ಹಿಂದಿಯಲ್ಲಿ ಕೆಜಿಎಫ್ ಹಿಂದಿಕ್ಕಿದ ಪಠಾಣ್ ಬಾಹುಬಲಿ 2 ಚಿತ್ರವನ್ನು ಹಿಂದಿಕ್ಕಲು ಇನ್ನೆಷ್ಟು ಗಳಿಸಬೇಕು?

ಕಳೆದೆರಡು ವರ್ಷಗಳಲ್ಲಿ ಎಂತಹದ್ದೇ ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೂ ಯಶಸ್ಸು ಸಾಧಿಸಲಾಗದೇ ನೆಲ ಕಚ್ಚಿದ್ದ ಬಾಲಿವುಡ್ ಚಿತ್ರರಂಗಕ್ಕೆ ಮರು ಜೀವ ಕೊಟ್ಟದ್ದು ಪಠಾಣ್ ಎನ್ನಬಹುದು. ಹೌದು, ಕಳೆದ ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆಗೊಂಡ ಪಠಾಣ್ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಬಿಡುಗಡೆಯಾಗಿ ಮೂವತ್ತು ದಿನಗಳು ಕಳೆದರೂ ಸಹ ಹಲವೆಡೆ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿರುವ ಪಠಾಣ್ ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿದ್ದು, ಜಯಭೇರಿ ಬಾರಿಸಿದೆ. ಈ ಮೂಲಕ ಬಾಯ್‌ಕಟ್ ಮಾಡಬೇಕು ಎಂದು ಅಭಿಯಾನ ನಡೆಸಿದ್ದವರ ವಿರುದ್ಧ ಪಠಾಣ್ ಸ್ಪಷ್ಟ ಗೆಲುವನ್ನು ಕಂಡಿದೆ.
ಸದ್ಯ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರಗಳ ಪಟ್ಟಿಯಲ್ಲಿ ದಂಗಲ್, ಬಾಹುಬಲಿ 2, ಆರ್ ಆರ್ ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಬಳಿಕ ಐದನೇ ಸ್ಥಾನದಲ್ಲಿರುವ ಪಠಾಣ್ ದೇಶದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ಈಗಾಗಲೇ ದಂಗಲ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳನ್ನು ಹಿಂದಿಕ್ಕಿ ಬಾಹುಬಲಿ 2 ಮೇಲೆ ಕಣ್ಣಿಟ್ಟಿದೆ. ಹೌದು, ಪಠಾಣ್ ಚಿತ್ರದ ಹಿಂದಿ ವರ್ಷನ್ ಇಂದಿಗೆ ( ಫೆಬ್ರವರಿ 26 ) 504 ಕೋಟಿ ರೂಪಾಯಿಗಳಷ್ಟಿದ್ದು, ಬಾಹುಬಲಿ 2 ಹಿಂದಿ ವರ್ಷನ್ ಹಿಂದಿಕ್ಕಿ ದೇಶದಲ್ಲಿ ಅತಿಹೆಚ್ಚು ಗಳಿಸಿದ ಹಿಂದಿ ಚಿತ್ರ ಎನಿಸಿಕೊಳ್ಳಲು ಇನ್ನೂ 7 ಕೋಟಿ ಗಳಿಕೆ ಮಾಡಬೇಕಿದೆ.
ಅಂದರೆ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಹಿಂದಿ ವರ್ಷನ್ ಒಟ್ಟಾರೆ 511 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು ಪಠಾಣ್ ಸಿನಿಮಾ ಮೂವತ್ತು ದಿನಗಳನ್ನು ಪೂರೈಸಿದ ಬಳಿಕವೂ ದಿನವೊಂದಕ್ಕೆ ಎರಡು ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ನಿರಾಯಾಸವಾಗಿ ಮಾಡುತ್ತಿದ್ದು ದೊಡ್ಡ ಚಿತ್ರಗಳು ಬಿಡುಗಡೆಗೊಂಡರೂ ಸಹ ತನ್ನ ಓಟವನ್ನು ನಿಲ್ಲಿಸಿಲ್ಲ. ಹೀಗಾಗಿ ಪಠಾಣ್ ಚಿತ್ರದ ಹಿಂದಿ ವರ್ಷನ್ ಬಾಹುಬಲಿ 2 ಹಿಂದಿ ವರ್ಷನ್‌ನ ಕಲೆಕ್ಷನ್ ಅನ್ನು ಹಿಂದಿಕ್ಕಿ ನಂಬರ್ ಒನ್ ಆಗುವುದು ಖಚಿತ.
ದೇಶದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಹಿಂದಿ ವರ್ಷನ್ ಚಿತ್ರಗಳ ಟಾಪ್ 10 ಪಟ್ಟಿ
1. ಬಾಹುಬಲಿ 02 : 511 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
2. ಪಠಾಣ್ - 504* ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
3. ಕೆಜಿಎಫ್ ಚಾಪ್ಟರ್ 2 - 434 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
4. ದಂಗಲ್ - 387 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
5. ಸಂಜು - 342 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
6. ಪಿಕೆ - 340 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
7. ಟೈಗರ್ ಜಿಂದಾ ಹೈ - 339 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
8. ಭಜರಂಗಿ ಭಾಯ್‌ಜಾನ್ - 320 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
9. ವಾರ್ - 318 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
10. ಪದ್ಮಾವತ್ - 302 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್


Click it and Unblock the Notifications











