ಬ್ಯಾಡ್ಮಿಂಟನ್ ತಾರೆ 'ಸೈನಾ' ಬಯೋಪಿಕ್ ಬಿಡುಗಡೆಗೆ ದಿನಾಂಕ ನಿಗದಿ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನ ತೆರೆಮೇಲೆ ಬರಲು ರೆಡಿಯಾಗಿದೆ. ಸುಮಾರು ಮೂರು ವರ್ಷಗಳಿಂದ ಸೈನಾ ಬಯೋಪಿಕ್ ತಯಾರಾಗುತ್ತಿದ್ದು, ಇದೀಗ ರಿಲೀಸ್ ಗೆ ರೆಡಿಯಾಗಿದೆ. ಖ್ಯಾತ ಆಟಗಾರ್ತಿಯ ಜೀವನ ಹೇಗಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಕೊನೆಗೂ ಸೈನಾ ಜೀವನವನ್ನು ತೆರೆಮೇಲೆ ನೋಡುವ ಕ್ಷಣ ಬಂದಿದೆ. ಹೌದು, ಬಹುನಿರೀಕ್ಷೆಯ ಸೈನಾ ಬಯೋಪಿಕ್ ರಿಲೀಸ್ ಡೇಟ್ ಬಹಿರಂಗವಾಗಿದೆ. ಸಿನಿಮಾ ಇದೇ ತಿಂಗಳು ಕೊನೆಯಲ್ಲಿ ಅಂದರೆ ಮಾರ್ಚ್ 26ರಂದು ತೆರೆಗೆ ಬರುತ್ತಿದೆ.

ಈ ಬಗ್ಗೆ ಸಿನಿಮಾತಂಡ ಅಧಿಕೃತ ಘೋಷಣೆ ಮಾಡಿದ್ದು, ಚಿತ್ರದ ಆಕರ್ಷಕ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಸೈನಾ ಪಾತ್ರದಲ್ಲಿ ಬಾಲಿವುಡ್ ಪರಿಣೀತಿ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಈ ಮೊದಲು ಸೈನಾ ಪಾತ್ರದಲ್ಲಿ ನಟಿ ಶ್ರದ್ಧಾ ಕಪೂರ್ ನಟಿಸಿದ್ದರು. ಚಿತ್ರೀಕರಣ ಕೂಡ ಪ್ರಾರಂಭವಾಗಿತ್ತು. ಆದರೆ ಕಾರಣಾಂತರದಿಂದ ಶ್ರದ್ಧಾ ಸಿನಿಮಾದಿಂದ ಔಟ್ ಆದರು. ಬಳಿಕ ಶ್ರದ್ಧಾ ಜಾಗಕ್ಕೆ ಪರಿಣೀತಿ ಎಂಟ್ರಿ ಕೊಟ್ಟಿದ್ದಾರೆ.

Parineeti Chopras Saina Nehwal biopic set to release on March 26th

ಚಿತ್ರಕ್ಕಾಗಿ ಪರಿಣೀತಿ ಸಾಕಷ್ಟು ಶ್ರಮಿಸಿದ್ದಾರೆ. ಸೈನಾ ಪಾತ್ರಕ್ಕಾಗಿ ಪರಿಣೀತಿ ಸಖತ್ ತಯಾರಿ ನಡೆಸಿದ್ದಾರೆ. ಚಿತ್ರೀಕರಣ ಸಮಯದಲ್ಲಿ ಖುದ್ದು ಸೈನಾ ನೆಹ್ವಾಲ್ ಅವರೇ ಜೊತೆಯಲ್ಲಿದ್ದು, ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.

ಈಗಾಗಲೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಸೈನಾ ಬಯೋಪಿಕ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಚಿತ್ರಕ್ಕೆ ಅಮೋಲ್ ಗುಪ್ಟೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಆಟಗಾರರ ಬಯೋಪಿಕ್ ತೆರೆಮೇಲೆ ಬಂದು ಸಕ್ಸಸ್ ಕಂಡಿವೆ. ಇದು ಸಕ್ಸಸ್ ಲಿಸ್ಟ್ ಗೆ ಸೇರುತ್ತಾ ಎಂದು ಕಾದು ನೋಡಬೇಕು.

Recommended Video

ಹೀರೋ ಸಂಪ್ರದಾಯವನ್ನು ಹೊಡೆದುಹಾಕಿದ ದರ್ಶನ್ | Roberrt Audio Launch in Hubli | Darshan

More from Filmibeat

English summary
Parineeti Chopra starrer Saina Nehwal biopic set to release on March 26th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X