'ಪಠಾಣ್' ಸಕ್ಸಸ್ ಬೆನ್ನಲ್ಲೇ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಶಾರುಖ್: ಬೆಲೆ ಎಷ್ಟು ಕೋಟಿ ಗೊತ್ತಾ?

By ಫಿಲ್ಮಿಬೀಟ್ ಡೆಸ್ಕ್

ಶಾರುಕ್ ಖಾನ್ ನಟನೆಯ 'ಪಠಾಣ್' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಈಗಾಗಲೇ ಸಿನಿಮಾ 1050 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 525 ಕೋಟಿ ರೂ. ನೆಟ್‌ ಕಲೆಕ್ಷನ್ ಮಾಡಿರುವ ಅಂದಾಜಿದೆ. 'ಜೀರೋ' ಸಿನಿಮಾದಿಂದ 4 ವರ್ಷಗಳ ಹಿಂದೆ ಸೋತು ಸುಣ್ಣವಾಗಿದ್ದ ಕಿಂಗ್‌ ಖಾನ್ 'ಪಠಾಣ್' ಆಗಿ ಎದ್ದು ಬಂದಿದ್ದಾರೆ.

ಜನವರಿ 25ಕ್ಕೆ ರಿಲೀಸ್ ಆಗಿದ್ದ ಆಕ್ಷನ್ ಎಂಟರ್‌ಟೈನರ್ 'ಪಠಾಣ್' ಸಿನಿಮಾ ಮೊದಲ ದಿನದಿಂದಲೂ ಭರ್ಜರಿ ಸದ್ದು ಮಾಡ್ತಿದೆ. ರಿಲೀಸ್‌ಗೂ ಮುನ್ನ ಹುಟ್ಟಾಕಿದ ವಿವಾದಗಳಿಂದ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಎನ್ನುವ ಅನುಮಾನ ಇತ್ತು. ಆದರೆ ಅದನ್ನೆಲ್ಲಾ ಮೀರಿ 'ಪಠಾಣ್' ಗೆದ್ದು ಬೀಗಿತ್ತು. ಭರ್ಜರಿ ಓಪನಿಂಗ್ ಪಡೆದಿದ್ದ ಸಿನಿಮಾ ದಿನದಿಂದ ದಿನಕ್ಕೇ ಬಾಕ್ಸಾಫೀಸ್ ಶೇಕ್ ಮಾಡುತ್ತಾ ಬಂದಿತ್ತು. ಶಾರುಕ್ ಖಾನ್ ಅಭಿಮಾನಿಗಳಂತೂ ಸಿನಿಮಾ ಸಕ್ಸಸ್‌ ನೋಡಿ ಖುಷಿಯಾಗಿದ್ದಾರೆ.

Pathaan actor Shahrukh Khan buys a Rolls-Royce 555 worth over Rs 10 crore

ಸದ್ಯ ಶಾರುಕ್ ಖಾನ್ ಹೊಸ ಕಾರು ಖರೀದಿಸಿದ್ದಾರೆ. ಶಾರುಕ್ ಮನೆ ಮನ್ನತ್‌ನಲ್ಲಿ ಕಳೆದೆರಡು ದಿನಗಳಿಂದ ಹೊಸ ಕಾರು ರೌಂಡ್ ಹೊಡೀತಿದೆ. ಶಾರುಖ್ ಬಿಳಿ ಬಣ್ಣದ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಕಾರಿನ ಒಡೆಯನಾಗಿದ್ಧಾರೆ. ಈ ಕಾರಿನ ಬೆಲೆ ಅಂದಾಜು 10 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ಭಾನುವಾರ ಕಿಂಗ್ ಖಾನ್ ಹೊಸ ಕಾರಿನಲ್ಲಿ ಸುತ್ತಾಡಲು ತೆರಳಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಖತ್ ವೈರಲ್ ಆಗ್ತಿದೆ. ಕೆಲ ದಿನಗಳ ಹಿಂದೆ ಬಾಲಿವುಡ್ ಬಾದ್‌ಶಾ 5 ಕೋಟಿ ರೂ. ಬೆಲೆ ವಾಚ್ ಧರಿಸಿ ಗಮನ ಸೆಳೆದಿದ್ದರು.

ವರ್ಷದ ಆರಂಭದಲ್ಲೇ 'ಪಠಾಣ್' ಸಿನಿಮಾ ಬಾಲಿವುಡ್‌ಗೆ ದೊಡ್ಡ ಹಿಟ್ ಕೊಟ್ಟಿದೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಾಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಭಯೋತ್ಪಾದಕರ ದುಷ್ಕೃತ್ಯಗಳನ್ನು ತಡೆಯುವ ಸೈನಿಕನಾಗಿ ಶಾರುಕ್ ಖಾನ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಯಶ್‌ ರಾಜ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ.

ಮಾರ್ಚ್ 22ಕ್ಕೆ 'ಪಠಾಣ್' ಸಿನಿಮಾ ಅಮೇಜಾನ್ ಪ್ರೈಂಗೆ ಬಂದಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಶಾರುಕ್ ಖಾನ್ ಸದ್ಯ ಅಟ್ಲಿ ನಿರ್ದೇಶನದ 'ಜವಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸ್ತಿದ್ದು ವಿಜಯ್ ಸೇತುಪತಿಸ ಸೇರಿದಂತೆ ದೊಡ್ಡ ತಾರಾಗಣವಿದೆ. ದಳಪತಿ ವಿಜಯ್, ಸಂಜಯ್ ದತ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ.

Pathaan actor Shahrukh Khan buys a Rolls-Royce 555 worth over Rs 10 crore

ರಾಜ್‌ಕುಮಾರ್ ಇರಾನಿ ನಿರ್ದೇಶನದ 'ಡಂಕಿ' ಚಿತ್ರದಲ್ಲೂ ಶಾರುಖ್ ನಟಿಸೋದು ಕನ್ಫರ್ಮ್ ಆಗಿದೆ. 'ಜವಾನ್' ನಂತರ ಈ ಸಿನಿಮಾ ಶುರುವಾಗಲಿದೆ. ಇನ್ನು ಸಲ್ಮಾನ್ ಖಾನ್ ನಟನೆಯ 'ಟೈಗರ್- 3' ಚಿತ್ರದಲ್ಲೂ ಕಿಂಗ್ ಖಾನ್ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Pathaan actor Shahrukh Khan buys a Rolls-Royce 555 worth over Rs 10 crore. Pathaan collects over Rs 1,000 crore at worldwide box office. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X