ಸೈಫ್ ಅಲಿ ಖಾನ್ ಮಗನ ಪ್ರೇಮಪಾಶದಲ್ಲಿ ಸಿಲುಕಿದ ಪ್ರಖ್ಯಾತ ಕಿರುತೆರೆ ನಾಯಕಿಯ ಮಗಳು, ಫೋಟೊ ವೈರಲ್...!

ಯಾವುದಾದರೂ ಕಾರ್ಯಕ್ರಮದಲ್ಲಿ ಜೊತೆ ಜೊತೆಯಾಗಿ ಕುಳಿತು ಸೆಲೆಬ್ರೆಟಿಗಳು ಕಿಲ ಕಿಲ ಎಂದು ನಕ್ಕು, ಆ ನಂತರ ಒಂದು ಮೂರು ನಾಲ್ಕು ಸಲ ಜೊತೆ ಜೊತೆಯಾಗಿ ಕಾಣಿಸಿಕೊಂಡರೆ ಮುಗೀತು. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಕಥೆಯನ್ನು ಕೆಲವರು ಹೆಣೆದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಹೀಗಿರುವಾಗ ಒಂದೇ ಸ್ಥಳಕ್ಕೆ ಪ್ರವಾಸ ತೆರಳಿ ಅಲ್ಲಿಂದ ಫೋಟೊ ಹಂಚಿಕೊಂಡರೆ ಅವರ ಸಂಬಂಧದ ಬಗ್ಗೆ ಅನುಮಾನ ಹೆಚ್ಚಾಗದೇ ಇರುತ್ತಾ ? ಇದಕ್ಕೆ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಮತ್ತು ಶ್ವೇತಾ ತಿವಾರಿಯ ಮಗಳು ಪಲಕ್ ತಿವಾರಿ ಅತ್ಯುತ್ತಮ ಉದಾಹರಣೆ.

ಹೌದು, ಅಸಲಿಗೆ ಇಬ್ರಾಹಿಂ ಖಾನ್ ಮತ್ತು ಪಲಕ್ ತಿವಾರಿ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಅನುಮಾನ ಅನೇಕರಿಗಿದೆ. ಇದಕ್ಕೆ ಪೂರಕವಾಗಿ ಇಬ್ಬರು ಜೊತೆ ಜೊತೆಯಲಿ ಅನೇಕ ಕಡೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಕೈ ಹಿಡಿದು ಓಡಾಡಿದ್ದಾರೆ. ಆದರೂ.. ಇವರ ಈ ಪ್ರೇಮ ಕಹಾನಿಯನ್ನು ಅನೇಕರು ಒಪ್ಪಿರಲಿಲ್ಲ. ಯಾಕೆಂದರೆ.. ಎಲ್ಲರಲ್ಲಿಯೂ ಎಲ್ಲಿಯ ಸೈಫ್ ಅಲಿ ಖಾನ್ ಮಗ ಎಲ್ಲಿಯ ಶ್ವೇತಾ ತಿವಾರಿಯ ಮಗಳು ಎನ್ನುವ ಪ್ರಶ್ನೆ ಇತ್ತು. ಇಬ್ಬರ ಆಸ್ತಿ-ಅಂತಸ್ತು ಇವರ ಲವ್ ಸ್ಟೋರಿಗೆ ಅಡ್ಡಿಯಾಗುತ್ತೆ ಎನ್ನುವ ಯೋಚನೆ ಅನೇಕರಲ್ಲಿತ್ತು. ಆದರೆ.. ಈಗ ಇದಕ್ಕೆ ತದ್ವಿರುದ್ದವಾಗಿ ಬೆಳವಣಿಗೆ ನಡೆದಿದೆ. ಸೈಫ್ ಅಲಿ ಖಾನ್ ಮತ್ತು ಪಲಕ್ ಇಬ್ಬರ ಮಾಲ್ಡೀವ್ಸ್ ಪ್ರವಾಸದ ಫೋಟೊಗಳು ವೈರಲ್ ಆಗಿವೆ.

