ಮತ್ತು ಬರಿಸಿ ಅಶ್ಲೀಲ ವಿಡಿಯೋ ಚಿತ್ರಿಸಿಕೊಂಡಿದ್ದಾರೆ: ಮಾಜಿ ಮಿಸ್ ಇಂಡಿಯಾ ಆರೋಪ

By ಫಿಲ್ಮೀಬೀಟ್ ಡೆಸ್ಕ್‌

ಮುಂಬೈನ ಸಿನಿಮಾ ನಿರ್ಮಾಣ ಸಂಸ್ಥೆಯ ವಿರುದ್ಧ ಮಾಜಿ ಮಿಸ್ ಇಂಡಿಯಾ ಯೂನಿವರ್ಸ್‌ ಒಬ್ಬರು ಬಹು ಗಂಭೀರ ಆರೋಪವನ್ನು ಮಾಡಿದ್ದಾರೆ.

2019ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ಗೆದ್ದಿದ್ದ ಪರಿ ಪಾಸ್ವಾಲ್ ಅಲಿಯಾಸ್ ಪರಿ, ಮುಂಬೈನ ಸಿನಿಮಾ ನಿರ್ಮಾಣ ಸಂಸ್ಥೆಯೊಂದಕ್ಕೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೇಳಿಕೊಂಡು ಹೋಗಿದ್ದಾಗ ನನಗೆ ತಂಪು ಪಾನೀಯದಲ್ಲಿ ಮತ್ತು ಬರುವ ವಸ್ತು ಹಾಕಿ ಮತ್ತು ಬರುವಂತೆ ಮಾಡಿ ನನ್ನ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಿಸ್ ಇಂಡಿಯಾ ಯೂನಿವರ್ಸ್ ಆಗಿ ಅವಕಾಶಕ್ಕಾಗಿ ಮುಂಬೈಗೆ ಬಂದಾಗ ಈ ಘಟನೆ ನಡೆದಿದೆ ಎಂದಿರುವ ಅವರು ಪ್ರೊಡಕ್ಷನ್ ಹೌಸ್‌ನ ಹೆಸರು ಬಹಿರಂಗಪಡಿಸಿಲ್ಲ. ಘಟನೆ ನಡೆದಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ ಆದರೆ ಅದರಿಂದ ನನಗೆ ನ್ಯಾಯ ಸಿಗಲಿಲ್ಲ ಎಂದಿದ್ದಾರೆ ಪರಿ ಪಾಸ್ವಾನ್.

Pari Paswam Did Serious Allegations Against A Movie Production House

''ಅಮಾಯಕ ಯುವತಿಯರನ್ನು ಬಲೆಗೆ ಹಾಕಿಕೊಂಡು ಅಶ್ಲೀಲ ವಿಡಿಯೋ ನಿರ್ಮಾಣ ಮಾಡುವ ದೊಡ್ಡ ಗ್ಯಾಂಗ್ ಮುಂಬೈನಲ್ಲಿದೆ'' ಎಂದಿರುವ ಪರಿ, ''ನಾನು ನನ್ನ ಗಂಡನ ವಿರುದ್ಧ ದೂರು ನೀಡಿ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನನಗೆ ನ್ಯಾಯ ಧಕ್ಕಬೇಕು'' ಎಂದಿದ್ದಾರೆ.'

ಮತ್ತೊಂದೆಡೆ ಪರಿ ಪಾಸ್ವಾನ್ ಪತಿ ಸೂರಜ್ ಮನೆಯರು, 'ಪರಿ ಪಾಸ್ವಾನ್ ಹಿಂದೆಯಿಂದಲೂ ಪೋರ್ನ್ ವಿಡಿಯೋಗಳಲ್ಲಿ ಕೆಲಸ ಮಾಡುತ್ತಿದ್ದಳು. ಅದು ನಮಗೆ ಗೊತ್ತಾದ ಬಳಿಕ ನಾವು ನಮ್ಮ ಮಗನನ್ನು ಅವಳೊಂದಿಗೆ ಮದುವೆ ಆಗುವುದನ್ನು ತಡೆದೆವು. ಆದರೆ ಪರಿ ಹೆದರಿಸಿ-ಬೆದರಿಸಿ ಮಗನನ್ನು ಮದುವೆ ಆದಳು. ಆಕೆಗೆ ಈ ಹಿಂದೆಯೇ ಎರಡು ಮದುವೆ ಆಗಿತ್ತು. ಅಮಾಯಕ ಹುಡುಗರನ್ನು ಬಲೆಗೆ ಹಾಕಿಕೊಂಡು ಅವರನ್ನು ಬ್ಲ್ಯಾಕ್ ಮೇಲ್ ಮಾಡುವುದು ಆಕೆಯ ಅಭ್ಯಾಸ'' ಎಂದು ಆರೋಪಿಸಿದ್ದಾರೆ.

