ಎರಡನೇ ಶನಿವಾರ ಬೆಂಗಳೂರಿನಲ್ಲಿ ಪಠಾಣ್‌ಗೆ 491 ಶೋಸ್; ಕ್ರಾಂತಿಗೆ ಎಷ್ಟು?

By ಫಿಲ್ಮಿಬೀಟ್ ಡೆಸ್ಕ್

ಈ ವರ್ಷದ ಮೊದಲ ತಿಂಗಳು ಮುಕ್ತಾಯಗೊಂಡಿದ್ದು, ವರ್ಷದ ಆರಂಭದಲ್ಲಿಯೇ ಹಲವು ಚಿತ್ರಗಳು ಅಬ್ಬರಿಸಿ ನೂರುನ ಕೋಟಿ ಕ್ಲಬ್ ಸೇರುವ ಮೂಲಕ ಗೆಲುವು ಸಾಧಿಸಿದವು. ಇನ್ನು ಕಳೆದ ವರ್ಷ ಸ್ಟಾರ್‌ಗಳ ಚಿತ್ರಗಳಾವುವೂ ಸಹ ಗೆಲ್ಲದೇ ಮಕಾಡೆ ಮಲಗಿದ್ದ ಬಾಲಿವುಡ್ ಚಿತ್ರರಂಗ ಈ ವರ್ಷದ ಮೊದಲ ತಿಂಗಳಿನಲ್ಲಿಯೇ ಪುಟಿದೆದ್ದಿದೆ.

ಹೌದು, ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ತೆಗೆಯುತ್ತಿದ್ದು, ಬಿಡುಗಡೆಯ ದಿನವೇ ಬರೋಬ್ಬರಿ 106 ಕೋಟಿ ಗಳಿಸಿ ಅಬ್ಬರಿಸಿತ್ತು. ಇನ್ನು ತನ್ನ ಆರ್ಭಟವನ್ನು ಒಂದೇ ದಿನಕ್ಕೆ ಮುಗಿಸದ ಪಠಾಣ್ ಮೊದಲ ಏಳು ದಿನಗಳಲ್ಲಿ 634 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಹುದೊಡ್ಡ ಸಮಯದ ಅಂತರದ ಬಳಿಕ ಹಿಂದಿ ಚಿತ್ರವೊಂದು ಇಷ್ಟು ಕಲೆಕ್ಷನ್ ಮಾಡಿರುವುದು ಬಾಲಿವುಡ್‌ಗೆ ಮರುಜೀವ ಬಂದಂತಾಗಿದೆ.

ಇನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾತ್ರವಲ್ಲದೇ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲೂ ಸಹ ಪಠಾಣ್ ಆರ್ಭಟ ಜೋರಾಗಿದೆ. ಪ್ರಾದೇಶಿಕ ಚಿತ್ರಗಳಿಗೆ ಕಠಿಣ ಪೈಪೋಟಿ ನೀಡುತ್ತಿರುವ ಪಠಾಣ್ ಕರ್ನಾಟಕದಲ್ಲಿ ಮೊದಲ ದಿನ 6.5 ಕೋಟಿ ಗಳಿಸಿ ಭರ್ಜರಿ ಆರಂಭ ಪಡೆದುಕೊಂಡಿತ್ತು. ಇನ್ನು ರಾಜ್ಯದಲ್ಲಿ ಮೊದಲ ಐದು ದಿನಗಳಲ್ಲಿಯೇ ಇಪ್ಪತ್ತು ಕೋಟಿ ಕ್ಲಬ್ ಸೇರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಪಠಾಣ್ ಎರಡನೇ ವಾರವೂ ಸಹ ತನ್ನ ಓಟವನ್ನು ಮುಂದುವರಿಸಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ಹಿಡಿತವನ್ನು ಸಾಧಿಸಿರುವ ಪಠಾಣ್ ಎರಡನೇ ಶನಿವಾರದಂದು ( ಇಂದು, ಫೆಬ್ರವರಿ 4 ) ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಗಳಿಗಿಂತ ಹೆಚ್ಚು ಪ್ರದರ್ಶನವನ್ನು ಪಡೆದುಕೊಂಡಿದೆ. ಹಾಗಾದರೆ ಈ ದಿನದಂದು ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಅತಿಹೆಚ್ಚು ಪ್ರದರ್ಶನ ಪಡೆದುಕೊಂಡಿರುವ ಚಿತ್ರಗಳು

