ಪರಿಣಿತಿ - ರಾಘವ್ ಲವ್ ಸ್ಟೋರಿ, ವಯಸ್ಸಿನ ಅಂತರ, ನಿಶ್ಚಿತಾರ್ಥಕ್ಕೆ ಬರುವ ಅತಿಥಿಗಳ ಲಿಸ್ಟ್

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಎಂಪಿ ರಾಘವ್ ಚಡ್ಡಾ ನಿಶ್ಚಿತಾರ್ಥದ ಸುದ್ದಿ ಬಹಳ ದಿನಗಳಿಂದ ಹರಿದಾಡ್ತಿದೆ. ಶನಿವಾರ ದೆಹಲಿಯಲ್ಲಿ ಬಹಳ ಅದ್ಧೂರಿಯಾಗಿ ಜೋಡಿ ಉಂಗುರು ಬದಲಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ದೇಶದ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಆಹ್ವಾನಿಸಲಾಗಿದೆ. ಯಾರೆಲ್ಲಾ ಪರಿ- ರಾಘವ್ ಎಂಗೇಜ್‌ಮೆಂಟ್ ಪಾರ್ಟಿಗೆ ಹಾಜರ್ ಆಗುತ್ತಾರೆ ಎನ್ನುವ ಬಗ್ಗೆ ಗುಸುಗುಸು ಶುರುವಾಗಿದೆ.

ಅದ್ಧೂರಿ ನಿಶ್ಚಿತಾರ್ಥ ಸಮಾರಂಭಕ್ಕೆ ಹಾಜರಾಗುವ ಅತಿಥಿಗಳ ಲಿಸ್ಟ್ ವೈರಲ್ ಆಗ್ತಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ನಡೆದಿದೆ. ಇಂದು ರಾತ್ರಿಯಿಂದಲೇ ನಿಶ್ಚಿತಾರ್ಥ ಕಾರ್ಯಕ್ರಮದ ಸಂಭ್ರಮ ಶುರುವಾಗಿದೆ. ಈಗಾಗಲೇ ಬಂದಿರುವ ಅತಿಥಿಗಳ ಸಂತೋಷದಿಂದ ಕಾಲ ಕಳೆಯಲು ವ್ಯವಸ್ಥೆ ಮಾಡಲಾಗಿದೆಯಂತೆ. ದೆಹಲಿಯ ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್‌ನಲ್ಲಿ ಸಮಾರಂಭ ನಡೆಯಲಿದೆ. ಇನ್ನು ಕಾರ್ಯಕ್ರಮಕ್ಕೆ ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ ಗಂಡ, ಮಗಳ ಸಮೇತ ಹಾಜರಾಗಲಿದ್ದಾರೆ.

Parineeti Chopra and Raghav Chadhas Love story, Engagement venue, guest list

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಪ್ರಕಾರ ಪರಿಣಿತಿ ಹಾಗೂ ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಟೆನ್ನಿಸ್ ಸ್ಟಾರ್ ಸಾನಿಯಾ ಮಿರ್ಜಾ, ಡಿಸೈನರ್ ಮನೀಶ್ ಮಲ್ಹೋತ್ರಾ, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ಹಲವು ಭಾಗಿ ಆಗಲಿದ್ದಾರೆ. ಇನ್ನು ಪರಿ - ರಾಘವ್ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವ ಪ್ರಿಯಾಂಕ ಬಿಡುವು ಮಾಡಿಕೊಂಡು ಸಹೋದರಿ ನಿಶ್ಚಿತಾರ್ಥ ಸಮಾರಂಭಕ್ಕೆ ಬರ್ತಿದ್ದಾರಂತೆ.

ಅಕ್ಟೋಬರ್‌ನಲ್ಲಿ ಪರಿಣಿತಿ - ರಾಘವ್ ಜೋಡಿ ಹಸೆಮಣೆ ಏರುವ ಸಾಧ್ಯತೆಯಿದೆ. ಅಧಿಕೃತವಾಗಿ ಜೋಡಿ ತಮ್ಮ ನಿಶ್ಚಿತಾರ್ಥದ ಬಗ್ಗೆ ಹೇಳಿಲ್ಲ. ಕೆಲ ಬಾಲವುಡ್‌ ಸೆಲೆಬ್ರೆಟಿಗಳ ರೀತಿ ರಹಸ್ಯವಾಗಿ ಕಾರ್ಯಕ್ರಮ ಪ್ಲಾನ್ ಮಾಡಲಾಗಿದೆ. ರಾಘವ್ ದೆಹಲಿ ಸಿಎಂ ಕ್ರೇಜಿವಾಲ್‌ಗೆ ಪರಮಾಪ್ತರು. ಹಾಗಾಗಿ ಅವರು ಕೂಡ ಜೋಡಿಗೆ ಶುಭ ಹಾರೈಸಲು ಬರುವ ನಿರೀಕ್ಷೆಯಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ವಿವಿಧ ಬಗೆಯ ಭಕ್ಷ್ಯ ಭೋಜನ ಸಿದ್ಧವಾಗಲಿದೆ.

ಇಬ್ಬರ ನಡುವಿನ ವಯಸ್ಸಿನ ಅಂತರ

ಕಳೆದ ಕೆಲ ದಿನಗಳಿಂದ ಪರಿಣಿತಿ- ರಾಘವ್ ಒಟ್ಟೊಟ್ಟಿಗೆ ರೆಸ್ಟೋರೆಂಟ್ದ, ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಡೇಟಿಂಗ್ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ಇಬ್ಬರು ಹೀಗೆ ಒಟ್ಟಿಗೆ ಓಡಾಡಿದ್ದು ನೋಡಿ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಶುರುವಾಗಿತ್ತು. ಇನ್ನು ಇಬ್ಬರು ನಡುವೆ ಒಂದು ತಿಂಗಳ ವಯಸ್ಸಿನ ವ್ಯತ್ಯಾಸ ಇದೆ. ರಾಘವ್‌ಗಿಂತ ಪರಿಣಿತಿ 19 ದಿನ ದೊಡ್ಡವರು. ಇಬ್ಬರು ಕೂಡ ಲಂಡನ್‌ನಲ್ಲಿ ಓದಿದವರು.

Parineeti Chopra and Raghav Chadhas Love story, Engagement venue, guest list

ಪರಿ - ರಾಘವ್ ಲವ್‌ ಸ್ಟೋರಿ

ಪರಿಣಿತಿ ಮತ್ತು ರಾಘವ್ ಚಡ್ಡಾ ಕೆಲ ದಿನಗಳಿಂದ ಸ್ನೇಹಿತರಾಗಿದ್ದಾರೆ. ಎರಡು ಕುಟುಂಬಗಳ ನಡುವೆ ಒಡನಾಟವಿದೆ. ಪಂಜಾಬ್‌ನಲ್ಲಿ ಪರಿಣಿತಿ ಸಿನಿಮಾ ಚಿತ್ರಕರಣಕ್ಕೆ ಹೋದಾಗ ಇಬ್ಬರು ಮೊದಲ ಬಾರಿ ಭೇಟಿ ಆದರು ಎಂದು ಹೇಳಲಾಗುತ್ತದೆ. ಆದರೆ ತಮ್ಮ ಮೊದಲ ಭೇಟಿ ಬಗ್ಗೆ ಇಬ್ಬರು ಎಂದು ಮಾತನಾಡಿಲ್ಲ. ಇನ್ನು ರಾಘವ್ ಚಡ್ಡಾಗಿಂತ ಮೊದಲು ಪರಿಣಿತಿ ಹೆಸರು ನಟರಾದ ಅರ್ಜುನ್ ಕಪೂರ್ ಹಾಗೂ ಆದಿತ್ಯಾ ರಾಯ್ ಕಪೂರ್ ಜೊತೆಗೆ ತಳುಕು ಹಾಕಿಕೊಂಡಿತ್ತು.

ಬಾಲಿವುಡ್‌ನಲ್ಲಿ ಪರಿಣಿತಿ

ಇನ್ನು ನಟಿ ಪರಿಣಿತಿ ಚೋಪ್ರಾ ಸಿನಿ ಕರಿಯರ್‌ ಬಗ್ಗೆ ಹೇಳುವುದಾದರೆ 2011ರಲ್ಲಿ 'ಲೇಡಿಸ್ ವರ್ಸಸ್ ರಿಕ್ಕಿಬೇಲ್' ಮೂಲಕ ಚಿತ್ರರಂಗಕ್ಕೆ ಬಂದರು. ಈ 12 ವರ್ಷಗಳಲ್ಲಿ 15 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಆರಕ್ಕೇರದ ಮೂರಕ್ಕಿಳಿದ ನಟಿಯಾಗಿಯೇ ಉಳಿದುಬಿಟ್ಟಿದ್ದಾರೆ. ಸದ್ಯ 'ಚಮ್‌ಕಿಲಾ' ಹಾಗೂ 'ಕ್ಯಾಪ್ಸ್ಯುಲ್ ಗಿಲ್' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

More from Filmibeat

English summary
Parineeti Chopra and Raghav Chadha's Love story, Engagement venue, guest list. Karna Johar, Sania Mirza, priyanka chopra ecpected to attend the Engagement Party. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X