ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಯ್ತು 'ರೀಲ್ಸ್ ರಾಣಿ'ಯ ಖಾಸಗಿ ವಿಡಿಯೋ, ಕಣ್ಣೀರಿಟ್ಟ ಚೆಲುವೆ...!

ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಟಿಕ್ ಟಾಕ್ ಮೂಲಕ ಮೋಡಿ ಮಾಡಿರುವ ಚೆಲುವೆಯ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಮಿನಾಹಿಲ್ ಮಲ್ಲಿಕ್.. ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್. ಫ್ಯಾಶನ್ ಮತ್ತು ಲೈಫ್ ಸ್ಟೈಲ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಮಿನಾಹಿಲ್ ಹಾಡುಗಳಿಗೆ ಕೂಡ ರೀಲ್ಸ್ ಮಾಡ್ತಾರೆ. ರೀಲ್ಸ್ ರಾಣಿಯೆಂದು ಕೂಡ ತಮ್ಮ ಅಭಿಮಾನಿಗಳಿಂದ ಕರೆಯಲ್ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹತ್ ಹತ್ರ ಎರಡು ಮಿಲಿಯನ್ ಜನ ಇವರನ್ನು ಫಾಲೋ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅಪಾರವಾದ ಬೇಡಿಕೆಯನ್ನೊಂದಿರುವ 30ರ ಪ್ರಾಯದ ಈ ಬೆಡಗಿಯ ಖಾಸಗಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ವೈರಲ್ ಕೂಡ ಆಗಿದೆ.

Pakistani TikTok star Minahil Malik trends on social media following the leak of a personal video

ಇನ್ನೂ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಮಿನಾಹಿಲ್ ಮಲ್ಲಿಕ್ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಫೆಡರಲ್ ಇನ್ವೆಷ್ಟಿಗೇಷನ್ ಏಜೆನ್ಸಿ { FIA }ಗೆ ದೂರನ್ನು ಕೂಡ ಸಲ್ಲಿಸಿದ್ದಾರೆ. ವೈರಲ್ ವಿಡಿಯೋವನ್ನು ರಿಪೋರ್ಟ್ ಮಾಡುವಂತೆ ಕೂಡ ತಮ್ಮ ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿಕೊಂಡಿದ್ದಾರೆ. ನಕಲಿ ವಿಡಿಯೋಗಳನ್ನು ಹರಿಬಿಟ್ಟು ನನ್ನ ತೇಜೋವಧೆಗೆ ಪ್ರಯತ್ನ ಮಾಡುತ್ತಿರುವವರ ವಿರುದ್ಧ ನಾನು ದೂರು ನೀಡಿದ್ದು ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ಮಿನಾಹಿಲ್ ಮಲ್ಲಿಕ್ ಹೇಳಿದ್ದಾರೆ.

ಇದೆಲ್ಲದರಿಂದ ನನ್ನ ಇಡೀ ಕುಟುಂಬ ಮತ್ತು ನಾನು ತೀವೃ ಖಿನ್ನತೆಗೆ ಒಳಗಾಗಿದ್ದೇವೆ ಎಂದಿರುವ ಮಿನಾಹಿಲ್ ಈ ಕಷ್ಟದ ಸಮಯದಲ್ಲಿ ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಕೈ ಮುಗಿದಿದ್ದಾರೆ. ಮಹಿಳೆಯರ ಬಗ್ಗೆ ಗೌರವ ಇಲ್ಲದ ಅಥವಾ ಮನೆಯಲ್ಲಿ ಹೆಣ್ಣು ಮಕ್ಕಳಿರದವರೇ ಈ ತರಹದ ಕೆಲಸ ಮಾಡಬಹುದು ಎಂದು ಬಿಕ್ಕಿದ್ದಾರೆ. ಇನ್ನೂ ವ್ಯಕ್ತಿಯೊಬ್ಬನ ಜೊತೆ ಸರಸ ಸಲ್ಲಾಪ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆದ ಬೆನ್ನಲ್ಲೇ ಅನೇಕರು ಮಿನಾಹಿಲ್ ಮಲ್ಲಿಕ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಅವಾಚ್ಯವಾಗಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲವೂ ಪ್ರಚಾರಕ್ಕೆ ಮಿನಾಯಿಲ್ ಮಲ್ಲಿಕ್ ಮಾಡುತ್ತಿರುವ ಗಿಮಿಕ್ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಅಭಿಮಾನಿಗಳು ಮಿನಾಹಿಲ್ ಅವರಿಗೆ ಧೈರ್ಯವನ್ನು ತುಂಬುತ್ತಿದ್ದಾರೆ.

ಅಂದ್ಹಾಗೇ ಜುಲೈ 28 1994ರಲ್ಲಿ ಕರಾಚಿಯಲ್ಲಿ ಜನಿಸಿರುವ ಮಿನಾಹಿಲ್ ಮಲ್ಲಿಕ್‌ ಮತ್ತೊಬ್ಬ ಟಿಕ್ ಟಾಕ್ ಸ್ಟಾರ್ ಹ್ಯಾರಿಸ್ ಅಲಿ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ವದಂತಿ ಇದೆ. ಹರಿದಾಡುತ್ತಿರುವ ಈ ವದಂತಿಯನ್ನು ಮಿನಾಹಿಲ್ ಮಲ್ಲಿಕ್ ಮತ್ತು ಹ್ಯಾರಿಸ್ ಅಲಿ ತಳ್ಳಿ ಹಾಕಿಲ್ಲ. ಒಪ್ಪಿಕೊಂಡಿಯೂ ಇಲ್ಲ. ಇನ್ನುಳಿದಂತೆ ಈಗೀಗ ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ಮತ್ತು ನಾಯಕಿಯರದ್ದು ಎನ್ನಲಾದ ಖಾಸಗಿ ವಿಡಿಯೋಗಳು ಹೆಚ್ಚೆಚ್ಚು ಲೀಕ್ ಆಗುತ್ತಿವೆ. ಇದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ
ಮೊನ್ನೆಯಷ್ಟೇ ಕನ್ನಡದ ಕಿರಾತಕ ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದ ಓವಿಯಾ ಅವರ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಆರಂಭದಲ್ಲಿ ನೋಡಿ ಮಜಾ ಮಾಡಿಯೆಂದು ಪ್ರತಿಕ್ರಿಯೆಯನ್ನು ನೀಡಿದ್ದ ಓವಿಯಾ ಆ ನಂತರ ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಓವಿಯಾ, ತಮ್ಮ ಮಾಜಿ ಪ್ರಿಯಕರ ತಾರಿಖ್ ವಿರುದ್ಧ ಆರೋಪ ಮಾಡಿದ್ದಾರೆ. ಆ ವ್ಯಕ್ತಿಯ ನಡಾವಳಿಯಿಂದ ಬೇಸತ್ತು ನಾನು ಆತನಿಂದ ಇತ್ತೀಚೆಗೆ ದೂರವಾಗಿದ್ದೆ ಈ ಕಾರಣಕ್ಕೆ ನನ್ನ ವಿರುದ್ದ ಸೇಡು ತೀರಿಸಿಕೊಳ್ಳಲು ತಾರಿಖ್ ಈ ರೀತಿ ಮಾಡಿದ್ದಾನೆ. ವಿಡಿಯೋವನ್ನು ಮಾರ್ಫ್ ಮಾಡಿ ಅದನ್ನು ನನ್ನದೆಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಈ ಮೂಲಕ ತನ್ನ ಕೋಪ ತೀರಿಸಿಕೊಳ್ಳುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

More from Filmibeat

Read more about: social media viral video leak
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X