ಖ್ಯಾತ ನಿರ್ಮಾಪಕ ಯಶ್ ಚೋಪ್ರಾ ಪತ್ನಿ ಪಮೇಲಾ ಚೋಪ್ರಾ ವಿಧಿವಶ

ಬಾಲಿವುಡ್ ದಂತಕತೆ ನಿರ್ಮಾಪಕ, ನಿರ್ದೇಶಕ ದಿವಂಗತ ಯಶ್ ಚೋಪ್ರಾ ಮಡದಿ ಪಮೇಲಾ ಚೋಪ್ರಾ ನಿಧನರಾಗಿದ್ದಾರೆ. ಗಾಯಕಿಯಾಗಿಯೂ ಪಮೇಲಾ ಚೋಪ್ರಾ ಗುರ್ತಿಸಿಕೊಂಡಿದ್ದರು. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ 15 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು(ಏಪ್ರಿಲ್ 20) ಬೆಳಗ್ಗೆ ಪಮೇಲಾ ಕೊನೆಯುಸಿರೆಳೆದಿದ್ದಾರೆ.

ಪಮೇಲಾ ಚೋಪ್ರಾ ಕೊನೆಯದಾಗಿ ಯಶ್‌ ರಾಜ್‌ ಫಿಲ್ಮ್ಸ್ ಕುರಿತಾದ 'ದಿ ರೊಮ್ಯಾಂಟಿಕ್ಸ್' ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಪತಿ ಯಶ್‌ ಚೋಪ್ರಾ ಹಾಗೂ ಅವರ ಜರ್ನಿ ಕುರಿತು ಮಾತನಾಡಿದ್ದರು. ಈ ಡಾಕ್ಯುಮೆಂಟರಿಯಲ್ಲಿ ಪಮೇಲಾ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಬಗ್ಗೆ ಕೂಡ ಹೇಳಲಾಗಿತ್ತು. 1973ರಲ್ಲಿ ಸಂಸ್ಥೆಯ ಮೊದಲ ಸಿನಿಮಾ 'ದಾಗ್' ರಿಲೀಸ್ ಸಮಯದಲ್ಲಿ ನಡೆದ ಘಟನೆಗಳನ್ನು ನೆನೆಪಿಸಿಕೊಂಡಿದ್ದರು. 1970ರಲ್ಲಿ ಯಶ್ ಚೋಪ್ರಾ ಜೊತೆ ಪಮೇಲಾ ಚೋಪ್ರಾ ಮದುವೆ ನಡೆದಿತ್ತು. ಇವರದ್ದು ಅರೇಂಜ್ಡ್ ಮ್ಯಾರೇಜ್.

Pamela Chopra, the wife of late film maker Yash Chopra, died aged 85 in Mumbai

ಯಶ್‌ ಚೋಪ್ರಾ ಹಾಗೂ ಪಮೇಲಾ ಚೋಪ್ರಾ ದಂಪತಿ ಮಕ್ಕಳು ಆದಿತ್ಯಾ ಚೋಪ್ರಾ ಹಾಗೂ ಉದಯ್ ಚೋಪ್ರಾ. ಇಬ್ಬರು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಗಾಯಕಿಯಾಗಿದ್ದ ಪಮೇಲಾ ತಮ್ಮ ಪತಿಯ ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದರು. 'ಕಬೀ ಕಬೀ' ಸಿನಿಮಾದಿಂದ 'ಮುಜ್‌ಸೇ ದೋಸ್ತಿ ಕರೊಗೆ'ವರೆಗೆ ಕೆಲಸ ಸಿನಿಮಾಗಳ ಹಾಡುಗಳಿಗೆ ದನಿಯಾಗಿದ್ದರು. 1993ರಲ್ಲಿ 'ಐನಾ' ಎನ್ನುವ ಸಿನಿಮಾವನ್ನು ಪಮೇಲಾ ಚೋಪ್ರಾ ಸ್ವತಂತ್ರವಾಗಿ ನಿರ್ಮಿಸಿದ್ದರು.

Pamela Chopra, the wife of late film maker Yash Chopra, died aged 85 in Mumbai

ತಮ್ಮ ಪತಿಯ ಸಿನಿಮಾಗಳಿಗೆ ಬರಹಗಾರ್ತಿಯಾಗಿಯೂ ಸಹಾಯ ಮಾಡಿದ್ದರು. 'ದಿಲ್ ತೋ ಪಾಗಲ್ ಹೇ' ಚಿತ್ರದ ಹಾಡಿನ ಸಣ್ಣ ಝಲಕ್‌ನಲ್ಲಿ ಪತಿ ಜೊತೆ ತೆರೆಮೇಲೆ ಕಾಣಿಸಿಕೊಂಡಿದ್ದರು. ಪಮೇಲಾ ಚೋಪ್ರಾ ಅವರ ಅಂತ್ಯಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಈಗಾಗಲೇ ಕುಟುಂಬದ ಆಪ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

More from Filmibeat

English summary
Pamela Chopra, the wife of late film maker Yash Chopra, died aged 85 in Mumbai. Pamela Chopra was last seen in the Netflix documentary 'The Romantics'. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X