2019ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ಗೆದ್ದ ಪರಿ ಪಾಸ್ವಾನ್ ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. 2019ರಲ್ಲಿ ಸೂರಜ್ ಅನ್ನು ವಿವಾಹವಾದ ನಟಿ ನಂತರ ಕೆಲವೇ ದಿನಗಳಲ್ಲಿ ತನ್ನ ಗಂಡನ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದರು.

ಇದೀಗ ಬಾಲಿವುಡ್‌ನಲ್ಲಿ ಅಶ್ಲೀಲ ವಿಡಿಯೋಗಳದ್ದೇ ಸದ್ದಿದೆ. ಈ ನಡುವೆ ಪರಿ ಪಾಸ್ವಾನ್ ಈ ರೀತಿಯ ಆರೋಪ ಮಾಡಿರುವುದು ಮುಂಬೈ ಪೊಲೀಸರ ಗಮನ ಹರಿದಿರುವ ಸಾಧ್ಯತೆ ಇದೆ. ಅಲ್ಲದೆ, ಪರಿಯ ಗಂಡನ ಮನೆಯವರು ಪರಿ ಪೋರ್ನ್ ವಿಡಿಯೋ ಮಾಡುತ್ತಿದ್ದಳು ಎಂದು ಆರೋಪ ಮಾಡಿರುವ ಕಾರಣ ಆ ನಿಟ್ಟಿನಲ್ಲಿಯೂ ತನಿಖೆ ಆಗುವ ಸಾಧ್ಯತೆ ಇದೆ.ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಮೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದು ಈವರೆಗೆ ರಾಜ್ ಕುಂದ್ರಾಗೆ ಜಾಮೀನು ದೊರೆತಿಲ್ಲ. ರಾಜ್ ಕುಂದ್ರಾ ಮಾತ್ರವೇ ಅಲ್ಲದೆ ರಾಜ್ ಕುಂದ್ರಾದ ಸಂಸ್ಥೆಯ ಮ್ಯಾನೇಜರ್ ಹಾಗೂ ಇನ್ನೂ ಇತರರು ಬಂಧನಕ್ಕೆ ಒಳಗಾಗಿದ್ದಾರೆ.

ರಾಜ್ ಕುಂದ್ರಾ ಬಂಧನಕ್ಕೆ ಮೊದಲು ನಟಿ ಗೆಹನಾ ವಸಿಷ್ಠರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಇದೀಗ ಮತ್ತೆ ಗೆಹನಾ ವಸಿಷ್ಠಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. ಗೆಹನಾ ನಿರೀಕ್ಷಣಾ ಜಾಮೀನಿಗಾಗಿ ಯತ್ನಿಸುತ್ತಿದ್ದಾರೆ.

ನಟಿ ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ ಸೇರಿದಂತೆ ಇನ್ನೂ ಕೆಲವರು ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದರು ಎಂದಿದ್ದಾರೆ. ಕೆಲವರು ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನೂ ಹೊರಿಸಿದ್ದಾರೆ. ಭಾರತದಲ್ಲಿ ಅಶ್ಲೀಲ ವಿಡಿಯೋಗಳ ನಿರ್ಮಾಣ ಮಾಡಿ ಅದನ್ನು ಲಂಡನ್‌ನಲ್ಲಿನ ತನ್ನ ಸಂಬಂಧಿಯ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್‌ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿ ದಿನಕ್ಕೆ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂಬುದು ಮುಂಬೈ ಪೊಲೀಸರ ಆರೋಪ.

More from Filmibeat

English summary
Former Miss India Universe Pari Paswan alleged that a Mumbai based production house intoxicated her and filmed indecent video of her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X