twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸಾಫೀಸ್‌ನಲ್ಲಿ 'ಪಠಾಣ್' ಬಿರುಗಾಳಿ: ಮೂರೇ ದಿನಕ್ಕೆ ಹಲವು ದಾಖಲೆಗಳು ಉಡೀಸ್

    |

    ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಸುನಾಮಿ ಸೃಷ್ಟಿಸಿದೆ. ಮೊದಲ ದಿನವೇ 'KGF- 2'ದಾಖಲೆ ಮುರಿದ್ದ ಸಿನಿಮಾ 2 ದಿನಕ್ಕೆ 219 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಸ್ವತಃ ಯಶ್ ರಾಜ್‌ ಫಿಲ್ಮ್ ಸಂಸ್ಥೆ ಈ ವಿಚಾರವನ್ನು ಘೋಷಿಸಿತ್ತು. ಸತತ 2 ದಿನ 100 ಕೋಟಿ ಕಲೆಕ್ಷನ್ ಮಾಡಿ ಹೊಸ ಇತಿಹಾಸ ನಿರ್ಮಿಸಿತ್ತು.

    ಸಿದ್ದಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಗೆಲುವಿ ಓಟ ಮುಂದುವರೆದಿದೆ. ಕೆಲಸದ ದಿನಗಳಲ್ಲೂ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೀತಿದೆ. ಬುಧವಾರ 106 ಕೋಟಿ ಗಳಿಸಿದ್ದ ಸಿನಿಮಾ ಗಣರಾಜ್ಯೋತ್ಸದ ದಿನ ಮತ್ತೊಂದು ಶತಕ ಬಾರಿಸಿತ್ತು. 3ನೇ ದಿನಕ್ಕೂ 'ಪಠಾಣ್' ಕ್ರೇಜ್ ಜೋರಾಗಿದ್ದು ಸಿನಿಮಾ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸುತ್ತಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಮುಖ ಮಾಡಿದ್ದಾರೆ. ವೀಕೆಂಡ್‌ನಲ್ಲಿ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಸುಳಿವು ಸಿಗುತ್ತಿದೆ.

    'ಪಠಾಣ್' ಸಿನಿಮಾಕ್ಕೆ ಬೇರೊಂದು ಹೆಸರು ಸೂಚಿಸಿದ ಕಂಗನಾ! ಏಕೆ?'ಪಠಾಣ್' ಸಿನಿಮಾಕ್ಕೆ ಬೇರೊಂದು ಹೆಸರು ಸೂಚಿಸಿದ ಕಂಗನಾ! ಏಕೆ?

    'ಪಠಾಣ್' ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಇನ್ನು ಏರಿಯಲ್ ಆಕ್ಷನ್ ಎಪಿಸೋಡ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡ್ತಿದೆ. ದೇಶಭಕ್ತಿಯ ಕಥೆ ಎಲ್ಲರಿಗೂ ಇಷ್ಟವಾಗ್ತಿದೆ.

    3 ದಿನಕ್ಕೆ 300 ಕೋಟಿ ಕಲೆಕ್ಷನ್

    3 ದಿನಕ್ಕೆ 300 ಕೋಟಿ ಕಲೆಕ್ಷನ್

    ಮೊದಲ ಎರಡು ದಿನ ತಲಾ 100 ಕೋಟಿ ಗಳಿಸಿದ್ದ 'ಪಠಾಣ್' ಸಿನಿಮಾ 3ನೇ ದಿನ 80 ಕೋಟಿ ಗಡಿ ದಾಟಿದೆ. ಹಾಗಾಗಿ ಮೊದಲ 3 ದಿನಕ್ಕೆ ಒಟ್ಟು ಕಲೆಕ್ಷನ್ 300 ಕೋಟಿ ದಾಟಿದೆ ಎಂದು ಅಂದಾಜಿಸಲಾಗುತ್ತದೆ. ಥಿಯೇಟರ್‌ಗಳಲ್ಲಿ 'ಪಠಾಣ್' ಕ್ರೇಜ್ ಕಮ್ಮಿ ಆಗಿಲ್ಲ. ಒಳ್ಳೆ ಸಿನಿಮಾಗಳು ಬಾರದೇ ಥಿಯೇಟರ್‌ನಿಂದ ದೂರಾಗಿದ್ದ ಹಿಂದಿ ಪ್ರೇಕ್ಷಕರು ಈ 'ಪಠಾಣ್' ಆರ್ಭಟ ನೋಡಲು ಥಿಯೇಟರ್‌ಗೆ ಬರ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಬಾಕ್ಸಾಫೀಸ್ ದಾಖಲೆಗಳನ್ನು ಅಳಿಸಿ ಹಾಕುವ ಸುಳಿವು ಸಿಗುತ್ತಿದೆ.

