ಸುಶಾಂತ್ ಜೊತೆಗೆ ನಟಿಸುವುದಿಲ್ಲ ಎಂದಿದ್ದ ನಟಿ: 'ಟಿವಿ ನಟ' ಎಂದು ಮೂದಲಿಸಿದ್ದರು!

ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ ಹಾಗೂ ಗುಂಪುಗಾರಿಕೆ ವಿಷಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಎದ್ದಿದೆ.

ಸುಶಾಂತ್ ಸಾವಿಗೆ ಕಾರಣ, ಬಾಲಿವುಡ್‌ನ ಗುಂಪುಗಾರಿಕೆ ಹಾಗೂ ಸ್ವಜನಪಕ್ಷಪಾತ ಎಂದೇ ಆರೋಪಿಸಲಾಗುತ್ತಿದೆ. ಸಿನಿಮಾ ಹಿನ್ನೆಲೆ ಇಲ್ಲದೆ, ಟಿವಿ ಧಾರಾವಾಹಿ ನಟನಾಗಿ ಬಾಲಿವುಡ್ ಪ್ರವೇಶ ಮಾಡಿದ್ದ ಸುಶಾಂತ್ ಅನ್ನು ಬಾಲಿವುಡ್‌ನ 'ದೊಡ್ಡ ನಟರು' ಗೌರವಿಸುತ್ತಿರಲಿಲ್ಲ. ತಮ್ಮವನು ಎಂದು ಪರಿಗಣಿಸುತ್ತಿರಲಿಲ್ಲ ಎನ್ನಲಾಗಿದೆ. ಇದಕ್ಕೆ ಹಲವು ಸಾಕ್ಷ್ಯಗಳನ್ನೂ ಒದಗಿಸಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಅನುರಾಗ್ ಕಶ್ಯಪ್ ಹೊಸ ವಿಷಯವೊಂದನ್ನು ಬಹಿರಂಗಗೊಳಿಸಿದ್ದು, ಬಾಲಿವುಡ್‌ನ ಖ್ಯಾತ ನಟಿಯೊಬ್ಬಾಕೆ 'ಸುಶಾಂತ್ ಟಿವಿ ನಟ, ನಾನು ಆತನೊಂದಿಗೆ ನಟಿಸುವುದಿಲ್ಲ' ಎಂದಿದ್ದರು ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

ಟಿವಿ ನಟನೊಂದಿಗೆ ನಟಿಸುವುದಿಲ್ಲ ಎಂದಿದ್ದರು ಪರಿಣಿತಿ: ಅನುರಾಗ್

ಟಿವಿ ನಟನೊಂದಿಗೆ ನಟಿಸುವುದಿಲ್ಲ ಎಂದಿದ್ದರು ಪರಿಣಿತಿ: ಅನುರಾಗ್

ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಅನುರಾಗ್ ಕಶ್ಯಪ್, 'ಹಸೀ ಥೋ ಪಸಿ' ಸಿನಿಮಾಕ್ಕೆ ಪರಿಣಿತಿ ಚೋಪ್ರಾ ಹಾಗೂ ಸುಶಾಂತ್ ಅನ್ನು ಆಯ್ಕೆ ಮಾಡಿದ್ದೆವು. ಆದರೆ 'ನಾನು ಸುಶಾಂತ್ ಜೊತೆ ನಟಿಸುವುದಿಲ್ಲ' ಎಂದು ಪರಿಣಿತಿ ಹೇಳಿದ್ದರು' ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ದೊಡ್ಡ ಸ್ಟಾರ್ ಆಗಲಿದ್ದಾನೆ ಎಂದು ಹೇಳಿದ್ದೆವು: ಅನುರಾಗ್

