For Quick Alerts
  ALLOW NOTIFICATIONS  
  For Daily Alerts

  ಕೋವಿಡ್-19 ಲಸಿಕೆ ಪಡೆದ ಬೆನ್ನಲ್ಲೇ ನಟ ಪರೇಶ್ ರಾವಲ್ ಗೆ ಕೊರೊನಾ ಪಾಸಿಟಿವ್

  |

  ಬಾಲಿವುಡ್ ನ ಖ್ಯಾತ ನಟ ಪರೇಶ್ ರಾವಲ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಪರೇಶ್ ರಾವಲ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.

  ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ತಿಳಿಸಿರುವ ಪರೇಶ್, 'ದುರದೃಷ್ಟವಶಾತ್ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಕಳೆದ 10 ದಿನಗಳಿಂದ ನನ್ನ ಜೊತೆ ಸಂಪರ್ಕಕ್ಕೆ ಬಂದವರೆಲ್ಲ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ' ಎಂದು ಟ್ವೀಟ್ ಮಾಡಿದ್ದಾರೆ.

  'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್

  ಪರೇಶ್ ರಾವಲ್ ಇತ್ತೀಚಿಗಷ್ಟೆ ಕೊರೊನಾ ಲಸಿಕೆ ಪಡೆದಿದ್ದರು. ಮಾರ್ಚ್ 9ರಂದು ಲಸಿಕೆ ಹಾಕಿಸಿಕೊಂಡಿದ್ದ ಬಗ್ಗೆ ಪರೇಶ್ ರಾವಲ್ ಫೋಟೋ ಶೇರ್ ಮಾಡಿದ್ದರು. ಸಲಿಕೆ ಪಡೆದ ಬೆನ್ನಲ್ಲೇ ಪರೇಶ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

  ಪರೇಶ್ ರಾವಲ್ ಶೀಘ್ರ ಗುಣಮುಖರಾಗಲಿ ಎಂದು ಬಾಲಿವುಡ್ ಸ್ಟಾರ್ ವಿಶ್ ಮಾಡುತ್ತಿದ್ದಾರೆ. ಅನುಪಮ್ ಖೇರ್, ರಣವೀರ್ ಶೋರೆ ಮತ್ತು ರಾಹುಲ್ ಧೋಲಾಕಿಯಾ ಸೇರಿದಂತೆ ಅನೇಕರು ಬೇಗ ಗುಣಮುಖಕ್ಕೆ ಹಾರೈಸುತ್ತಿದ್ದಾರೆ. ದೇಶದಾದ್ಯಂತ ಕೊರೊನಾ ಎರಡನೇ ಅಲೆ ಶುರುವಾಗಿದೆ.

  Kangana Ranaut ಗೂ ಮುಂಚೆ ಹೆಚ್ಚು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿಯರು ಯಾರ್ಯಾರು? | Filmibeat Kannada

  ಎರಡನೇ ಅಲೆ ಶುರುವಾದ ಬಳಿಕ ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲಿದೆ. ಲಾಕ್ ಡೌನ್ ಬಳಿಕ ಸಿನಿಮಾರಂಗ ಸಕ್ರೀಯವಾಗಿದ್ದು, ಶೂಟಿಂಗ್, ಪ್ರಮೋಷನ್ ಅಂತ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳು ಜೋರಾಗುತ್ತಿರುವ ಬೆನ್ನಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

  English summary
  Paresh Rawal tests positive for Corona after taking the first dose of vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X