    ಬಾಲಿವುಡ್‌ಗೆ ಗೆಲುವಿನ ಟಾನಿಕ್

    ಬಾಲಿವುಡ್‌ಗೆ ಗೆಲುವಿನ ಟಾನಿಕ್

    ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ 'ಪಠಾಣ್' ಗೆಲುವಿನ ಟಾನಿಕ್ ನೀಡಿದೆ. ಹಿಂದಿ ಚಿತ್ರರಂಗದಲ್ಲಿ ಒಂದೊಳ್ಳೆ ಹಿಟ್ ಸಿನಿಮಾ ಬಂದು ವರ್ಷಗಳೇ ಕಳೆದಿತ್ತು. ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಬಾಲಿವುಡ್ ಕಥೆ ಮುಗಿದೇ ಹೋಯ್ತಾ? ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ 'ಪಠಾಣ್' ಗೆಲುವಿನ ಬರವನ್ನು ನೀಗಿಸಿದೆ. ಒಳ್ಳೆ ಸಿನಿಮಾ ಬಂದರೆ ಬ್ಯಾನ್, ಬಾಯ್ಕಾಟ್ ಯಾವುದು ನಡೆಯುವುದಿಲ್ಲ ಎನ್ನುವುದನ್ನು ಕೂಡ ಈ ಸಿನಿಮಾ ಸಾಬೀತು ಮಾಡಿದೆ.

    ಶಾರುಖ್ ಭರ್ಜರಿ ಕಂಬ್ಯಾಕ್

    ಶಾರುಖ್ ಭರ್ಜರಿ ಕಂಬ್ಯಾಕ್

    4 ವರ್ಷಗಳಿಂದ ಶಾರುಖ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. KGF ಚಾಪ್ಟರ್‌- 1 ಎದುರು ಶಾರುಖ್ ನಟನೆಯ 'ಜೀರೊ' ಸಿನಿಮಾ ಸೋತಿತ್ತು. ಆ ನಂತರ ಕಿಂಗ್ ಖಾನ್ ಸೈಲೆಂಟ್ ಆಗಿದ್ದರು. ನಡುವೆ ಕೊರೋನಾ ಹಾವಳಿಯಿಂದ ಸಿನಿಮಾಗಳು ಮತ್ತಷ್ಟು ತಡವಾಗಿತ್ತು. 4 ವರ್ಷಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮೊದಲ ದಿನವೇ KGF-2 ಹಿಂದಿ ಕಲೆಕ್ಷನ್ ಹಿಂದಿಕ್ಕಿ 'ಪಠಾಣ್' ಗೆದ್ದಿದ್ದಾನೆ. ಬಾಲಿವುಡ್ ಬಾದ್‌ಶಾ ಕಂಬ್ಯಾಕ್ ಅಭಿಮಾನಿಗಳಿಗೆ ಖುಷಿ ತಂದಿದೆ. ಇನ್ನು ಸೆಲೆಬ್ರೆಟಿಗಳು ಕೂಡ ಸಿನಿಮಾ ನೋಡಿ ಮೆಚ್ಚಿ ಕೊಂಡಾಡುತ್ತಿದ್ದಾರೆ.

    ಬಾಯ್ಕಾಟ್ ವಿರುದ್ಧ ಗೆದ್ದ 'ಪಠಾಣ್'

    ಬಾಯ್ಕಾಟ್ ವಿರುದ್ಧ ಗೆದ್ದ 'ಪಠಾಣ್'

    ಸಿನಿಮಾ ರಿಲೀಸ್‌ಗೂ ಮೊದಲೇ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. 'ಬೇಷರಂ ರಂಗ್‌' ಹಾಡಿನ ವಿಚಾರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದರು. ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದಿದ್ದರು. ಬುಧವಾರ ಬಿಹಾರ ಸೇರಿದಂತೆ ಕೆಲವೆಡೆ ಸಿನಿಮಾ ಬಿಡುಗಡೆಗೆ ವಿರೋಧಿಸಿ ಪ್ರತಿಭಟಿಸಿದ್ದರು. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಗೆಲುವು ಕಂಡಿದೆ. ಬಾಕ್ಸಾಫೀಸ್‌ನಲ್ಲಿ 3 ದಿನಕ್ಕೆ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

    English summary
    Pathaan crosses ₹ 300 Crs Gross at the WW Box office in 3 days. The film has already broken the opening day collection record of War and KGF -2. Know more.
    Saturday, January 28, 2023, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X