ಅಕ್ಕ-ಭಾವನ ಹಾಟ್ ಚಿತ್ರ ನೋಡಿ ಗಾಬರಿಯಾದ ನಟಿ ಪರಿಣಿತಿ

By ಫಿಲ್ಮೀಬೀಟ್ ಡೆಸ್ಕ್‌

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪರಿಣಿತಿ ಚೋಪ್ರಾ ಸಹೋದರಿಯರು. ಇಬ್ಬರೂ ಬಾಲಿವುಡ್‌ನ ಸ್ಟಾರ್ ನಟಿಯರು. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್‌ ಅನ್ನು ವಿವಾಹವಾಗಿ ಹಾಲಿವುಡ್‌ಗೆ ಹಾರಿರುವುದು ಹಳೆಯ ಸಂಗತಿ. ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿಯೇ ಇದ್ದಾರೆ ನಟಿ.

ಇಂದು ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಪ್ರಕಟಿಸಿದ್ದು ಪ್ರಿಯಾಂಕಾ ಅಭಿಮಾನಿಗಳಿಗೆ ಮಾತ್ರವಲ್ಲ ಪ್ರಿಯಾಂಕಾರ ಕುಟುಂಬದವರಿಗೂ ಹುಬ್ಬೇರುವಂತೆ ಮಾಡಿದ್ದಾರೆ.

ಬೀಚ್‌ನಲ್ಲಿ ಮಲಗಿರುವ ಪ್ರಿಯಾಂಕಾ ನಿಕ್ ಜೊನಸ್ ಜೊತೆಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಚಿತ್ರ ಬಹಳ ವೈರಲ್ ಆಗಿದೆ. ಬಹಳ ಹಾಟ್ ಆಗಿರುವ ಈ ಚಿತ್ರಕ್ಕೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ನಟಿ, ಪ್ರಿಯಾಂಕಾ ಸೋದರಿ ಪರಿಣಿತಿ ಚೋಪ್ರಾ ಸಹ ಕಮೆಂಟ್ ಮಾಡಿದ್ದು, ತಮ್ಮ 'ಆತಂಕ' ವ್ಯಕ್ತಪಡಿಸಿದ್ದಾರೆ.

Parineeti Chopra Express Shock Over Priyanka Chopras Instagram Pic

ಬಿಕಿನಿ ಧರಿಸಿ ಮಲಗಿರುವ ಪ್ರಿಯಾಂಕಾ ಚೋಪ್ರಾರ ನಿತಂಬದ ಮೇಲೆ ಏನೊ ತಿನಿಸು ಇಟ್ಟುಕೊಂಡು ಸ್ಪೂನ್‌ನಿಂದ ತಿನ್ನುತ್ತಿದ್ದಾರೆ ನಿಕ್ ಜೋನಸ್. ಈ ಚಿತ್ರವನ್ನು ಹಂಚಿಕೊಂಡಿರುವ ಪ್ರಿಯಾಂಕಾ, ''ನಿಕ್ ಜೋನಸ್‌ನ ನೆಚ್ಚಿನ ಸ್ನ್ಯಾಕ್ಸ್ ಇದು'' ಎಂದಿದ್ದಾರೆ. ಬಹಳ ಹಾಟ್‌ ಆಗಿರುವ ಈ ಚಿತ್ರಕ್ಕೆ ಹಲವರು, ಹಲವು ವಿಧವಾಗಿ ಕಮೆಂಟ್ ಮಾಡಿದ್ದಾರೆ. ಆದರೆ ಪರಿಣಿತಿ ಮಾಡಿರುವ ಕಮೆಂಟ್ ಬಹಳ ವೈರಲ್ ಆಗಿದೆ.

''ಅಕ್ಕ-ಭಾವ ಏನು ಮಾಡುತ್ತಿದ್ದೀರಿ. ನಮ್ಮ ಕುಟುಂಬ ಸಹ ಇನ್‌ಸ್ಟಾಗ್ರಾಂನಲ್ಲಿದ್ದಾರೆ. ಕಣ್ಣು ಮುಚ್ಚಿಕೊಂಡು ಲೈಕ್ ಒತ್ತಲು ಪ್ರಯತ್ನ ಮಾಡುತ್ತಿದ್ದೀನಿ'' ಎಂದಿದ್ದಾರೆ. ಪರಿಣಿತಿ ಹೇಳಿರುವಂತೆ ಪ್ರಿಯಾಂಕಾ ಚೋಪ್ರಾ ತಾಯಿ, ಪರಿಣಿತಿ ಪೋಷಕರು ಸಹ ಇನ್‌ಸ್ಟಾಗ್ರಾಂನಲ್ಲಿದ್ದಾರೆ. ಪ್ರಿಯಾಂಕಾ ಹಂಚಿಕೊಂಡಿರುವ ಚಿತ್ರ ಕುಟುಂಬ ನೋಡುವಂತೆ ಇಲ್ಲ.

