For Quick Alerts
  ALLOW NOTIFICATIONS  
  For Daily Alerts

  ರಿಷಿ ಕಪೂರ್ ಅರ್ಧಕ್ಕೆ ಬಿಟ್ಟು ಹೋದ ಪಾತ್ರ ಮುಂದುವರಿಸಲಿದ್ದಾರೆ ಪರೇಶ್ ರಾವಲ್

  |

  ಬಾಲಿವುಡ್ ಸೂಪರ್ ಸ್ಟಾರ್ ರಿಷಿ ಕಪೂರ್ ನಟಿಸಿದ್ದ ಕೊನೆಯ ಚಿತ್ರ 'ಶರ್ಮಾಜಿ ನಾಮ್‌ಕೀನ್' ಚಿತ್ರಮಂದಿರದಲ್ಲೇ ಬಿಡುಗಡೆಯಾಗಲಿದೆ. ರಿಷಿ ಕಪೂರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 4 ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

  ಈ ಕುರಿತು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ''ಶರ್ಮಾಜಿ ನಾಮ್‌ಕೀನ್ ಸಿನಿಮಾದಲ್ಲಿ ರಿಷಿ ಕಪೂರ್ ಅವರ ಪಾತ್ರವನ್ನು ಪರೇಶ್ ರಾವಲ್ ಮುಂದುವರಿಸಲಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 4, 2021ರಲ್ಲಿ ತೆರೆಗೆ ಬರಲಿದೆ'' ಎಂದು ತಿಳಿಸಿದ್ದಾರೆ.

  ಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟ

  ಹೌದು, 'ಶರ್ಮಾಜಿ ನಾಮ್‌ಕೀನ್' ಚಿತ್ರೀಕರಣ ಇನ್ನು ಬಾಕಿಯಿದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಿ ಕಪೂರ್ ಅವರ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಬಾಕಿ ಉಳಿದಿರುವ ಚಿತ್ರೀಕರಣವನ್ನು ಪರೇಶ್ ರಾವಲ್ ಮುಂದುವರಿಸಲಿದ್ದಾರಂತೆ.

  'ಶರ್ಮಾಜಿ ನಾಮ್‌ಕೀನ್' ಸಿನಿಮಾದಲ್ಲಿ ಜೂಹಿ ಚಾವ್ಲಾ ಮತ್ತು ಗುಫಿ ಪೇಂಟಲ್ ಜೊತೆ ರಿಷಿ ಕಪೂರ್ ನಟಿಸಿದ್ದರು. ಈ ಚಿತ್ರವನ್ನು ಹಿತೇಶ್ ಭಾಟಿಯಾ ನಿರ್ದೇಶಿಸುತ್ತಿದ್ದಾರೆ. ಫರಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಸಿನಿಮಾ ನಿರ್ಮಿಸಿದೆ.

  ಅಂಬರೀಶ್ ಕೈಲಿ ಏಟು ತಿಂದಿದ್ದರು ನಟ ರಿಶಿ ಕಪೂರ್!ಅಂಬರೀಶ್ ಕೈಲಿ ಏಟು ತಿಂದಿದ್ದರು ನಟ ರಿಶಿ ಕಪೂರ್!

  BMC ನೋಟೀಸ್ ಗೆ ತಕ್ಕ ಉತ್ತರ ನೀಡ್ತಾರಾ Sonu Sood | Filmibeat Kannada

  ಅಂದ್ಹಾಗೆ, ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ ಶರ್ಮಾಜಿ ನಾಮ್‌ಕೀನ್ ಶೂಟಿಂಗ್ ಸ್ಥಗಿತಗೊಂಡಿತ್ತು. ಈ ನಡುವೆ ರಿಷಿ ಕಪೂರ್ ಅನಾರೋಗ್ಯದ ಕಾರಣ ಮೃತಪಟ್ಟರು. ಏಪ್ರಿಲ್ 30, 2020ರಲ್ಲಿ ಕೊನೆಯುಸಿರೆಳೆದಿದ್ದರು.

  English summary
  Late actor Rishi Kapoor's last film Sharmaji Namkeen is pending, Paresh Rawal has agreed to complete the remainder of the film in the same role. The film will release on 4 Sept 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X