ಬಿಡುಗಡೆಯಾಗಿ ವಾರ ಕಳೆದರೂ ತಗ್ಗದ ಪಠಾಣ್ ಫೀವರ್; ಬೆಂಗಳೂರಲ್ಲಿ ಎಲ್ಲಾ ಚಿತ್ರಗಳಿಗಿಂತ ಹೆಚ್ಚು ಶೋ!

By ಫಿಲ್ಮಿಬೀಟ್ ಡೆಸ್ಕ್

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪಠಾಣ್ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಗೊಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕಳೆದ ವಾರ ಜನವರಿ 25ರ ಬುಧವಾರದಂದು ಬಿಡುಗಡೆಗೊಂಡ ಪಠಾಣ್ ಚಿತ್ರ ಮೊದಲ ದಿನವೇ 106 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಅಬ್ಬರದ ಆರಂಭ ಪಡೆದುಕೊಂಡಿತ್ತು.

ದೇಶಪ್ರೇಮ ಸಾರುವ ಕಥೆಯೊಂದಿಗೆ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬೆಳ್ಳಿತೆರೆಗೆ ಬಂದ ಶಾರುಖ್ ಖಾನ್ ವಿಜಯ ಪತಾಕೆಯನ್ನು ಹಾರಿಸಿದ್ದಾರೆ. ಹೀಗೆ ಪಠಾಣ್ ಚಿತ್ರವನ್ನು ದೇಶದ ಜನತೆ ಮೆಚ್ಚಿಕೊಂಡಿದ್ದು, ದಾಖಲೆಯ ಗಳಿಕೆಯನ್ನು ಮಾಡುತ್ತಿದೆ. ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರಿರುವ ಕರ್ನಾಟಕದಲ್ಲಿಯೂ ಪಠಾಣ್ ಅಬ್ಬರ ಜೋರಾಗಿದ್ದು, ಮೊದಲ ದಿನವೇ ರಾಜ್ಯದಲ್ಲಿ ಶಾರುಖ್ ನಟನೆಯ ಈ ಚಿತ್ರ 6.5 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು.

ಹೀಗೆ ರಾಜ್ಯದಲ್ಲಿಯೂ ಅಬ್ಬರಿಸುತ್ತಿರುವ ಪಠಾಣ್ ಚಿತ್ರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಹ ಉತ್ತಮ ಪ್ರದರ್ಶನ ಕಾಣುತ್ತಿದ್ದು, ವಾರ ಕಳೆದರೂ ತನ್ನ ಹಿಡಿತವನ್ನು ಮುಂದುವರಿಸಿದೆ. ತನ್ನ ಎಂಟನೇ ದಿನವೂ ಸಹ ಪಠಾಣ್ ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿರುವ ಎಲ್ಲಾ ಚಿತ್ರಗಳಿಗಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವ ಮೂಲಕ ಅಬ್ಬರವನ್ನು ಮುಂದುವರಿಸಿದೆ. ಹಾಗಾದರೆ ಇಂದು ( ಫೆಬ್ರವರಿ 1 ) ಬೆಂಗಳೂರಿನಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

Pathaan rampage continues in Bangalore got more shows than Kranti on its 8th day

ಬೆಂಗಳೂರಿನಲ್ಲಿ ಪಠಾಣ್ ಹಾವಳಿ‌

ಬೆಂಗಳೂರಿನಲ್ಲಿ ಪಠಾಣ್ ಹಾವಳಿ‌

ಬಿಡುಗಡೆಗೊಂಡು ವಾರ ಕಳೆದರೂ ಸಹ ಬೆಂಗಳೂರಿನಲ್ಲಿ ಚಿತ್ರದ ಹಾವಳಿ ಮಾತ್ರ ಕಡಿಮೆ ಆಗಿಲ್ಲ. ಪಠಾಣ್ ಚಿತ್ರದ ಟಿಕೆಟ್‌ಗಳಿಗೆ ನಗರದಲ್ಲಿ ಬಹು ಬೇಡಿಕೆ ಇದ್ದು, ನಗರದಲ್ಲಿ ಪ್ರದರ್ಶನವಾಗುತ್ತಿರುವ ಉಳಿದ ಎಲ್ಲಾ ಚಿತ್ರಗಳಿಗಿಂತ ಹೆಚ್ಚಿನ ಶೋಗಳನ್ನು ಪಡೆದುಕೊಂಡಿದೆ. ಇಂದು ( ಫೆಬ್ರವರಿ 1 ) ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳ ಪೈಕಿ ಯಾವ ಚಿತ್ರಕ್ಕೆ ಎಷ್ಟು ಶೋ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಪಠಾಣ್ - 547 ಪ್ರದರ್ಶನಗಳು

ಕ್ರಾಂತಿ - 485 ಪ್ರದರ್ಶನಗಳು

ವಾರಿಸು - 59 ಪ್ರದರ್ಶನಗಳು

ಬಿಟಿಎಸ್ ಎಟ್ ಟು ಕಮ್ ಇನ್ ಸಿನಿಮಾಸ್ - 53 ಪ್ರದರ್ಶನಗಳು

ವಾಲ್ತೇರು ವೀರಯ್ಯ - 49 ಪ್ರದರ್ಶನಗಳು

ಮೈಸೂರಿನಲ್ಲಿ ಕ್ರಾಂತಿ ಮುನ್ನಡೆ

ಮೈಸೂರಿನಲ್ಲಿ ಕ್ರಾಂತಿ ಮುನ್ನಡೆ

ಇನ್ನು ಬೆಂಗಳೂರಿನಲ್ಲಿ ಪಠಾಣ್ ಕ್ರಾಂತಿಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದರೆ, ಮೈಸೂರಿನಲ್ಲಿ ಕ್ರಾಂತಿ ಪಠಾಣ್ ಚಿತ್ರವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ. ಹೌದು, ಮೈಸೂರಿನಲ್ಲಿ ಇಂದು ( ಫೆಬ್ರವರಿ 1 ) ಪಠಾಣ್ 53 ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ, ಕ್ರಾಂತಿ 66 ಪ್ರದರ್ಶನಗಳನ್ನು ಪಡೆದುಕೊಂಡಿದೆ.

ರಾಜ್ಯದಲ್ಲಿ 25 ಕೋಟಿ ಬಾಚಿದ ಪಠಾಣ್!

ರಾಜ್ಯದಲ್ಲಿ 25 ಕೋಟಿ ಬಾಚಿದ ಪಠಾಣ್!

ಸದ್ಯ ಒಂದು ವಾರವನ್ನು ಯಶಸ್ವಿಯಾಗಿ ಪೂರೈಸಿರುವ ಪಠಾಣ್ ವಿಶ್ವದಾದ್ಯಂತ 634 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಕರ್ನಾಟಕದಲ್ಲಿಯೇ 7 ದಿನಗಳಲ್ಲಿ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ತಿಳಿಸಿದ್ದಾರೆ.

More from Filmibeat

English summary
Pathaan rampage continues in Bangalore got more shows than Kranti on it's 8th day. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X