ಪ್ರಿಯಾಂಕಾ ಚಿತ್ರಕ್ಕೆ ಹಾಗೂ ಪರಿಣಿತಿ ಕಮೆಂಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ''ನಿಕ್ ಜೋನಸ್, ಬೌನ್ಸಿಂಗ್ ಕೇಕ್ ಅನ್ನು ಕತ್ತರಿಸುತ್ತಿದ್ದಾರೆ'' ಎಂದು ಒಬ್ಬ ನೆಟ್ಟಿಗ ಪ್ರಿಯಾಂಕಾ ನಿತಂಬವನ್ನು ಕೇಕ್‌ಗೆ ಹೋಲಿಸಿದ್ದಾರೆ. ಪರಿಣಿತಿ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ವ್ಯಕ್ತಿ, ''ಹೆದರಬೇಡ, ನಿನಗಾಗಿಯೂ ಯಾರೊ ಒಬ್ಬರು ಹಸಿದುಕೊಂಡಿರುತ್ತಾರೆ'' ಎಂದು ಕಾಲೆಳೆದಿದ್ದಾನೆ.

ಇನ್ನೊಬ್ಬ ವ್ಯಕ್ತಿ, ''ಪ್ರಿಯಾಂಕಾ ಅಮೆರಿಕಕ್ಕೆ ಹೋಗಿ ಬಹಳ ನಾಟಿಯಾಗಿಬಿಟ್ಟಿದ್ದಾಳೆ. ಭಾವ (ನಿಕ್ ಜೋನಸ್) ಸಹ ಬಹಳ ತುಂಟ ಇದ್ದಂತಿದೆ. ನಿನ್ನ ಭಾವನಿಗೆ ಹೇಳು ಸ್ಪೂನ್‌ನಲ್ಲಿ ತಿನ್ನುವ ಬದಲು ನೇರವಾಗಿ ಬಾಯಿ ಹಾಕಲು'' ಎಂದು ತರ್ಲೆ ಸಲಹೆ ನೀಡಿದ್ದಾನೆ. ''ರಾಜ್ ಕುಂದ್ರಾ ಈ ಚಿತ್ರ ನೋಡಿದರೆ ಇಬ್ಬರನ್ನೂ ಸೇರಿಸಿ ಅಶ್ಲೀಲ ಸಿನಿಮಾ ಮಾಡುತ್ತಾನೆ'' ಎಂದಿದ್ದಾನೆ ಮತ್ತೊಬ್ಬ ವ್ಯಕ್ತಿ.

ಪ್ರಿಯಾಂಕಾ ಹಂಚಿಕೊಂಡಿರುವ ಈ ಬೋಲ್ಡ್‌ ಚಿತ್ರಕ್ಕೆ ಹಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾಳನ್ನು ಅನ್‌ಫಾಲೋ ಮಾಡಿ ಎಂದು ಸಹ ಕೆಲವರು ಮನವಿ ಮಾಡಿದ್ದಾರೆ. ಅಮೆರಿಕಕ್ಕೆ ಹೋಗಿ ಭಾರತೀಯತೆಯನ್ನು ಬಿಟ್ಟುಬಿಟ್ಟಿದ್ದಾಳೆ ಎಂದು ಕೆಲವರು ಹೇಳಿದ್ದಾರೆ. ನಿಕ್ ಜೋನಸ್ ಜೊತೆಗಿನ ಚಿತ್ರ ಮಾತ್ರವೇ ಅಲ್ಲದೆ ಮತ್ತೊಂದು ಬಿಕಿನಿ ಚಿತ್ರವನ್ನೂ ಪ್ರಿಯಾಂಕಾ ಹಂಚಿಕೊಂಡಿದ್ದಾರೆ. ಅದಕ್ಕೂ ಭಿನ್ನ-ಭಿನ್ನ ರೀತಿಯ ಕಮೆಂಟ್‌ಗಳು ಬಂದಿವೆ.

ಕಳೆದೊಂದು ವರ್ಷದಿಂದ ಲಂಡನ್ ನಲ್ಲಿರುವ ಪ್ರಿಯಾಂಕಾ ಸದ್ಯ 'ಸಿಟಾಡೆಲ್' ಸರಣಿ ಜೊತೆಗೆ 'ಟೆಕ್ಸ್ಟ್ ಫಾರ್ ಯು' ಮುಗಿಸಿದ್ದಾರೆ. 'ಮೆಟ್ರಿಕ್ಸ್' ಹಾಗೂ ಸ್ಯಾಮ್ ಹ್ಯೂಘನ್, ಸೆಲೀನ್ ಡಿಯಾನ್, ರಸೆಲ್ ಟೋವಿ ಮತ್ತು ಒಮಿಡ್ ಜಲೀಲಿ ಈ ಸರಣಿಯಲ್ಲಿ ನಟಿಸಿದ್ದಾರೆ. ಇನ್ನು ಹಿಂದಿಯಲ್ಲಿ ಕತ್ರಿನಾ ಕೈಫ್, ಆಲಿಯಾ ಭಟ್ ಜೊತೆ 'ಜೀ ಲಿ ಜರಾ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಾಲಿವುಡ್‌ನಲ್ಲಿ ಕೊನೆಯದಾಗಿ ಪ್ರಿಯಾಂಕಾ ವೈಟ್ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

More from Filmibeat

English summary
Actress Parineeti Chopra express shock over Priyanka Chopra's Instagram picture. Parineeti said our family is on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X