ಮೊದಲ ದಿನ ಕಲೆಕ್ಷನ್‌ನಲ್ಲಿ ಕೆಜಿಎಫ್ ದಾಖಲೆಯನ್ನು ಮುರಿಯಲಿಲ್ಲ ಪಠಾಣ್; ಇಲ್ಲಿದೆ ಮಾಹಿತಿ

Pathaan failed to break KGF Chapter 2 first day worldwide collection

ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪಠಾಣ್ ನಿನ್ನೆಯಷ್ಟೇ ( ಜನವರಿ 25 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಆರಂಭದಿಂದಲೇ ಬಾಯ್‌ಕಟ್ ವಿರೋಧವನ್ನು ಎದುರಿಸಿದ್ದ ಪಠಾಣ್ ಚಿತ್ರ ಬೇಷರಮ್ ರಂಗ್ ಹಾಡಿನ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ವಿವಾದಕ್ಕೆ ಕಾರಣವಾಗಿತ್ತು.

ಇನ್ನು ಚಿತ್ರ ಬಿಡುಗಡೆಗೂ ಮುನ್ನ ಹಲವೆಡೆ ಚಿತ್ರಮಂದಿರಗಳಿಗೆ ನುಗ್ಗಿ ಪಠಾಣ್ ಚಿತ್ರದ ಪೋಸ್ಟರ್ ಹಾಗೂ ಸ್ಟಾಂಡಿಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಹೀಗೆ ಇಷ್ಟೆಲ್ಲಾ ದೊಡ್ಡ ಮಟ್ಟದ ವಿರೋಧಗಳನ್ನು ಎದುರಿಸಿದ ಪಠಾಣ್ ಚಿತ್ರ ಎದೆಲ್ಲವನ್ನೂ ಮೀರಿ ಆರಂಭವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರ ಎಂಬ ದಾಖಲೆಯನ್ನೂ ಸಹ ಪಠಾಣ್ ಬರೆದಿದೆ.

ಇನ್ನು ವಿಶ್ವದಾದ್ಯಂತ ಮೊದಲ ದಿನ 101.2 ಕೋಟಿ ಗಳಿಕೆ ಮಾಡಿದ ಪಠಾಣ್ ಚಿತ್ರ ವಿಶ್ವದಾದ್ಯಂತ ಬಿಡುಗಡೆ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ವಿಶ್ವದಾದ್ಯಂತ ಬಿಡುಗಡೆ ದಿನ ಅತಿಹೆಚ್ಚು ಗಳಿಕೆ ಮಾಡಿರುವ ಭಾರತದ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಆರ್ ಆರ್ ಆರ್ - 222.5 ಕೋಟಿ ರೂಪಾಯಿಗಳು

2. ಬಾಹುಬಲಿ 2 - 213 ಕೋಟಿ ರೂಪಾಯಿಗಳು

3. ಕೆಜಿಎಫ್ ಚಾಪ್ಟರ್ 2 - 165.1 ಕೋಟಿ ರೂಪಾಯಿಗಳು

4. ಸಾಹೋ - 105.5 ಕೋಟಿ ರೂಪಾಯಿಗಳು

5. ಪಠಾಣ್ - 101.2 ಕೋಟಿ ರೂಪಾಯಿಗಳು

More from Filmibeat

English summary
Pathaan failed to break KGF Chapter 2 first day worldwide collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X