ದೊಡ್ಡ ಸ್ಟಾರ್ ಆಗಲಿದ್ದಾನೆ ಎಂದು ಹೇಳಿದ್ದೆವು: ಅನುರಾಗ್

ಆದರೆ ನಾವು ಅವರಿಗೆ ಅರ್ಥ ಮಾಡಿಸಿದೆವು, ಆತ ಕಾಯ್‌ಪೋ ಚೇ ಮಾಡಿದ್ದಾನೆ, ಪಿಕೆ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೊತೆ ನಟಿಸಿದ್ದಾನೆ. ಈ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಆತ ಟಿವಿ ನಟ ಆಗಿರುವುದಿಲ್ಲ, ದೊಡ್ಡ ಸ್ಟಾರ್ ಆಗಿರುತ್ತಾನೆ ಎಂದು ಮನದಟ್ಟು ಮಾಡಿದೆವು ಎಂದಿದ್ದಾರೆ ಅನುರಾಗ್ ಕಶ್ಯಪ್.

ಸುಶಾಂತ್‌ ಗೆ ಯಶ್‌ರಾಜ್ ಫಿಲಮ್ಸ್‌ನಿಂದ ಆಫರ್ ಬಂತು

ಸುಶಾಂತ್‌ ಗೆ ಯಶ್‌ರಾಜ್ ಫಿಲಮ್ಸ್‌ನಿಂದ ಆಫರ್ ಬಂತು

ಆದರೆ ಆ ವೇಳೆಗಾಗಲೆ ಸುಶಾಂತ್‌ ಗೆ ಯಶ್‌ರಾಜ್ ಫಿಲಮ್ಸ್‌ನಿಂದ ಆಫರ್ ಬಂತು, ಹಾಗಾಗಿ ಆತ ನಮ್ಮ ಸಿನಿಮಾ ಬಿಟ್ಟು ಆ ಸಿನಿಮಾಕ್ಕೆ ಹೋದ, ನಾವು ಪರಿಣಿತಿ ಹಾಗೂ ಸಿದ್ಧಾರ್ಥ್‌ ಅನ್ನು ಹಾಕಿಕೊಂಡು ಹಸಿ ಥೋ ಪಸಿ ಸಿನಿಮಾ ಮಾಡಿದೆವು ಎಂದಿದ್ದಾರೆ. ಯಶ್‌ರಾಜ್ ಬ್ಯಾನರ್ಸ್‌ನ ಶುದ್ ದೇಸಿ ರೋಮಾನ್ಸ್‌ನಲ್ಲಿ ಪರಿಣಿತಿ ಮತ್ತು ಸುಶಾಂತ್ ಇಬ್ಬರೂ ಒಟ್ಟಿಗೆ ನಟಿಸಿದರು ಎಂದಿದ್ದಾರೆ ಅನುರಾಗ್.

Recommended Video

RCB ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ Duniya Vijay | Filmibeat Kannada
ದೊಡ್ಡ ಬ್ಯಾನರ್‌ ಸಿನಿಮಾದಲ್ಲಿ ನಟಿಸಲು ಆಸಕ್ತಿ

ದೊಡ್ಡ ಬ್ಯಾನರ್‌ ಸಿನಿಮಾದಲ್ಲಿ ನಟಿಸಲು ಆಸಕ್ತಿ

ಸುಶಾಂತ್‌ ಗೆ ನಾನು ಎರಡು ಬಾರಿ ಸಿನಿಮಾ ಆಫರ್ ಮಾಡಿದೆ. ಆದರೆ ಎರಡೂ ಬಾರಿ ಆತ ದೊಡ್ಡ ಸಿನಿಮಾ ಬ್ಯಾನರ್‌ ನಲ್ಲಿ ನಟಿಸಲೆಂದು ನನ್ನ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಆ ನಂತರ ನಾನು ಸುಶಾಂತ್ ಸಿಂಗ್ ಗೆ ಸಿನಿಮಾ ಆಫರ್‌ ಮಾಡುವುದನ್ನು ಬಿಟ್ಟೆ ಎಂದಿದ್ದಾರೆ ಅನುರಾಗ್ ಕಶ್ಯಪ್.

English summary
Actress Parineeti Chopra did not wanted to act alongwith Sushant Singh in 'Hasee Tho Pasi' movie. She called him TV actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X