ರಾಜಸ್ಥಾನದಲ್ಲಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ವಿವಾಹ: ಪಂಜಾಬ್, ದೆಹಲಿ ಸಿಎಂಗಳ ಹಾಜರಿ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಅಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಭಾನುವಾರ (ಸೆಪ್ಟಂಬರ್‌ 24) ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಿದ್ಧರಾಗಿದ್ದಾರೆ. ಅದ್ದೂರಿ ವಿವಾಹ ಮಹೋತ್ಸವಕ್ಕೆ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ಅದ್ಭುತವಾಗಿ ಅಲಂಕಾರಗೊಂಡಿದೆ.

ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ಕೆಲವು ಶಾಸ್ತ್ರಗಳನ್ನು ನಿಗದಿಪಡಿಸಲಾಗಿದೆ. ಹಲವಾರು ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ರಾಜಕಾರಣಿಗಳು ರಾಯಲ್ ವೆಡ್ಡಿಂಗ್‌ನಲ್ಲಿ ಭಾಗವಹಿಸಲು ಉದಯಪುರಕ್ಕೆ ಆಗಮಿಸಿದ್ದಾರೆ.

Parineeti Chopra and Raghav Chadha To Tie The Knot Sunday

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಸಂಜೆ ಉದಯಪುರ ತಲುಪಿದ್ದು, ಇಬ್ಬರು ಭಾನುವಾರ ರಾಘವ್ ಚಡ್ಡಾ ಅವರ ಬಾರಾತ್‌ನಲ್ಲಿ ಭಾಗವಹಿಸಲಿದ್ದಾರೆ. ಮದುಮಗನ ಕಡೆಯಿಂದ ಬಂದ ಅತಿಥಿಗಳಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಕೂಡ ಇದ್ದಾರೆ.

ಪರಿಣಿತಿ ಚೋಪ್ರಾ ಅವರ ಸೋದರಸಂಬಂಧಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಇನ್ನೂ ಅಮೆರಿಕಾದಲ್ಲಿಯೇ ಇದ್ದಾರೆ. ಪ್ರಿಯಾಂಕಾ ಚೋಪ್ರಾ , ತನ್ನ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಜೊತೆಗೆ ಇನ್ನೂ ಭಾರತವನ್ನು ತಲುಪಿಲ್ಲ. ಅವರು ಮದುವೆಗೆ ಬರುವುದಿಲ್ಲ ಎಂಬುದು ಈಗಾಗಲೇ ಹಲವೆರೆ ವರದಿಯಾಗಿದೆ. ಪ್ರಿಯಾಂಕಾ ಚೋಪ್ರಾ ಶುಕ್ರವಾರವೇ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಣಿತಿಗೆ ಶುಭ ಹಾರೈಸಿದ್ದಾರೆ. ಹೀಗಾಗಿ ಮದುವೆಗೆ ಸಾಕ್ಷಿಯಾಗಲು ಅವರು ಇರುವುದಿಲ್ಲ ಎಂಬ ಸುಳಿವು ನೀಡಿದ್ದರು.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಹಲವಾರು ವರ್ಷಗಳಿಂದ ಪರಸ್ಪರ ಪರಿಚಿತರಾಗುದ್ದು, ಕಳೆದ ಮೇ ತಿಂಗಳಲ್ಲಿ ದೆಹಲಿಯ ರಾಘವ್ ಅವರ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ದೆಹಲಿಗೆ ಬಂದಿದ್ದರು. ಆದರೆ, ಮದುವೆಗೆ ಅವರು ಬರುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.

Parineeti Chopra and Raghav Chadha To Tie The Knot Sunday

ನಟಿ ಪ್ರಿಯಾಂಕಾ ಚೋಪ್ರಾ ಶನಿವಾರ ಯುಎಸ್‌ನಲ್ಲಿ ಸ್ನೇಹಿತನ ಮನೆಯಲ್ಲಿ ನಡೆದ (ಬೇಬಿ ಶವರ್‌) ಸೀಮಂತ ಸಮಾರಂಭಕ್ಕೆ ಹಾಜರಾಗಿದ್ದರು. ಆದರೆ, ತಮ್ಮ ಸಹೋದರಿ ಮದುವೆಯಲ್ಲಿ ಭಾಗವಹಿಸಲು ಈವರೆಗೂ ಇನ್ನೂ ಭಾರತಕ್ಕೆ ಬಂದಿಲ್ಲ.

ದಿ ಲೀಲಾ ಪ್ಯಾಲೇಸ್‌ನಲ್ಲಿ ಅದ್ಧೂರಿ ವಿವಾಹ ನಡೆಯುತ್ತಿದ್ದು, ಮದುವೆಯ ಆಮಂತ್ರಣ ಪತ್ರದಲ್ಲಿ 'ಎ ಪರ್ಲ್ ವೈಟ್ ಇಂಡಿಯನ್ ವೆಡ್ಡಿಂಗ್' ಎಂದು ಬರೆಯಲಾಗಿದೆ. ಜಯಮಾಲಾ ಮಧ್ಯಾಹ್ನ 3:30 ಕ್ಕೆ ನಿಗದಿಯಾಗಿದ್ದು, ನಂತರ 4 ಗಂಟೆಗೆ ಸಪ್ತಪದಿ ಮತ್ತು ಸಂಜೆ 6:30 ಕ್ಕೆ ಮೆರವಣಿಗೆ ನಡೆಯಲಿದೆ.

ಹೂಮಾಲೆ ಹಾಕಿ ಅರವಿಂದ್ ಕೇಜ್ರಿವಾಲ್ ಸ್ವಾಗತ

ರಾಘವ್ ಚಡ್ಡಾ ಅವರ ಪೋಷಕರು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ವೈಯಕ್ತಿಕವಾಗಿ ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ. ಇದರ ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕೆಲವು ಆಪ್ ಮುಖಂಡರು ಮದುವೆಗೆ ಕೇಜ್ರಿವಾಲ್ ಜೊತೆಗೆ ಬಂದಿಳಿದಿದ್ದಾರೆ.

ಯುವಸೇನೆಯ ಅಧ್ಯಕ್ಷ ಆದಿತ್ಯ ಠಾಕ್ರೆ ಅವರು ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ವಿವಾಹಕ್ಕಾಗಿ ಉದಯಪುರಕ್ಕೆ ತೆರಳುತ್ತಿದ್ದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಟೆನಿಸ್ ಚಾಂಪಿಯನ್ ಸಾನಿಯಾ ಮಿರ್ಜಾ ಅವರು ತಮ್ಮ ಸಹೋದರಿ ಅನಮ್ ಮಿರ್ಜಾ ಅವರೊಂದಿಗೆ ಭಾನುವಾರ ಸ್ನೇಹಿತೆ ಪರಿಣಿತಿ ಚೋಪ್ರಾ ಅವರನ್ನು ಮದುಮಗಳನ್ನಾಗಿ ನೋಡಲು ಉದಯಪುರ ತಲುಪಿದ್ದಾರೆ.

More from Filmibeat

English summary
Parineeti Chopra and Raghav Chadha To Tie The Knot Sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X