ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ಯಾವ ಚಿತ್ರಕ್ಕೆ ಎಷ್ಟು ಪ್ರದರ್ಶನ? ಪಠಾಣ್ ಓಟ ನಿಂತಿಲ್ಲ!

ಕಳೆದ ಜನವರಿ 25ರಂದು ಬಿಡುಗಡೆಗೊಂಡ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಮ್ ನಟನೆಯ ಬಹು ನಿರೀಕ್ಷಿತ ಪಠಾಣ್ ಸಿನಿಮಾ ಬಾಯ್‌ಕಟ್ ಟ್ರೆಂಡ್ ಅನ್ನು ಹೀನಾಯವಾಗಿ ಸೋಲಿಸಿ ವಿಜಯ ಪತಾಕೆಯನ್ನು ದೊಡ್ಡ ಮಟ್ಟದಲ್ಲಿ ಹಾರಿಸಿದೆ.

ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 106 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಪಠಾಣ್ ಸಿನಿಮಾ 23 ದಿನಗಳನ್ನು ಪೂರೈಸುವ ಸಮಯಕ್ಕೆ 1000 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಹೀಗೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಪಠಾಣ್ ಚಿತ್ರದ ಹವಾ ಓಟಿಟಿ ಯುಗದಲ್ಲೂ ಚಿತ್ರ 25 ದಿನಗಳ ಸಮೀಪಕ್ಕೆ ಬಂದರೂ ಸಹ ಕಡಿಮೆಯಾಗಿಲ್ಲ.

ದೇಶದ ಹಲವು ಪ್ರಮುಖ ನಗರಗಳಲ್ಲಿ ಅಬ್ಬರಿಸುತ್ತಿರುವ ಪಠಾಣ್ ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರನ್ನು ಹೊಂದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಸಹ ಹಲವು ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಲು ಸಜ್ಜಾಗಿದೆ. ಪಠಾಣ್ ಬಿಡುಗಡೆಯಾದ ಬಳಿಕ ಹಲವು ಚಿತ್ರಗಳು ತೆರೆಕಂಡು ಪೈಪೋಟಿ ಕೊಟ್ಟರೂ ಸಹ ಪಠಾಣ್ ಯಶಸ್ವಿ ಪ್ರದರ್ಶನವನ್ನು ಮುಂದುವರಿಸಿದೆ. ಇನ್ನು ಇಂದು ( ಫೆಬ್ರವರಿ 17 ) ಶುಕ್ರವಾರ ಮತ್ತೊಂದಷ್ಟು ಚಿತ್ರಗಳು ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿವೆ. ಆದರೂ ಸಹ ಪಠಾಣ್ ಬೆಂಗಳೂರಿನಲ್ಲಿ ಇಂದು ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೆ ಇಂದು ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಚಿತ್ರಗಳ ಟಾಪ್ 5 ಪಟ್ಟಿ ಹೇಗಿದೆ, ಪಠಾಣ್ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಪಠಾಣ್‌ಗೆ 94 ಪ್ರದರ್ಶನಗಳು!

ಪಠಾಣ್‌ಗೆ 94 ಪ್ರದರ್ಶನಗಳು!

ಇಂದು ( ಫೆಬ್ರವರಿ 17 ) ಹಾಲಿವುಡ್‌ನ ಆಂಟ್‌ಮ್ಯಾನ್, ಧನುಷ್ ನಟನೆಯ ವಾತಿ, ಬಾಲಿವುಡ್‌ನ ಶೆಹ್ಜಾದ ಹಾಗೂ ಕನ್ನಡದ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟನೆಯ ಲವ್ ಬರ್ಡ್ಸ್ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೊಂಡಿವೆ. ಹೀಗಿದ್ದರೂ ಸಹ ಪಠಾಣ್ ಇಂದು ಬೆಂಗಳೂರಿನಲ್ಲಿ 94 ಪ್ರದರ್ಶನಗಳನ್ನು ಗಿಟ್ಟಿಸಿಕೊಂಡಿದ್ದು, ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಸಿನಿಮಾಗಳ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಟಾಪ್ 5 ಚಿತ್ರಗಳು

ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಟಾಪ್ 5 ಚಿತ್ರಗಳು

ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನವನ್ನು ಪಡೆದುಕೊಂಡ ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

1. ಆಂಟ್‌ಮ್ಯಾನ್ - 407 ಪ್ರದರ್ಶನಗಳು ( ಹೊಸ ಬಿಡುಗಡೆ )

2. ವಾತಿ / ಸರ್ - 292 ಪ್ರದರ್ಶನಗಳು ( ಹೊಸ ಬಿಡುಗಡೆ )

3. ಶೆಹ್ಝಾದಾ - 206 ಪ್ರದರ್ಶನಗಳು ( ಹೊಸ ಬಿಡುಗಡೆ )

4. ಲವ್ ಬರ್ಡ್ಸ್ - 136 ಪ್ರದರ್ಶನಗಳು ( ಹೊಸ ಬಿಡುಗಡೆ )

5. ಪಠಾಣ್ - 94 ಪ್ರದರ್ಶನಗಳು ( ಹೊಸ ಬಿಡುಗಡೆ )

ನಾಲ್ಕು ಕನ್ನಡ ಚಿತ್ರಗಳ ಬಿಡುಗಡೆ

ನಾಲ್ಕು ಕನ್ನಡ ಚಿತ್ರಗಳ ಬಿಡುಗಡೆ

ಇನ್ನು ಇಂದು ಬೆಂಗಳೂರಿನಲ್ಲಿ ನಾಲ್ಕು ಕನ್ನಡ ಚಿತ್ರಗಳು ತೆರೆ ಕಾಣುತ್ತಿವೆ. ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಟನೆಯ ಖೆಯೊಸ್, ಒಂದೊಳ್ಳೆ ಲವ್ ಸ್ಟೋರಿ, ದೊಡ್ಡ ಹಟ್ಟಿ ಬೋರೇಗೌಡ ಹಾಗೂ ಡಾರ್ಲಿಂಗ್ ಕೃಷ್ಣ ನಟನೆಯ ಲವ್ ಬರ್ಡ್ಸ್ ಈ ನಾಲ್ಕು ಚಿತ್ರಗಳು ತೆರೆಗೆ ಬಂದಿದ್ದು, ಈ ಪೈಕಿ ಲವ್ ಬರ್ಡ್ಸ್ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡು ದೊಡ್ಡ ಬಿಡುಗಡೆ ಕಂಡಿದೆ.

More from Filmibeat

English summary
Pathaan got 94 shows in Bangalore on it's 24th day and roaring at box office. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X