ಬಾಲಿವುಡ್ ಮಂದಿಯ ಗಮನ ಸೆಳೆದ 'ಪಾಣಿಪತ್' ಫಸ್ಟ್ ಲುಕ್
ಹಿಂದಿ ಚಿತ್ರರಂಗದಲ್ಲಿ ಈಗ ಐತಿಹಾಸಿಕ ಸಿನಿಮಾಗಳು ಹೆಚ್ಚಾಗುತ್ತಿದೆ. ಇತ್ತೀಚಿಗೆ 'ಪದ್ಮಾವತ್' ಸಿನಿಮಾ ಬಾಲಿವುಡ್ ನಲ್ಲಿ ದೊಡ್ಡ ಸಕ್ಸಸ್ ಕಂಡ ಐತಿಹಾಸಿಕ ಸಿನಿಮಾವಾಗಿತ್ತು. ಆ ಬಳಿಕ ಈಗ ಹೊಸದಾಗಿ 'ಪಾಣಿಪತ್' ಸಿನಿಮಾ ಬರುತ್ತಿದೆ. ಈ ಸಿನಿಮಾದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಐತಿಹಾಸಿಕ ಸಿನಿಮಾಗಳನ್ನು ಮಾಡುವುದಲ್ಲಿ ಮಾಸ್ಟರ್ ಆಗಿರುವ ನಿರ್ದೇಶಕ ಅಶುತೋಷ್ ಗೋವರಿಕರ್ ಅವರ ಕನಸಿನ ಸಿನಿಮಾ ಇದಾಗಿದೆ. ಈ ಹಿಂದೆ ಮೂಹೆಂಜು 'ದಾರೊ' ಸಿನಿಮಾ ಮಾಡಿದ್ದ ಅಶುತೋಷ್ ಮತ್ತೆ ದೊಡ್ಡ ಸಿನಿಮಾಗೆ ಕೈ ಹಾಕಿದ್ದಾರೆ. ಸಿನಿಮಾದಲ್ಲಿ ಅರ್ಜುನ್ ಕಪೂರ್ ಮತ್ತು ಸಂಜಯ್ ದತ್ ನಟಿಸಲಿದ್ದಾರೆ. ನಾಯಕಿಯಾಗಿ ಕೃತಿ ಸಲೂನ್ ಕಾಣಿಸಿಕೊಳ್ಳಲಿದ್ದಾರೆ. ಹೆಸರೇ ಹೇಳುವಂತೆ ಮೂರನೇ ಪಾಣಿಪತ್ ಕದನದ ಕಥೆಯ ಸಿನಿಮಾ ಇದಾಗಿದೆ.
ನಟ ಅರ್ಜುನ್ ಕಪೂರ್ ಟ್ವಿಟ್ಟರ್ ಖಾತೆಯಲ್ಲಿ ಸಿನಿಮಾದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಜೊತೆಗೆ ''ಮರಾಠ ಯೋಧರ ಶೌರ್ಯವನ್ನು ತೆರೆಮೇಲೆ ತರಲು ಹೆಮ್ಮೆಯಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ. ಅರ್ಜುನ್ ಕಪೂರ್ ಪಾತ್ರದ ರೀತಿ ಕೃತಿ ಪಾತ್ರವೂ ತುಂಬ ಮುಖ್ಯವಾಗಿದೆಯಂತೆ. ನೋಡಲು ಸುಂದರ ಮತ್ತು ಅದ್ಬುತ ನಟನೆ ಎರಡು ಇರುವ ನಟಿ ಬೇಕು ಎಂದು ಕೃತಿ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕ ಅಶುತೋಷ್. ಈ ರೀತಿಯ ಸಿನಿಮಾದ ಚಿತ್ರೀಕರಣ ಮಾಡುವುದಕ್ಕೆ ಸಾಕಷ್ಟು ಸಮಯ ಬೇಕಾಗುವುದರಿಂದ ಚಿತ್ರದ ಬಿಡುಗಡೆಯನ್ನು ಮುಂದಿನ ವರ್ಷದ ಡಿಸೆಂಬರ್ 6ಕ್ಕೆ ಫಿಕ್ಸ್ ಮಾಡಲಾಗಿದೆ.


Click it and Unblock the Notifications











