ನೋಡಬೇಕಾದವರಿಗೆ ಸಿನಿಮಾ ತಲುಪುವುದಿಲ್ಲ: OMG 2 ಬಿಡುಗಡೆ ಮುನ್ನವೇ ಪಂಕಜ್ ತ್ರಿಪಾಠಿ ನಿರಾಶೆ!

ಬಾಲಿವುಡ್‌ನ ಓ ಮೈ ಗಾಡ್ 2 ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ಬಿಡುಗಡೆಗೂ ಮುನ್ನವೇ ಸಿನಿಮಾದ ಪ್ರಮುಖ ಪಾತ್ರಧಾರಿ ಪಂಕಜ್ ತ್ರಿಪಾಠಿ ತಮ್ಮ ಸಿನಿಮಾ ನೋಡಬೇಕಾದವರಿಗೆ ನೋಡಲು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾಗೆ ಸೆನ್ಸಾರ್ ಬೋರ್ಡ್ A ಪ್ರಮಾಣಪತ್ರ ನೀಡಿದೆ. ಇದರಿಂದ ಹೆಚ್ಚು ಜನರಿಗೆ ಸಿನಿಮಾ ತಲುಪುವುದಿಲ್ಲ ಎಂಬುದು ಚಿತ್ರತಂಡದ ಮಾತು.

ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಕಜ್ ತ್ರಿಪಾಠಿ, ಈ ಚಿತ್ರವು 12 ರಿಂದ 17 ವರ್ಷ ವಯಸ್ಸಿನವರಿಗೆ ಮೀಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಓ ಮೈ ಗಾಡ್‌ಗೆ ಎ ಪ್ರಮಾಣ ಪತ್ರ ಸಿಕ್ಕಿರುವ ಕಾತಣ ಈ ವಯಸ್ಸಿನವರು ಸಿನಿಮಾ ನೋಡಲು ಸಾಧ್ಯವಿಲ್ಲ. ಅವರಿಗಾಘಿ ಮಾಡಿರುವ ಚಿತ್ರ ಅವರಿಗೆ ತಲುಪುವುದಿಲ್ಲ ಎಂದು ನಿರಾಸೆ ಹೊರಹಾಕಿದ್ದಾರೆ.

Pankaj Tripathi has expressed his disappointment over A certificate to OMG 2

ಅಮಿತ್ ರೈ ನಿರ್ದೇಶನದ, OMG 2 ನಲ್ಲಿ ಯಾಮಿ ಗೌತಮ್ ಮತ್ತು ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಆಗಸ್ಟ್ 11 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ಪಂಕಜ್ ತ್ರಿಪಾಠಿ ಚಿತ್ರಕ್ಕೆ ಎ ಪ್ರಮಾಣಪತ್ರ ನೀಡಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಎ ಪ್ರಮಾಣಪತ್ರ, ಪಂಕಜ್ ತ್ರಿಪಾಠಿಗೆ ನಿರಾಸೆ

"ನಮ್ಮ ಸಿನಿಮಾಗೆ ಎ ಸರ್ಟಿಫಿಕೇಟ್ ಸಿಕ್ಕಾಗ ನಮಗೆ ಆಶ್ಚರ್ಯವಾಯಿತು. ಏಕೆಂದರೆ ಚಿತ್ರ ಮಾಡುವಾಗ, ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಗುತ್ತದೆಯೇ ಅಥವಾ ಇಲ್ಲವೇ ಎಂದು ನಮಗೆ ತಿಳಿದಿರುತ್ತದೆ. ಉದಾಹರಣೆಗೆ ಗ್ಯಾಂಗ್ಸ್ ಆಫ್ ವಾಸೇಪುರ್ ಮಾಡುವಾಗ, ನಮಗೆ ತಿಳಿದಿತ್ತು. ಇದು ವಯಸ್ಕರಿಗೆ ಮಾತ್ರ ಪ್ರಮಾಣಪತ್ರವನ್ನು ಪಡೆಯುತ್ತದೆ ಎಂದು. ಆದರೆ, ನಾವು OMG 2 ಶೂಟಿಂಗ್ ಮಾಡುವಾಗ, ಇದಕ್ಕೆ ಈ ಸರ್ಟಿಫಿಕೆಟ್ ಸಿಗುತ್ತದೆ ಎಂದು ನಾವು ಊಹಿಸಿರಲಿಲ್ಲ" ಎಂದಿದ್ದಾರೆ.

