ಖ್ಯಾತ ಯುವನಟನಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಒತ್ತಡದ ಬದುಕು.. ಜೀವನಶೈಲಿ.. ಆಹಾರ.. ಮುಂತಾದ ಕಾರಣಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇವಲ ಹಾಸನ ಜಿಲ್ಲೆಯಲ್ಲಿಯೇ ಕೇವಲ 40 ದಿನಗಳಲ್ಲಿ 20ಕ್ಕೂ ಹೆಚ್ಚಿನ ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ‌ ಮಾಡಿವೆ. ಇನ್ನೂ ನಮ್ಮ ದೇಶದಲ್ಲಿ ಪ್ರತಿ ವರ್ಷ 25ಲಕ್ಷಕ್ಕೂ ಹೆಚ್ಚಿನ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಅದರಲ್ಲೂ ಯುವಜನರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ.

ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಬಾಲಿವುಡ್ ನ ಉದಯೋನ್ಮುಖ ನಟ ಆಸಿಫ್ ಖಾನ್ ಹೃದಯಾಘಾತಕ್ಕೊಳಗಾಗಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೌದು.. ಆಸಿಫ್ ಖಾನ್. ಇತ್ತೀಚಿನ ದಿನಗಳಲ್ಲಿ ಹೆಸರು.. ಹಣ.. ಕೀರ್ತಿ ಗಳಿಸುತ್ತಿದ್ದ ಆಕ್ಟರ್.

Panchayat Star Aasif Khan Suffers Heart Attack Life Is Too Short - Hospitalized Recovering

''ದಿ ವೈರಲ್ ಫೀವರ್''.. ''ಮಿರ್ಜಾಪುರ್''.. ಸೇರಿ ಹಲವು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡು ಜನ ಮನ ಗೆದ್ದ ಪ್ರತಿಭಾವಂತ. ಇವರ ಟ್ಯಾಲೆಂಟ್‌ಗೆ ''ಪಂಚಾಯತ್'' ಮತ್ತೊಂದು ಉದಾಹರಣೆ. ''ಪಂಚಾಯತ್'' ವೆಬ್ ಸರಣಿಗಳ ಮೂಲಕ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದ ಆಸಿಫ್ ಖಾನ್‌ ''ಪಂಚಾಯತ್''ನ ನಾಲ್ಕನೇ ಭಾಗಕ್ಕೆ ಸಿಕ್ಕ ಜನ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದರು. ಚಿತ್ರ ಗೆದ್ದ ಸಂಭ್ರಮದಲ್ಲಿದ್ದರು.

ಹೀಗಿರುವಾಗ ಆಸಿಫ್ ಖಾನ್‌ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಆಸಿಫ್ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಈ ಆರೋಗ್ಯ ಸಮಸ್ಯೆಯ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿಯನ್ನು ಕೂಡ ಹಂಚಿಕೊಂಡಿರುವ ಆಸಿಫ್ ಖಾನ್ ಜೀವನ ತುಂಬಾ ಚಿಕ್ಕದು ಬೇರೆಯವರ ನಗುವಿಗೆ ಕಾರಣವಾಗಿರಿ, ಪ್ರೀತಿಯನ್ನು ಹಂಚಿ ಎಂದು ಬರೆದುಕೊಂಡಿದ್ದಾರೆ.

panchayat-star-aasif-khan-suffers-heart-attack-life-is-too-short-hospitalized-recovering

