»   » SRK ಯಾರು? ಎಂದ ಪಾಕ್ ಯುವಕನಿಗೆ ಶಾರುಖ್ ಫ್ಯಾನ್ಸ್ ಖಡಕ್ ಉತ್ತರ!

SRK ಯಾರು? ಎಂದ ಪಾಕ್ ಯುವಕನಿಗೆ ಶಾರುಖ್ ಫ್ಯಾನ್ಸ್ ಖಡಕ್ ಉತ್ತರ!

Posted By:
Subscribe to Filmibeat Kannada

ಭಾನುವಾರ ಪಾಕಿಸ್ತಾನ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಪಿ ಅಂತಿಮ ಪಂದ್ಯದಲ್ಲಿ ಗೆದ್ದ ನಂತರ, ಪಾಕ್ ಕ್ರಿಕೆಟ್ ಅಭಿಮಾನಿಗಳು ಆಟಗಾರರಿಗೆ ತಮ್ಮ ಪ್ರೀತಿ ತೋರಿಸಿದ್ದಲ್ಲದೇ, ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಗೆ ವಿಶ್ ಮಾಡಿದರು. ಇದೇ ವೇಳೆ ಅಲ್ಲಿನ ಟ್ವಿಟ್ಟರ್ ಬಳಕೆದಾರನೊಬ್ಬ ಸರ್ಫರಾಜ್ ಸುತ್ತ ಅಭಿಮಾನಿಗಳು ನೆರೆದಿರುವ ಫೋಟೋ ದೊಂದಿಗೆ "SRK WHO?" ಎಂದು ಟ್ವೀಟಿಸಿರುವುದು ಶಾರುಖ್ ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ.

Pakistani Twitter user asks who is Shah Rukh Khan, fans from India, Pakistan troll him back

@iUsmanJameel ಟ್ವಿಟ್ಟರ್ ಬಳಕೆದಾರನ ಶಾರುಖ್ ಖಾನ್ ಯಾರು? ಎಂಬ ಟ್ವೀಟ್ ಅನ್ನು ಹಗುರವಾಗಿ ಸ್ವೀಕರಿಸದ ಕಿಂಗ್ ಖಾನ್ ಅಭಿಮಾನಿಗಳು ಭಾರತದವರು ಮಾತ್ರವಲ್ಲದೇ ಪಾಕಿಸ್ತಾನಿ ಶಾರುಖ್ ಅಭಿಮಾನಿಗಳು ಸಹ ಬಾದ್ ಶಾ ನಿಗೆ ಸಪೋರ್ಟ್ ಮಾಡಿದ್ದಾರೆ. ಅಲ್ಲದೇ ಆತನ ಟ್ರೋಲ್ ಅನ್ನೇ ಅಧಿಕವಾಗಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಅಭಿಮಾನಿ ಒಬ್ಬ ಶಾರುಖ್ ನೋಡಲು ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ನೆರೆದಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಶಾರುಖ್ ರಂತ ಬಿಗ್ ಸ್ಟಾರ್ ಗೆ ಯಾರನ್ನು ಹೋಲಿಸುವ ಹಾಗಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇನ್ನೂ ಹಲವರು 'ವರ್ಲ್ಡ್ ಬಿಗ್ಗೆಸ್ಟ್ ಸೂಪರ್ ಸ್ಟಾರ್' ಶಾರುಖ್ ಖಾನ್ ಫ್ಯಾನ್ ಗಳು ಆತನ ಸುತ್ತ ಇರುವ ವಿಡಿಯೋವನ್ನು ಪೋಸ್ಟ್ ಮಾಡಿ ಪಾಕಿಸ್ತಾನಿ ಟ್ಟಿಟ್ಟರ್ ಬಳಕೆದಾರನಿಗೆ ಇನ್ನೊಂದು ಬಾರಿ ಈ ರೀತಿ ಶಾರುಖ್ ಬಗ್ಗೆ ಕಡೆಗಣಿಸಿ ಮಾತನಾಡಬಾರದು ಎಂದು ಶಾರುಖ್ ಬಗೆಗಿನ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.

ಶಾರುಖ್ ಖಾನ್ ಫ್ಯಾನ್ಸ್ ಗಳಿಗೆ ನಿಮ್ಮ ಸರ್ಫರಾಜ್ ಅಹಮ್ಮದ್ ಫ್ಯಾನ್ ಗಳ ಲೈಫ್ ಟೈಮ್ ನ 10 ಪಟ್ಟು ಅಭಿಮಾನಿಗಳನ್ನು ಮಲ್ಟಿಪಲ್ ಮಾಡು ಎಂದು ಸಹ ಪಾಕಿಸ್ತಾನಿ ಟ್ಟಿಟ್ಟರ್ ಬಳಕೆದಾರನಿಗೆ ಕೋಪದಿಂದ ಶಾರುಖ್ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

English summary
Pakistani Twitter user asks who is Shah Rukh Khan, fans from India, Pakistan troll him back.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada