ಪರಿಣಿತಿ- ರಾಘವ್ ನಿಶ್ಚಿತಾರ್ಥದ ಮೊದಲ ಚಿತ್ರಗಳು: ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ ಜೋಡಿ
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಎಂಪಿ ರಾಘವ್ ಚಡ್ಡಾ ನಿಶ್ಚಿತಾರ್ಥ ದೆಹಲಿಯಲ್ಲಿ ನೆರವೇರಿದೆ. ಬಹಳ ಅದ್ಧೂರಿಯಾಗಿ ನಡೆಸ ಈ ಕಾರ್ಯಕ್ರಮದಲ್ಲಿ ಪರಿಣಿತಿ ಸಹೋದರಿ ಪ್ರಿಯಾಂಕ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿ ಆಗಿದ್ದಾರೆ. ರಾಜಕೀಯರಂಗ, ಚಿತ್ರರಂಗ, ಕ್ರೀಡಾರಂಗದ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿ ಆಗಿ ಜೋಡಿಗೆ ಶುಭ ಹಾರೈಸಿದ್ದಾರೆ.
ಅಕ್ಟೋಬರ್‌ನಲ್ಲಿ ಪರಿಣಿತಿ- ರಾಘವ್ ಚಡ್ಡಾ ಹಸೆಮಣೆ ಏರುವ ಸಾಧ್ಯತೆಯಿದೆ. ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಂಡಿರುವ ಪರಿಣಿತಿ "ನಾನು ಪ್ರಾರ್ಥಿಸಿದ ಎಲ್ಲವೂ .. ಹೌದು ನಾನು ಸರಿ ಎಂದು ಹೇಳಿದೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅಭಿಮಾನಿಗಳು, ಆಪ್ತರು ಕಾಮೆಂಟ್ ಮಾಡಿ ಜೋಡಿ ಶುಭ ಹಾರೈಸುತ್ತಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್‌ನಲ್ಲಿ ಪರಿಣಿತಿ- ರಾಘವ್ ಉಂಗುರ ಬದಲಿಸಿಕೊಂಡಿದ್ದಾರೆ.

ಬಿಳಿ ಬಣ್ಣದ ಡಿಸೈನರ್ ಕಾಸ್ಟ್ಯೂಮ್‌ಗಳಲ್ಲಿ ಪರಿಣಿತಿ ಹಾಗೂ ರಾಘವ್ ಮಿಂಚಿದ್ದಾರೆ. ಖಾಸಗಿಯಾಗಿ ನಡೆದ ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರ ಜೊತೆಗೆ ಪಂಜಾಬ್ ಸಿಎಂ ಭಗವಂತ್ ಮಾನ್, ಅಭಿಷೇಕ್ ಮನು ಸಿಂಘ್ವಿ ಕೂಡ ಭಾಗಿ ಆಗಿದ್ದರು.ಬಹಳ ದಿನಗಳಿಂದ ಪರಿಣಿತಿ- ರಾಘವ್ ಚಡ್ಡಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ, ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗ್ತಾರೆ ಎನ್ನುವ ಗುಸುಗುಸಗು ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬರ್ತಿತ್ತು. ಆದರೆ ಈ ಬಗ್ಗೆ ಇಬ್ಬರು ಮಾತನಾಡಿದಿದ್ದರೂ ಬಹಿರಂಗವಾಗಿಯೇ ಓಡಾಡಿಕೊಂಡು ಇದ್ದರು.

ಎಂಗೇಜ್‌ಮೆಂಟ್ ಮುಗಿದು ಅಧಿಕೃತವಾಗಿ ಫೋಟೊಗಳನ್ನು ಶೇರ್ ಮಾಡುವವರೆಗೂ ಪರಿಣಿತಿ ಈ ಬಗ್ಗೆ ಮಾತನಾಡಿರಲಿಲ್ಲ. ವಯಸ್ಸಿನಲ್ಲಿ ರಾಘವ್‌ಗಿಂತ ಪರಿಣಿತಿ 19 ದಿನ ದೊಡ್ಡವರು. ಹರಿಯಾಣದಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ಪರಿಚಯವಾಗಿತ್ತು. ನಂತರ ಎರಡು ಕುಟುಂಬ ಸದಸ್ಯರ ನಡುವೆ ಆತ್ಮೀಯ ಒಡನಾಟ ಶುರುವಾಗಿತ್ತು. ಕೊನೆಗೆ ಪೋಷಕರ ಒಪ್ಪಿಗೆ ಪಡೆದು ಜೋಡಿ ಹೊಸ ಬಾಳಿಗೆ ಕಾಲಿಡಲು ಮುಂದಾಗಿದ್ದಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ ರಾಘವ್ ಚಡ್ಡಾ ಆಪ್ ಪಕ್ಷದಿಂದ ಎಂಪಿ ಆಗಿ ಚುನಾಯಿತರಾಗಿದ್ದಾರೆ. ಇನ್ನು ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್‌ಗೆ ಆಪ್ತರು ಆಗಿದ್ದಾರೆ.
ಇಬ್ಬರ ಮದುವೆ ಅಕ್ಟೋಬರ್‌ನಲ್ಲಿ ನಡೆಯುತ್ತದೆ ಎನ್ನಲಾಗ್ತಿದೆ. 'ಲೇಡಿಸ್ ವರ್ಸಸ್ ರಿಕ್ಕಿ ಬೇಲ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಪರಿಣಿತಿ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡಮಟ್ಟದ ಸಕ್ಸಸ್, ಒಳ್ಳೆ ಪಾತ್ರಗಳು ಸಿಗಲಿಲ್ಲ. ಸದ್ಯ 2 ಸಿನಿಮಾಗಳು ಚೆಲುವೆಯ ಕೈಯಲ್ಲಿದೆ. ಇನ್ನು ಪ್ರಿಯಾಂಕ ಚೋಪ್ರಾ ಕಸೀನ್ ಸಿಸ್ಟರ್ ಅಂತ್ಲೇ ಬಹಳಷ್ಟು ಜನರಿಗೆ ಪರಿಣಿತಿ ಪರಿಚಿತರಾಗಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪರಿಣಿತಿ, "ನನಗೆ ರಾಜಕೀಯ ವ್ಯಕ್ತಿಯನ್ನು ಮದುವೆಯಾಗುವ ಇಷ್ಟ ಇಲ್ಲ. ಅಂತಹ ಪ್ರಪೋಸಲ್‌ಗಳು ಸಾಕಷ್ಟು ಇವೆ. ಆದರೆ ನಾನು ಮಾತ್ರ ರಾಜಕಾರಣಿಯನ್ನು ಮದುವೆ ಆಗಲ್ಲ ಎಂದಿದ್ದರು. "ನಾನು ಮದುವೆಯಾಗುವ ಹುಡುಗ ಒಳ್ಳೆ ಹಾಸ್ಯ ಪ್ರಜ್ಞೆ ಉಳ್ಳವನಾಗಿರಬೇಕು. ಅವನಿಗೆ ಒಳ್ಳೆಯದು ಯಾವುದು ಅಂತ ಗೊತ್ತಿರಬೇಕು. ಆತ ನನ್ನನ್ನು ಗೌರವಿಸಬೇಕು. ಯಾರು ತಾವಾಗಿಯೇ ಬದುಕು ಕಟ್ಟಿಕೊಂಡಿರುತ್ತಾರೋ ಅಂತವರನ್ನು ನಾನು ಪ್ರೀತಿಸ್ತೀನಿ" ಎಂದು ಹೇಳಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ.


Click it and Unblock the Notifications











