ಮೊದಲ ಭೇಟಿಯಲ್ಲೇ ಹೃದಯಗಳು ತಿಳಿದಿದ್ದವು!: ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಅದ್ಧೂರಿ ಮದುವೆಯ ಮೊದಲ ಫೋಟೋಗಳು

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಖಾಸಗಿ ಸಮಾರಂಭದಲ್ಲಿ ಭಾನುವಾರ (ಸೆಪ್ಟೆಂಬರ್ 24) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಾಜಸ್ಥಾನದಲ್ಲಿ ಉದಯಪುರದ ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ಬಿಗಿ ಭದ್ರತೆಯ ನಡುವೆ ಅವರ ವಿವಾಹ ಸಮಾರಂಭ ನೆರವೇರಿದೆ.

ಮದುವೆಯ ಫೋಟೋಗಳನ್ನು ಭಾನುವಾರ ಎಲ್ಲೂ ಹಂಚಿಕೊಂಡಿರಲಿಲ್ಲ. ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿದ್ದವರು ಕೂಡ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ. ಸೋಮವಾರ (ಸೆಪ್ಟೆಂಬರ್ 25) ಪರಿಣಿತಿ ಚೋಪ್ರಾ ಅಧಿಕೃತ ಮದುವೆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Parineeti Chopra, Raghav Chadha share first wedding photos

ನಟಿ-ರಾಜಕಾರಣಿಯ ಅದ್ಧೂರಿ ಮದುವೆ

ಮದುವೆಯ ಫೋಟೋಗಳನ್ನು ನೋಡಿದರೇ ಇದು ಅದ್ಧೂರಿ ಮದುವೆ ಎಂಬುದು ಎಂಥವರಿಗೂ ತಿಳಿಯುತ್ತದೆ. ಸಂಸದ ರಾಘವ್ ಚಡ್ಡಾ ಬಿಳಿ ಬಟ್ಟೆಯಲ್ಲಿ ಪೇಟ ಧರಿಸಿ ಮಿಂಚಿದರೇ, ನಟಿ ಪರಿಣಿತಿ ಚೋಪ್ರಾ ಕ್ರೀಮ್ ಕಲರ್ ಲೆಹಂಗಾ ತೊಟ್ಟು ತಮ್ಮ ಜೀವನದ ಅಮೃತ ಘಳಿಗೆಗೆ ಸಾಕ್ಷಿಯಾಗಿದ್ದಾರೆ.

ಫೋಟೋಗಳನ್ನು ಹಂಚಿಕೊಂಡಿರುವ ನಟಿ ಪರಿಣಿತಿ ಚೋಪ್ರಾ, "ಅಂದು ಉಪಹಾರ ಮೇಜಿನ ಬಳಿಯ ಮೊದಲ ಮಾತುಗಳಿಂದಲೇ ನಮ್ಮ ಹೃದಯಗಳು ತಿಳಿದಿದ್ದವು... ಬಹಳ ಸಮಯದಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ.. ಕೊನೆಗೂ ಮಿಸ್ಟರ್ ಅಂಡ್ ಮಿಸಸ್ ಆಗಿದ್ದೇವೆ! ಒಬ್ಬರಿಗೊಬ್ಬರು ಇಲ್ಲದೆ ಬದುಕಲು ಸಾಧ್ಯವಾಗಲಿಲ್ಲ... ಒಬ್ಬರಿಗೋಬ್ಬರು ಶಾಶ್ವತವಾಗಿರುವುದು ಈಗ ಆರಂಭ " ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ

ಕುಟುಂಬಸ್ಥರು, ಆಪ್ತರು, ಹಲವು ಮುಖ್ಯಮಂತ್ರಿಗಳು ಮತ್ತು ಸಚಿವರ ಸಮ್ಮುಖದಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ ನೆರವೇರಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ನಿಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವರೆಗೆ, ಯುವಸೇನೆಯ ಆದಿತ್ಯ ಠಾಕ್ರೆ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಮತ್ತು ಸಂಜೀವ್ ಅರೋರಾ ಮುಂತಾದ ಹಲವಾರು ಪ್ರಸಿದ್ಧ ವ್ಯಕ್ತಿಗಳು ದಂಪತಿಯನ್ನು ಆಶೀರ್ವದಿಸಲು ರಾಜಸ್ಥಾನಕ್ಕೆ ತೆರಳಿದ್ದರು.

Parineeti Chopra, Raghav Chadha share first wedding photos

ಸಹೋದರಿಯ ಮದುವೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿರಲಿಲ್ಲ. ಆದರೆ, ಬಾಲಿವುಡ್‌ನ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ, ಪರಿಣಿತಿ ಅವರ ಆಪ್ತ ಸ್ನೇಹಿತೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಹರ್ಭಜನ್ ಸಿಂಗ್ ಇಬ್ಬರ ಮದುವೆಗೆ ಸಾಕ್ಷಿಯಾಗಿದ್ದರು.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ರಾಯಲ್ ವೆಡ್ಡಿಂಗ್!

ರಾಘವ್ ಚಡ್ಡಾ ಮತ್ತು ಪರಿಣಿತಿ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆಯ ಆಚರಣೆಗಳು ಉದಯಪುರದಲ್ಲಿ ಸೆಪ್ಟೆಂಬರ್ 23 ರಂದು ಗ್ರೆನ್ಸ್ ಆಫ್ ಲವ್ ಎಂಬ ಶೀರ್ಷಿಕೆಯೊಂದಿಗೆ ಪ್ರಾರಂಭವಾಗಿವೆ. ಹಳದಿ ಶಾಸ್ತ್ರ ಮತ್ತು ಮೆಹೆಂದಿ ಸಮಾರಂಭಗಳು ನಡೆದಿವೆ. ಇವುಗಳ ನಂತರ 1990 ರ ದಶಕದ ಥೀಮ್ ಪಾರ್ಟಿ, ಡಿಜೆ ಸುಮಿತ್ ಸೇಥಿ ಅವರ ಕಾರ್ಯಕ್ರಮವಿತ್ತು.

ಸೆಪ್ಟೆಂಬರ್ 24 ರಂದು ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ವಿವಾಹ ನಡೆದ ಕಾರಣ, ನವ ದಂಪತಿ ಈಗ ಮದುವೆಯ ಆರತಕ್ಷತೆಗಾಗಿ ಚಂಡೀಗಢಕ್ಕೆ ತೆರಳಲಿದ್ದಾರೆ. ಇದಾದ ನಂತರ ದೆಹಲಿಯಲ್ಲಿ ಮತ್ತೊಂದು ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿ ಮುಂಬೈನಲ್ಲಿ ಮೂರನೇ ಮದುವೆಯ ಪಾರ್ಟಿ ನಡೆಸುತ್ತಾರೋ ಇಲ್ಲವೋ ಮಾಹಿತಿಯಿಲ್ಲ.

More from Filmibeat

English summary
Parineeti Chopra, Raghav Chadha share first wedding photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X