎಂದು ಬರೆದಿದ್ದಾಳೆ.
ಸೆಹರ್ ಶಿನ್ವಾರಿ ಟ್ವೀಟ್‌ಗಳಿಗೆ ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ. ಭಾರತದ ಗೆಲುವಿನಿಂದ ಪಾಕಿಸ್ತಾನದ ಅಭಿಮಾನಿಗಳಿಗೆ ಉರಿ ಹತ್ತಿದಂತೆ ಕಾಣುತ್ತಿದೆ. ಕೂಡಲೇ ಬರ್ನಾಲ್ ಹಚ್ಚಿಕೊಳ್ಳಿ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು, "ನಾವು ನಿಮ್ಮಂತೆ ಮದರಸಾಗಳಿಗೆ ಹೋಗಿ ಕ್ರಿಕೆಟ್ ಕಲಿಯುವುದಿಲ್ಲ. ಸ್ವಲ್ಪ ಎಚ್ಚೆತ್ತುಕೊಳ್ಳಿ. ಎಲ್ಲಾ ಪಿಚ್‌ಗಳು ಫ್ಲ್ಯಾಟ್ ಪಿಚ್‌ಗಳಲ್ಲ" ಎಂದು ತಿರುಗೇಟು ನೀಡುತ್ತಿದ್ದಾರೆ.
ಬಿಟ್ಟಿ ಪಬ್ಲಿಸಿಟಿಗಾಗಿ ಸೆಹರ್ ಶಿನ್ವಾರಿ ಈ ರೀತಿ ಆಡುತ್ತಿದ್ದಾಳೆ. ಸುಖಾ ಸುಮ್ಮನೆ ಗಮನ ಸೆಳೆಯಲು ಇಂತಹ ಟ್ವೀಟ್‌ಗಳನ್ನು ಮಾಡುತ್ತಿದ್ದಾಳೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ನಲ್ಲಿ ಆಕೆಯ ಟ್ವೀಟ್‌ಗಳ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ.
ಸೆಹರ್ ಶಿನ್ವಾರಿ ಪಾಕಿಸ್ತಾನಿ ನಟಿ, ನಿರೂಪಕಿ, ಸೋಶಿಯಲ್ ಮೀಡಿಯಾ ಇನ್‌ಫ್ಲುನ್ಸರ್, ಸೋಶಿಯಲ್ ಮೀಡಿಯಾ ಆಕ್ವಿವಿಸ್ಟ್ ಆಗಿದ್ದು 2022ರ ನವೆಂಬರ್‌ನಿಂದ ಹೆಚ್ಚು ಸುದ್ದಿಯಾಗುತ್ತಿದ್ದಾಳೆ. ನವೆಂಬರ್ 2022 ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಭಾರತವನ್ನು ಸೋಲಿಸಿದರೆ ಜಿಂಬಾಬ್ವೆಯ ವ್ಯಕ್ತಿಯನ್ನು ಮದುವೆಯಾಗುವುದಾಗಿ ಆಗಿ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಳು.
ಇತ್ತೀಚೆಗೆ ಪಾಕ್ ಕ್ರಿಕೆಟ್ ತಂಡ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ್ದಳು. ಕೂಡಲೇ ಇಡೀ ಪಾಕ್ ಕ್ರಿಕೆಟ್ ತಂಡದ ಆಟಗಾರರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಳು. ಈ ಹಿಂದೆ ಪಾಕಿಸ್ತಾನದಲ್ಲಿ ಆಗುತ್ತಿರುವ ಸಮಸ್ಯೆಗೆ ಮೋದಿ ಕಾರಣ ಎಂದು ಸೆಹರ್ ಶಿನ್ವಾರಿ ಆರೋಪಿಸಿದ್ದಳು. ಅಲ್ಲದೇ, ಮೋದಿ ವಿರುದ್ಧ ದೂರು ನೀಡಲು ದೆಹಲಿ ಪೊಲೀಸರ ಸಹಾಯ ಕೇಳಿ ಟ್ವೀಟ್ ಮಾಡಿದ್ದಳು. ಇದಕ್ಕೆ ದೆಹಲಿ ಪೊಲೀಸರು ಖಡಕ್ ತಿರುಗೇಟು ನೀಡಿದ್ದರು.


Click it and Unblock the Notifications











