ರಾಘವ್ ಚಡ್ಡಾ, ಪರಿಣಿತಿ ಚೋಪ್ರಾ ಮದುವೆ ದಿನಾಂಕ ಫಿಕ್ಸ್: ಯಾವಾಗ, ಎಲ್ಲಿ ತಿಳಿಯಿರಿ

ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಿನಿಂದ ಇವರು ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಮದುವೆ ದಿನಾಂಕ ಮಾತ್ರ ಪ್ರಕಟಿಸಿರಲಿಲ್ಲ.

ಸದ್ಯ ವರದಿಯೊಂದು ಬಂದಿದ್ದು, ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಅವರು ತಮ್ಮ ಮದುವೆಯ ದಿನಾಂಕ ಮತ್ತು ಸ್ಥಳವನ್ನು ನಿಗದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ವಿವಾಹ ಮಹೋತ್ಸವ ಡೆಸ್ಟಿನೇಷನ್ ವೆಡ್ಡಿಂಗ್ ಆಗಲಿದೆ ಎಂದು ವರದಿ ಹೇಳಿದೆ.

Parineeti Chopra and Raghav Chadha To Marry on September 25: Report

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ಜೋಡಿ ಸೆಪ್ಟೆಂಬರ್ 25 ರಂದು ರಾಜಸ್ಥಾನದಲ್ಲಿ ಅದ್ಧೂರಿ ವಿವಾಹದಲ್ಲಿ ವಿವಾಹವಾಗಲಿದ್ದಾರೆ. ಈ ವೇಳೆ ಅವರ ಆಪ್ತರು ಮತ್ತು ಕುಟುಂಬಸ್ಥರು ಸೇರಲಿದ್ದಾರೆ. ಈಗಾಗಲೇ ನಟಿ ಪರಿಣಿತಿ ಅವರ ತಂಡವು ಮದುವೆಯ ತಯಾರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.

ಪರಿಣಿತಿ ಮತ್ತು ರಾಘವ್ ಮದುವೆಯ ದಿನಾಂಕ ಫಿಕ್ಸ್

ಮೂಲವೊಂದನ್ನು ಉಲ್ಲೇಖಿಸಿರುವ ಟೈಮ್ಸ್ ಆಫ್ ಇಂಡಿಯಾ "ಇದು ಅದ್ಧೂರಿ ವಿವಾಹವಾಗಿರುತ್ತದೆ. ಕುಟುಂಬಗಳು ನಡೆಸುವ ಹಬ್ಬಗಳು, ಆಚರಣೆಗಳ ಬಗ್ಗೆ ಪರಿಣಿತಿ ತುಂಬಾ ಮಾತನಾಡಿದ್ದಾರೆ. ಹೀಗಾಗಿ ಅವರ ತಂಡವು ಈಗಾಗಲೇ ವಿವರಗಳು ಮತ್ತು ಅವರ ದಿನಾಂಕಗಳನ್ನು ಹುಡುಕಲು ಪ್ರಾರಂಭಿಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಪರಿಣಿತಿ ಚೋಪ್ರಾ ತನ್ನ ಮದುವೆಯ ತಯಾರಿಗೆ ಇಳಿಯಲಿದ್ದಾರೆ. ಮದುವೆಯ ನಂತರ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ" ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಜೂನ್‌ನಲ್ಲಿ, ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿವಾಹ ಉದಯಪುರದ 5 ಸ್ಟಾರ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಬಹುದು ಎಂದು ವರದಿಯಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಪರಿಣಿತಿ ಮತ್ತು ರಾಘವ್ ರಾಜಸ್ಥಾನದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗುವ ಹೊಸ ಸೆಲೆಬ್ರಿಟಿ ಜೋಡಿಯಾಗಬಹುದು, ಉದಯಪುರದ ಒಬೆರಾಯ್ ಉದಯವಿಲಾಸ್‌ನಲ್ಲಿ ಮದುವೆ ನಡೆಯಬಹುದು.

Parineeti Chopra and Raghav Chadha To Marry on September 25: Report

ಒಮ್ಮೆ ಮೇವಾರದ ಮಹಾರಾಜರಿಗೆ ಸೇರಿದ್ದ ಒಬೆರಾಯ್ ಉದಯವಿಲಾಸ್‌ನಲ್ಲಿ 2018 ರಲ್ಲಿ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ವಿವಾಹಪೂರ್ವ ಉತ್ಸವಗಳು ನಡೆದಿದ್ದವು. ಅದರಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕ ಬೆಯೋನ್ಸ್ ಅವರ ಕಛೇರಿ ನಡೆದಿತ್ತು.

ದಿ ಒಬೆರಾಯ್ ಉದಯವಿಲಾಸ್ ವೆಬ್‌ಸೈಟ್‌ನ ಪ್ರಕಾರ, ಈ 5 ಸ್ಟಾರ್ ಹೋಟೆಲ್ 1,21,406 ಚದರ ಮೀಟರ್ ಐಷಾರಾಮಿ ಉದ್ಯಾನವನಗಳಲ್ಲಿ ಹರಡಿದೆ. ಉದಯಪುರದ ವಿನ್ಯಾಸವನ್ನು ಪ್ರತಿಬಿಂಬಿಸುವ ಗುಮ್ಮಟಗಳು ಮತ್ತು ಕಾರಿಡಾರ್‌ಗಳ ವಿಶೇಷ ಸಂಕೀರ್ಣ ವಿನ್ಯಾಸವನ್ನು ಹೊಂದಿದೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಸಂಬಂಧ

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರು ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ, ಆದರೆ ವರದಿಗಳ ಪ್ರಕಾರ ಅವರು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ನಿಶ್ಚಿತಾರ್ಥಕ್ಕೂ ಮುನ್ನ ಇಬ್ಬರೂ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ, ಮೊಹಾಲಿಯಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸುವಾಗ ಒಟ್ಟಿಗೆ ಕಾಣಿಸಿಕೊಂಡಿದ್ದರು.

More from Filmibeat

English summary
Parineeti Chopra and Raghav Chadha To Marry on September 25?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X