ಮದುವೆ ನಂತರ ಭಯ ಹುಟ್ಟಿಸೋಕೆ ಬಂದ ಅನುಷ್ಕಾ ಶರ್ಮಾ
ನಟಿ ಅನುಷ್ಕಾ ಶರ್ಮಾ ಮದುವೆಯ ನಂತರ ಈಗ ಭಯ ಹುಟ್ಟಿಸುತ್ತಿದ್ದಾರೆ. ಅಂದರೆ ಅನುಷ್ಕಾ ನಟನೆಯ ಹೊಸ ಹಾರರ್ ಸಿನಿಮಾ 'ಪರಿ' ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದೆ.
ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸಿನಿಮಾದ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. 'ಪರಿ' ಒಂದು ಪಕ್ಕಾ ಹಾರರ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದೊಂದು ಕಾಲ್ಪನಿಕ ಕಥೆ ಆಗಿದೆ. ಸಿನಿಮಾದಲ್ಲಿ ಅನುಷ್ಕಾ ಲುಕ್ ಮತ್ತು ಅವರ ಅಭಿನಯ ನೋಡುಗರಿಗೆ ಭಯ ಹುಟ್ಟಿಸುತ್ತದೆ. 52 ಸೆಕೆಂಡ್ ಇರುವ ಟೀಸರ್ ನ ಕ್ಷಣ ಕ್ಷಣ ರೋಚಕವಾಗಿದೆ.
ಇನ್ನೊಂದು ವಿಶೇಷ ಅಂದರೆ ವಿರಾಟ್ ಕೊಹ್ಲಿ ಕೂಡ ಪ್ರೀತಿಯ ಪತ್ನಿಯ ಸಿನಿಮಾದ ಟೀಸರ್ ಅನ್ನು ಅವರ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಟೀಸರ್ ನೋಡಿ ಖುಷಿ ಪಟ್ಟು 'ಲವ್ ಇಟ್' ಎಂದು ಬರೆದುಕೊಂಡಿದ್ದಾರೆ.

ಉಳಿದಂತೆ, 'ಪರಿ' ಚಿತ್ರದಲ್ಲಿ ಅನುಷ್ಕಾ ಜೊತೆಗೆ ರಜತ್ ಕಪೂರ್ ಮತ್ತು ಪರಂಬ್ರತ್ತ ಚಟರ್ಜೀ ನಟಿಸಿದ್ದಾರೆ. ಸಿನಿಮಾವನ್ನು ಪ್ರೊಸಿಟ್ ರಾಯ್ ನಿರ್ದೇಶನ ಮಾಡಿದ್ದು ಚಿತ್ರದ ನಿರ್ಮಾಣದಲ್ಲಿ ಅನುಷ್ಕಾ ಕೂಡ ಕೈ ಜೋಡಿಸಿದ್ದಾರೆ. ಅಂದಹಾಗೆ, ಈ ಸಿನಿಮಾ ಮಾರ್ಚ್ 2 ಕ್ಕೆ ರಿಲೀಸ್ ಆಗಲಿದೆ.


Click it and Unblock the Notifications











