"ಭಾರತದ ವಿರುದ್ಧದ ಪಾಕಿಸ್ತಾನ ಗೆದ್ದರೆ, ಮಾಧುರಿ ದೀಕ್ಷಿತ್ ನನ್ನವಳಾಗ್ತಾಳೆ"; ಪಾಕ್ ಧರ್ಮ ಗುರುವಿನ ವಿವಾದಾತ್ಮಕ ಹೇಳಿಕೆ
ಪೆಹಲ್ಗಾಮ್‌ನಲ್ಲಿ 26 ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ಶೂಟ್ ಮಾಡಿ ಹೇಯ ಕೃತ್ಯವನ್ನು ಮರೆದಿದ್ದರು. ಭಯೋತ್ಪಾದಕರ ಈ ಕೃತ್ಯದ ಕುರಿತು ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಉಗ್ರರನ್ನು ಸೆದೆ ಬಡಿಯುವಂತೆ ಆಗ್ರಹ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಭಾರತ ಭಯೋತ್ಪಾದನೆಯನ್ನು ಮಟ್ಟ ಹಾಕಲೇ ಬೇಕು ಎಂದು ಪಣತೊಟ್ಟು ನಿಂತಿದೆ. ಈ ಸಂಬಂಧ ಭಾರತದ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ.
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಪಾಕಿಸ್ತಾನ ಮೌಲಾನಾನದ್ದೇ ಎನ್ನಲಾದ ವಿಡಿಯೋ ಒಂದು ಸುದ್ದಿಯಾಗುತ್ತಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಗೆದ್ದರೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅನ್ನು ಎತ್ತಾಕಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ. ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಭಾರತೀಯರ ಕಣ್ಣುಗಳು ಕೆಂಪಗಾಗಿವೆ.

ಭಾರತದ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಬಿಗುವಿನ ವಾತಾವರಣವಿದೆ. ಯಾವಾಗ ಬೇಕಾದರೂ ಯುದ್ಧ ಆರಂಭ ಆಗಬಹುದು. ಭಾರತೀಯ ಸೇನೆಗೆ ಕೇಂದ್ರ ಸರ್ಕಾರ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ದು, ಭಯೋತ್ಪಾದನೆಯ ವಿರುದ್ಧ ಸಮಯ ಸಾರಿದೆ. ಸಾಕಷ್ಟು ದೇಶಗಳು ಕೂಡ ಭಾರತದ ಬೆನ್ನಿಗೆ ನಿಂತಿವೆ. ಇಂತಹ ಸ್ಥಿತಿಯಲ್ಲಿ ಇರುವಾಗ ಪಾಕಿಸ್ತಾನದ ಧರ್ಮ ಗುರುವಿನ ಹೇಳಿಕೆ ಭಾರತೀಯ ಆಕ್ರೋಶಕ್ಕೆ ಕಾರಣವಾಗಿದೆ.
ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧ ಭೀತಿ ಇದ್ದರೆ, ಇಂತಹ ಸಮಯದಲ್ಲಿ ಪಾಕ್ ಧರ್ಮ ಗುರುವಿನ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾನೆ. ಅಸಲಿಗೆ ಈ ವಿಡಿಯೋದ ಮೂಲ ಎಲ್ಲಿಯದ್ದು? ಯಾವ ಸಂದರ್ಭದಲ್ಲಿ ಕೊಟ್ಟಿದ್ದು? ಹಳೆಯದ್ದಾ? ಹೊಸ ವಿಡಿಯೋನಾ? ಅನ್ನೋ ನಿಖರ ಮಾಹಿತಿ ಇಲ್ಲ. ಆದರೆ, ಎಕ್ಸ್ ಖಾತೆಯಲ್ಲಿ ಪಾಕಿಸ್ತಾನದ ಧರ್ಮ ಗುರುವಿನದ್ದೇ ಎನ್ನಲಾದ ವಿಡಿಯೋ ಮಾತ್ರ ಸಂಚಲವನ್ನು ಸೃಷ್ಟಿಸಿದೆ.
ಈ ವಿಡಿಯೋದಲ್ಲಿ ಪಾಕಿಸ್ತಾನದ ಧರ್ಮ ಗುರು ತನ್ನ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ವಿಡಿಯೋ ಮಾಡಿದ್ದಾನೆ. ಅದರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಆ ಯುದ್ಧದಲ್ಲಿ ಪಾಕಿಸ್ತಾನ ಗೆದ್ದರೆ, ತಾನು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅನ್ನು ಎತ್ತಾಕೊಂಡು ಬರುತ್ತೇನೆ ಎಂದು ಹೇಳಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಪಾಕ್ ಧರ್ಮ ಗುರುವಿನ ವಿರುದ್ದ ಭಾರತೀಯರು ಕಿಡಿ ಕಾರುವುದಕ್ಕೆ ಶುರು ಮಾಡಿದ್ದಾರೆ. ಈ ವಿಡಿಯೋವನ್ನು ಅಮಿತಾಬ್ ಚೌಧರಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ವಾತಾವರಣವಂತೂ ಸೃಷ್ಟಿಯಾಗಿದೆ. ಯಾವಾಗ ಬೇಕಾದರೂ ಯುದ್ಧ ಆಗಬಹುದೆಂದು ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. 1999ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಆರಂಭ ಆಗಿತ್ತು. ಅದುವೇ ಕಾರ್ಗಿಲ್ ಯುದ್ಧ. ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ಸೇನೆ ಹಾಗೂ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ದಿಟ್ಟತನದಿಂದ ಹೋರಾಟ ಮಾಡಿತ್ತು. ಈ ಯುದ್ಧದಲ್ಲಿ ಭಾರತ ವಿಜಯವನ್ನು ಸಾಧಿಸಿತ್ತು.
ಈ ವೇಳೆ ಭಾರತ ಆಪರೇಷನ್ ವಿಜಯ್ ನಡೆಸಿತ್ತು. ಈ ಮೂಲಕ ಆಕ್ರಮಿತ ಪ್ರದೇಶವನ್ನು ವಾಪಾಸು ಪಡೆಯುವತ್ತ ಮುಂದಾಗಿತ್ತು. ಸುಮಾರು ಎರಡು ತಿಂಗಳು ನಡೆದ ಈ ಯುದ್ಧ 1999 ಜುಲೈ ತಿಂಗಳಲ್ಲಿ ಅಂತ್ಯ ಕಂಡಿತ್ತು. ಈ ಯುದ್ಧದಲ್ಲಿ ಆಕ್ರಮಿತ ಪ್ರದೇಶವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ವೇಳೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಟೀಕೆಗಳು ವ್ಯಕ್ತವಾಗಿದ್ದವು. ವಿಶ್ವದಲ್ಲಿ ಭಾರತಕ್ಕೆ ಪ್ರಶಂಸೆ ವ್ಯಕ್ತಪಡಿಸಲಾಗಿತ್ತು. ಹಾಗೇ ಕಾರ್ಗಿಲ್ ಯುದ್ಧವನ್ನು ಗೆದ್ದಿತ್ತು. ಪಾಕಿಸ್ತಾನದ ವಿರುದ್ಧ ವಿಜಯೋತ್ಸವವನ್ನು ಆಚರಿಸಿತ್ತು.


Click it and Unblock the Notifications