Palak Tiwari and Ibrahim Ali Khan s Sizzling Maldives Vacation Photos Go Viral Spark Dating Rumours

ಹೌದು, ಸೈಫ್ ಅಲಿ ಖಾನ್ ಮತ್ತು ಪಲಕ್ ತಿವಾರಿ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ, ಜೊತೆಯಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳದೇ ಇಬ್ಬರು ಪ್ರತೈಕವಾಗಿ ನಿಂತುಕೊಂಡು ಫೋಟೊ ಕ್ಲಿಕಿಸಿಕೊಂಡು ಫೋಟೊ ತೇಲಿ ಬಿಟ್ಟಿದ್ದಾರೆ. ಜೊತೆಯಲ್ಲಿ ಇಲ್ಲದಿದ್ದರೂ ನೋಡುಗರಿಗೆ ಇಷ್ಟೇ ಸಾಕಿತ್ತು. ಹೀಗಾಗಿಯೇ ಫೋಟೊವನ್ನು ಜೂಮ್ ಹಾಕಿ ಹಾಕಿ ನೋಡುತ್ತಿರುವ ಅನೇಕರು ಯಾಕೆ ಈ ಕಣ್ಣಾ ಮುಚ್ಚಾಲೆ ಆಟ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಯಲ್ಲಿಯೇ ಇದ್ದೀರಾ ಈಗಲಾದರೂ ನಿಮ್ಮ ಸಂಬಂಧವನ್ನು ಅಧಿಕೃತಗೊಳಿಸಿ ಎಂದು ಹೇಳುತ್ತಿದ್ದಾರೆ.

ಅಂದ್ಹಾಗೇ ಶ್ವೇತಾ ಅವರ ಮಗಳು ಪಲಕ್ ಆಗಲಿ ಅಥವಾ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಆಗಲಿ, ಚಿತ್ರರಂಗದಲ್ಲಿ ಇನ್ನೂ ಏನೂ ಸಾಧಿಸಿ ಭೇದಿಸಿಲ್ಲ. ನಿಜಾ. ಪ್ರೇಮ ಕುರುಡು. ಆದರೂ.. ಶ್ವೇತಾ ತಿವಾರಿ ಮತ್ತು ಸೈಫ್ ಅಲಿ ಖಾನ್ ಆಸ್ತಿಯನ್ನು ತಕ್ಕಡಿಯಲ್ಲಿ ತೂಗಿ ಹಾಕಿದರೆ, ಸೈಫ್ ಅಲಿ ಖಾನ್ ಸಂಪತ್ತು ಹೆಚ್ಚು ತೂಗುತ್ತೆ. ಹೀಗಾಗಿಯೇ ಅನೇಕರು ಈಗ ಪಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ದುಂಬಾಲು ಬಿದ್ದಿದ್ದಾರೆ. ಇಬ್ಬರನ್ನೂ ಟ್ರೋಲ್ ಮಾಡುತ್ತಿದ್ದಾರೆ.ಮೊದಲು ಚಿತ್ರರಂಗದಲ್ಲಿ ಏನಾದರೂ ಸಾಧನೆಯನ್ನು ಮಾಡಿ ಆ ನಂತರ ಕುಳಿತು ಯೋಚನೆ ಮಾಡಿ ಎನ್ನುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಪಲಕ್ ತಿವಾರಿಯನ್ನು ನಿಂದಿಸುತ್ತಿದ್ದಾರೆ.

ಇನ್ನುಳಿದಂತೆ ಕೆಲ ದಿನಗಳ ಹಿಂದೆ ಶ್ವೇತಾ ತಿವಾರಿ ತಮ್ಮ ಮಗಳು ಪಲಕ್ ತಿವಾರಿಯ ಈ ಲವ್ ಅಫೇರ್ ಕುರಿತು ಮಾತನಾಡಿದ್ದರು. ಆಕೆ ಇನ್ನೂ ಚಿಕ್ಕ ಹುಡುಗಿ ಆದರೂ ಕೂಡ ದಿನ ಬೆಳಗಾದರೆ ಆಕೆಯ ಹೆಸರನ್ನು ಒಂದಿಲ್ಲೊಂದು ಹುಡುಗನ ಜೊತೆ ಥಳುಕು ಹಾಕುತ್ತಿದ್ಧಾರೆ. ಇದೆಲ್ಲವನ್ನೂ ನನ್ನ ಮಗಳು ಹೇಗೆ ಸಹಿಸಿಕೊಳ್ಳುತ್ತಾಳೆ, ಹೇಗೆ ನಿಭಾಯಿಸುತ್ತಾಳೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಎಂದ ಶ್ವೇತಾ, ಮುಂದೊಂದು ದಿನ ಇವೆಲ್ಲವೂ ಆಕೆಯ ಮಾನಸಿಕ ನೆಮ್ಮದಿಗೆ ಕೊಳ್ಳಿ ಇಡಬಹುದು ಎಂದಿದ್ದರು. ಸದ್ಯಕ್ಕೆ ಬಾಲಿವುಡ್ ಇಬ್ರಾಹಿಂ ಅಲಿ ಖಾನ್ ಮತ್ತು ಪಲಕ್ ತಿವಾರಿ ಕುರಿತು ತುಂಬಾ ತಲೆ ಕೆಡಿಸಿಕೊಂಡಿದೆ. ಚರ್ಚೆ ಮಾಡುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X