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಆಸಿಫ್ ಖಾನ್, ಕಳೆದ 36 ಗಂಟೆಗಳಿಂದ ನಾನು ಎದುರಿಸಿದ ಸಮಸ್ಯೆ ಮತ್ತು ಸವಾಲುಗಳನ್ನು ನೋಡಿದಾಗ ಜೀವನ ತುಂಬಾನೇ ಚಿಕ್ಕದು ಎಂಬ ಭಾವನೆ ಬಂತು ಎಂದು ಹೇಳಿದ್ದಾರೆ. ಬದುಕಿನ ಒಂದು ದಿನವನ್ನೂ ಕೂಡ ಯಾರು ಲಘುವಾರಿ ಪರಿಗಣಿಸಬೇಡಿ. ಒಂದು ಕ್ಷಣದಲ್ಲಿ ಎಲ್ಲವೂ ಬದಲಾಗಬಹುದು ಎಂದಿರುವ ಆಸಿಫ್ ಖಾನ್ ಇಂದು ನೀವೇನಾಗಿದ್ದೀರಿ ಮತ್ತು ನಿಮಗಿರುವ ಎಲ್ಲದರ ಬಗ್ಗೆ ಕೃತಜ್ಞರಾಗಿರಿ ಎಂದು ಹೇಳಿದ್ಧಾರೆ. ನಿಮ್ಮ ಆತ್ಮೀಯರು ಅಥವಾ ಆಪ್ತರ ಬಗ್ಗೆ ಕಾಳಜಿ ಇರಲಿ, ಅವರ ಬೆಂಬಲಕ್ಕೆ, ಅವರ ನಗುವಿಗೆ ಕಾರಣರಾಗಿ ಎಂದಿರುವ ಆಸಿಫ್ ಖಾನ್ ಜೀವನ ಅನ್ನೋದು ಒಂದು ಉಡುಗೊರೆ, ನಾವು ದೇವರ ಆಶೀರ್ವಾದದಿಂದ ಇದ್ದೇವೆ ಎಂದು ಹೇಳಿದ್ದಾರೆ.

ಮುಂದುವರೆದು ಕಳೆದ ಕೆಲ ಗಂಟೆಗಳಿಂದ ನಾನು ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ, ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದಿರುವ ಆಸಿಫ್ ಖಾನ್, ನಾನು ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಆರೋಗ್ಯ ಸುಧಾರಿಸುತ್ತಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿಮ್ಮ ಎಲ್ಲಾ ಪ್ರೀತಿ, ಹಾರೈಕೆಗೆ ಆಭಾರಿಯಾಗಿದ್ದೇನೆ. ನಿಮ್ಮ ಬೆಂಬಲ ನನ್ನ ಶಕ್ತಿ ಇಮ್ಮಡಿಗೊಳಿಸಿದೆ. ಶೀಘ್ರದಲ್ಲೇ ಮತ್ತೆ ನಾನು ನಿಮ್ಮೆದುರು ಬರುತ್ತೇನೆ ಎಂದು ಹೇಳಿರುವ ಆಸಿಫ್ ಖಾನ್ ನಿಮ್ಮ ಪ್ರಾರ್ಥನೆ, ಪ್ರೀತಿ ಹೀಗೆ ಇರಲಿ ಎಂದು ಹೇಳಿದ್ದಾರೆ.

ಅಂದ್ಹಾಗೇ ಆಸಿಫ್ ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಬಂದವರು. 2011ರಲ್ಲಿ ಬಂದ ಸಲ್ಮಾನ್ ಖಾನ್ ಅಭಿನಯದ 'ರೆಡಿ' ಮತ್ತು 2012ರಲ್ಲಿ ಬಂದ ಹೃತಿಕ್ ರೋಷನ್ ಮತ್ತು ಸಂಜಯ್ ದತ್ ಅಭಿನಯದ 'ಅಗ್ನಿಪಥ್‌' ಚಿತ್ರದಲ್ಲಿ ಚಿಕ್ಕ ಪಾತ್ರಕ್ಕೆ ಆಸಿಫ್ ಬಣ್ಣ ಹಚ್ಚಿದ್ದರು. ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್ ಏಕ್ ಪ್ರೇಮ ಕಥಾ' ಇವರ ಬದುಕಿಗೆ ತಿರುವು ನೀಡಿತು. ಆ ನಂತರ 'ಪಾಗ್ಲೈಟ್'.. 'ಕಾಕುಡಾ' ಸೇರಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ ಆಸಿಫ್ ಮತ್ತು ಬದುಕು ವೆಬ್ ಸರಣಿಗಳಿಂದ ಸಂಪೂರ್ಣವಾಗಿ ಬದಲಾಯ್ತು.

More from Filmibeat

English summary
Aasif Khan heart attack news: Panchayat actor hospitalized, recovering well. Read his heartfelt message from the hospital bed. Latest health update on Aasif Khan.
Read more about: heart attack actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X