ಅತಿಹೆಚ್ಚು ಪ್ರದರ್ಶನ ಪಡೆದುಕೊಂಡಿರುವ ಚಿತ್ರಗಳು

ಇಂದು ( ಫೆಬ್ರವರಿ 4 ) ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಚಿತ್ರಗಳ ಟಾಪ್ 5 ಪಟ್ಟಿ ಇಲ್ಲಿದೆ..

1. ಪಠಾಣ್ : 491 ಪ್ರದರ್ಶನಗಳು

2. ಕ್ರಾಂತಿ : 226 ಪ್ರದರ್ಶನಗಳು

3. ಮೈಕಲ್ : 159 ಪ್ರದರ್ಶನಗಳು

4. ದ ವುಮೆನ್ ಕಿಂಗ್ :92 ಪ್ರದರ್ಶನಗಳು

5. ರನ್ ಬೇಬಿ ರನ್: 77 ಪ್ರದರ್ಶನಗಳು

ಕ್ರಾಂತಿಗಿಂತ ಪಠಾಣ್‌ಗೆ ಹೆಚ್ಚು ಶೋ, ಕನ್ನಡಿಗರ ಆಕ್ರೋಶ

ಕ್ರಾಂತಿಗಿಂತ ಪಠಾಣ್‌ಗೆ ಹೆಚ್ಚು ಶೋ, ಕನ್ನಡಿಗರ ಆಕ್ರೋಶ

ಇನ್ನು ರಾಜ್ಯದ ಬೆಂಗಳೂರಿನಲ್ಲಿ ಕನ್ನಡದ ಕ್ರಾಂತಿ ಚಿತ್ರಕ್ಕಿಂತ ಹಿಂದಿಯ ಪಠಾಣ್ ಚಿತ್ರಕ್ಕೆ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಕಾರಣ ದರ್ಶನ್ ಅಭಿಮಾನಿಗಳು ಹಾಗೂ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲಿಯೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪಠಾಣ್‌ಗೆ ಹೆಚ್ಚು ಪ್ರದರ್ಶನ ನೀಡಿ ಕ್ರಾಂತಿಗೆ ತೀರಾ ಕಡಿಮೆ ಪ್ರದರ್ಶನಗಳನ್ನು ನೀಡಿರುವುದು ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

ಕ್ರಾಂತಿ ಸಕ್ಸಸ್ ಮೀಟ್

ಕ್ರಾಂತಿ ಸಕ್ಸಸ್ ಮೀಟ್

ಇತ್ತ ಕ್ರಾಂತಿ ಚಿತ್ರತಂಡ ಮೊನ್ನೆಯಷ್ಟೇ ಚಿತ್ರದ ಸಕ್ಸಸ್ ಮೀಟ್ ಅನ್ನು ಆಚರಿಸಿದೆ. ಚಿತ್ರ 109 ಕೋಟಿ ಗಳಿಕೆ ಮಾಡಿದೆ ಎಂದು ನಟದ ಸಕ್ಸಸ್ ಮೀಟ್‌ನಲ್ಲಿ ನಟ ದರ್ಶನ್, ನಟಿ ರಚಿತಾ ರಾಮ್, ನಿರ್ದೇಶಕ ವಿ ಹರಿಕೃಷ್ಣ ಹಾಗೂ ಚಿತ್ರದ ನಿರ್ಮಾಪಕರು ಸೇರಿದಂತೆ ಹಲವರು ಭಾಗವಹಿಸಿದ್ದರು. ಇನ್ನು 109 ಕೋಟಿ ಎಂದು ಬರೆಯಲಾಗಿದ್ದ ಕೇಕ್ ಅನ್ನು ಚಿತ್ರತಂಡ ಕಟ್ ಮಾಡಿ ಸಂಭ್ರಮಿಸಿತ್ತು.

More from Filmibeat

English summary
Pathaan got 491 shows while Kranti got 226 shows in Bangalore on Second Saturday. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X