"ನನಗೆ ಇದು ಆಶ್ಚರ್ಯ ಉಂಟು ಮಾಡಿದೆ. ಏಕೆಂದರೆ 12-17 ವರ್ಷ ವಯಸ್ಸಿನವರನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಆದರೆ, ಅವರೇ ಈ ಚಲನಚಿತ್ರವನ್ನು ನೋಡಲು ಸಾಧ್ಯವಿಲ್ಲ. ಹೀಗಾಗಿ ನನಗೆ ಸ್ವಲ್ಪ ನಿರಾಶೆಯಾಗಿದೆ. ಸೆನ್ಸಾರ್ ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆಯನ್ನು ಕಾಯ್ದೆಯ U/A ಮತ್ತು A ವರ್ಗಗಳ ನಡುವೆ ಏನಾದರೂ ಒಂದು ವ್ಯತ್ಯಾಸ ಇರಬೇಕು. ಅವರು ಸೆನ್ಸಾರ್ ಪ್ರಮಾಣೀಕರಣದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಾರೆ ಎಂದು ನಾನು ಆಶಿಸುತ್ತೇನೆ. ಆದರೂ. ನಾವು ಯಾರಿಗಾಗಿ ಸಿನಿಮಾ ಮಾಡಿದ್ದೇವೆಯೋ ಅವರೇ ಅದನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂಬುದು ಬೇಸರದ ಸಂಗತಿ" ಎಂದು ಹೇಳಿದ್ದಾರೆ.

Pankaj Tripathi has expressed his disappointment over A certificate to OMG 2

ಬಾಕ್ಸ್ ಆಫೀಸ್‌ನಲ್ಲಿ OMG 2 ಮತ್ತು ಗದರ್ 2 ಘರ್ಷಣೆ

ಪ್ರಚಾರ ಸಮಾರಂಭದಲ್ಲಿ ಮಾತನಾಡಿರುವ ಯಾಮಿ ಗೌತಮ್, ಸನ್ನಿ ಡಿಯೋಲ್ ಅವರ ಗದರ್ 2 ಜೊತೆಗೆ OMG 2 ಬಿಡುಗಡೆಯಾಗುತ್ತಿದ್ದು, ಎರಡು ಸಿನಿಮಾಗಳ ಬಾಕ್ಸ್ ಆಫೀಸ್ ಘರ್ಷಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಗದರ್ ಏಕ್ ಪ್ರೇಮ್ ಕಥಾದಿಂದ ಎಲ್ಲರಿಗಿಂತಲೂ ಸನ್ನಿ ಡಿಯೋಲ್ ಅವರ ದೊಡ್ಡ ಅಭಿಮಾನಿ ನಾನು ಎಂದು ಹೇಳಿದ್ದಾರೆ.

ಗದರ್ 2 ಗೆ ಶುಭ ಹಾರೈಸುತ್ತಾ, "ಗದರ್ 2 ತನ್ನದೇ ಆದ ಪ್ರೇಕ್ಷಕರನ್ನು ಹೊಂದಿದೆ, ಬಮ್ಮ ಸಿನಿಮಾ ನಮ್ಮದೇ ಆದ ಪ್ರೇಕ್ಷಕರನ್ನು ಹೊಂದಿದೆ. ಪ್ರೇಕ್ಷಕರು ಎರಡೂ ಚಿತ್ರಗಳನ್ನು ನೋಡುತ್ತಾರೆ. ಇತ್ತೀಚಿನ ಎರಡು ಹಾಲಿವುಡ್ ಚಿತ್ರಗಳು (ಬಾರ್ಬಿ ಮತ್ತು ಓಪನ್‌ಹೈಮರ್) ಒಂದೇ ದಿನದಲ್ಲಿ ಬಿಡುಗಡೆಯಾದಂತೆಯೇ ಇದು ಕೂಡ. ಅಲ್ಲಿ ಎರಡು ಸಿನಿಮಾಗಳು ಯಶಸ್ವಿಯಾಗಿವೆ. ಇಲ್ಲಿಯೂ ಹಾಗೆ ಆಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಓ ಮೈ ಗಾಡ್ 2 ಚಿತ್ರತಂಡ UA ಪ್ರಮಾಣಪತ್ರವನ್ನು ಬಯಸಿದ್ದರು, ಆದರೆ ವಾರಗಳ ನಂತರ A ಪ್ರಮಾಣಪತ್ರವನ್ನು ನೀಡಲಾಯಿತು. ಇದಕ್ಕೆ ಆದಿಪುರುಷ್ ಸಿನಿಮಾ ಕಾರಣ ಎನ್ನಲಾಗಿದೆ. ಆದಿಪುರುಷ್ ಬಿಡುಗಡೆಯ ನಂತರ ಎದುರಿಸಿದ ಹಿನ್ನಡೆಯಿಂದಾಗಿ OMG 2 ಅನ್ನು ವಿಮರ್ಶಿಸುವಾಗ CBFC ಹೆಚ್ಚು ಜಾಗರೂಕವಾಗಿ ಹೆಜ್ಜೆಯಿಡುತ್ತಿದೆ ಎಂದು ವರದಿಗಳು ಹೇಳಿವೆ.

More from Filmibeat

English summary
OMG 2 release: Actor Pankaj Tripathi has expressed his disappointment over A certificate to his upcoming film OMG 2. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X