ಪರಿಣಿತಿಯ 'ಕೆಂಪು' ಕೂದಲು ಕಂಡು 'ಭೂತ' ಅಂತಾವ್ರೆ ನೆಟ್ಟಿಗರು.!
ಇಷ್ಟು ದಿನ ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇದ್ದ ಪರಿಣಿತಿ ಛೋಪ್ರಾ ಇದೀಗ ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ. ತುಂಬಾ ಬಿಗಿಯಾದ ಬಟ್ಟೆಯನ್ನು ಧರಿಸಿ ಕೆಲ ದಿನಗಳ ಹಿಂದೆಯಷ್ಟೇ ನಟಿ ಪರಿಣಿತಿ ಛೋಪ್ರಾ ಟ್ರೋಲ್ ಆಗಿದ್ದರು. ಇದೀಗ ತಮ್ಮ ಕೂದಲಿನ ಬಣ್ಣವನ್ನ ಬದಲಾಯಿಸಿಕೊಂಡು ಎಲ್ಲರಿಂದ ಲೇವಡಿಗೆ ಒಳಗಾಗಿದ್ದಾರೆ.
ಪ್ರಿಯಾಂಕಾ ಛೋಪ್ರಾ ನಿಶ್ಚಿತಾರ್ಥ ಸಮಾರಂಭ ಆದ್ಮೇಲೆ, ಮಾಲ್ದೀವ್ಸ್ ಗೆ ಹೋಗಿದ್ದ ಪರಿಣಿತಿ ಛೋಪ್ರಾ ಈಗ ಮುಂಬೈಗೆ ವಾಪಸ್ ಆಗಿದ್ದಾರೆ. ಮುಂಬೈಗೆ ವಾಪಸ್ ಆಗುತ್ತಿದ್ದಂತೆಯೇ, ತಮ್ಮ ಲುಕ್ ಹಾಗೂ ಸ್ಟೈಲ್ ನ ಪರಿಣಿತಿ ಛೋಪ್ರಾ ಬದಲಾಯಿಸಿಕೊಂಡಿದ್ದಾರೆ.
ಕೂದಲನ್ನು ಸಂಪೂರ್ಣವಾಗಿ ಕೆಂಪು ಮಯ ಮಾಡಿಕೊಂಡಿರುವ ಪರಿಣಿತಿ ಛೋಪ್ರಾ ರನ್ನ ನೋಡಿ ನೆಟ್ಟಿಗರು ಇನ್ಸ್ಟಾಗ್ರಾಮ್ ನಲ್ಲಿ ಕಾಲೆಳೆಯುತ್ತಿದ್ದಾರೆ. ಪರಿಣಿತಿ ಛೋಪ್ರಾ ರ ಕೆಂಪು ಕೂದಲನ್ನು ನೋಡಿ 'ಭೂತ' ಅಂತ ಹಲವರು ಆಡಿಕೊಂಡು ನಗುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನ ನೋಡಿರಿ...

'ಕೆಂಪಿ' ಪರಿಣಿತಿ ಛೋಪ್ರಾ
ಅಷ್ಟಕ್ಕೂ, ನಟಿ ಪರಿಣಿತಿ ಛೋಪ್ರಾ ತಮ್ಮ ಕೂದಲಿಗೆ ಕೆಂಪು ಕಲರ್ ಹಾಕಿಸಿಕೊಂಡಿರುವುದು ಹೊಸ ಚಿತ್ರಕ್ಕಾಗಿ. ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ 'ಜಬ್ಬಾರಿಯಾ ಜೋಡಿ' ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಪರಿಣಿತಿ ಛೋಪ್ರಾ, ಅದೇ ಚಿತ್ರಕ್ಕಾಗಿ ಈ ಹೊಸ ಅವತಾರ ತಾಳಿದ್ದಾರೆ.

ನಿರ್ಮಾಪಕಿ ಕೊಟ್ಟ ಐಡಿಯಾ ಅಂತೆ.!
ಹೊಸ ಪ್ರಯೋಗ ಮಾಡಬೇಕು ಅಂತ ಇದ್ದ ಪರಿಣಿತಿ ಛೋಪ್ರಾಗೆ ರೆಡ್ ಹೇರ್ ಕಲರ್ ಮಾಡಿಸಿಕೊಳ್ಳುವ ಐಡಿಯಾ ಕೊಟ್ಟಿದ್ದು ನಿರ್ಮಾಪಕಿ ರುಚಿಕಾ ಅಂತೆ. ರುಚಿಕಾ ಹೇಳಿದ ಮಾತಿನಂತೆ ತಮ್ಮ ಕೂದಲಿನ ಬಣ್ಣವನ್ನೇ ಪರಿಣಿತಿ ಬದಲಾವಣೆ ಮಾಡಿಕೊಂಡಿದ್ದಾರೆ.

ತಲೆ ಕೆಟ್ಟಿದ್ಯಾ.?
ಪರಿಣಿತಿ ಛೋಪ್ರಾ ಅವರ ಹೊಸ ಲುಕ್ ನೋಡಿ, ''ತಲೆ ಕೆಟ್ಟಿದ್ಯಾ.?'', ''ಇದು ಕೆಟ್ಟದಾಗಿ ಕಾಣುತ್ತಿದೆ'', ''ತಾತ್ಕಾಲಿಕ ಹೇರ್ ಕಲರ್ ಆಗಿದ್ದರೆ ಸಾಕು'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

'ಭೂತ'.!
ಕೆಲ ನೆಟ್ಟಿಗರಂತೂ ಪರಿಣಿತಿ ಛೋಪ್ರಾಗೆ ''ಭೂತ'' ಅಂತೆಲ್ಲಾ ಕರೆಯಲು ಶುರು ಮಾಡಿದ್ದಾರೆ. ಕತ್ರಿನಾ ಕೈಫ್ ಗೆ ಕೆಂಪು ಕೂದಲು ಸೂಟ್ ಆಗಿತ್ತು. ಆದ್ರೆ, ಪರಿಣಿತಿ ಛೋಪ್ರಾಗೆ ಅದು ಸರಿ ಹೊಂದುತ್ತಿಲ್ಲ ಅಂತ ಕೆಲವರು ಕಂಪೇರ್ ಕೂಡ ಮಾಡುತ್ತಿದ್ದಾರೆ. ಒಟ್ನಲ್ಲಿ, ಪರಿಣಿತಿ ಛೋಪ್ರಾ ಅವರ ಹೊಸ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ಏನೂ ಸಿಕ್ಕಿಲ್ಲ.


Click it and Unblock the Notifications











