ಶಾರುಖ್ ಖಾನ್ ಕಮ್‌ಬ್ಯಾಕ್ ಚಿತ್ರ 'ಪಠಾಣ್' ರಿಲೀಸ್ ಡೇಟ್ ರಿವೀಲ್!
ನಟ ಶಾರುಖ್ ಖಾನ್ ಭಾರತೀಯ ಹೆಸರಾಂತ ಸಿನಿಮಾ ನಟರಲ್ಲಿ ಒಬ್ಬರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟು ಕೋಟ್ಯಾಂತರ ಅಭಿಮಾನಿಗಳ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವೇ ಅಲ್ಲ. ವಿಶ್ವಾದ್ಯಂತ ಶಾರುಖ್ ಖಾನ್ ಎಂದರೆ ದೊಡ್ಡ ಮಟ್ಟದ ಕ್ರೇಜ್ ಇದ್ದೇ ಇದೆ. ಅವರ ಸಿನಿಮಾಗಳಿಗಾಗಿ ಅಭಿಮಾನಿಗಳು ಸದಾ ಕಾಯುತ್ತಾ ಇರುತ್ತಾರೆ.
ಇನ್ನು ಹೆಚ್ಚು ದಿನ ಶಾರುಖ್ ಖಾನ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳಬೇಕಾಗಿಲ್ಲ. ಶಾರುಖ್ ಖಾನ್ ತೆರೆಯ ಮೇಲೆ ಮತ್ತೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಕೆಲ ಸಮಯ ಬ್ರೇಕ್ ತೆಗೆದುಕೊಂಡಿದ್ದ ಸ್ಟಾರ್ ನಟ ಈಗ ಪ್ರೇಕ್ಷಕರಿಗೆ ಹೊಸ ಸಿನಿಮಾದ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ. ಸದ್ಯ ಶಾರುಖ್ ಖಾನ್ ಅಭಿನಯದ ಮುಂದಿನ ಚಿತ್ರದ ಟೀಸರ್ ರಿಲೀಸ್ ಆಗಿದೆ.
ಶಾರುಖಾನ್ ಅಭಿನಯದ ಮುಂದಿನ ಚಿತ್ರ 'ಪಠಾಣ್'. ಈ ಚಿತ್ರ ರಿಲೀಸ್‌ಗೆ ರೆಡಿ ಆಗುತ್ತಿದೆ. ಹಾಗಾಗಿ ಈಗ ಮೊದಲ ಟೀಸರ್ ಅನಾವರಣ ಮಾಡಲಾಗಿದೆ. ಚಿತ್ರದಲ್ಲಿರುವ ಕಂಟೆಂಟ್ ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಾ, ಚಿತ್ರದ ರಿಲೀಸ್ ದಿನಾಂಕವನ್ನು ಹೇಳಿದ್ದಾರೆ ಶಾರುಖ್ ಖಾನ್.
'ಪಠಾಣ್' ಮೊದಲ ಟೀಸರ್ ಔಟ್!
ಶಾರುಖ್ ಖಾನ್ ಕಮ್‌ಬ್ಯಾಕ್‌ಗಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಶಾರುಖ್ ಅವರನ್ನು ತೆರೆಮೇಲೆ ನೋಡಲು ಇನ್ನು ಹೆಚ್ಚು ದಿನ ಕಾಯಬೇಕಾಗಿಲ್ಲ. 'ಪಠಾಣ್' ಚಿತ್ರದ ಮೂಲಕ ಶಾರುಖ್ ಖಾನ್ ಬಿಗ್ ಸ್ಕ್ರೀನ್‌ಗೆ ಮತ್ತೆ ಮರಳಿದ್ದಾರೆ. ಈ ವಿಚಾರವನ್ನು ಸ್ವತಃ ಶಾರುಖ್ ಖಾನ್ ಟೀಸರ್ ಮೂಲಕ ಹೇಳಿಕೊಂಡಿದ್ದಾರೆ. ಚಿತ್ರದ ಟೀಸರ್‌ನಲ್ಲಿ ಮೊದಲು ನಟ ಜಾನ್ ಅಬ್ರಾಹಮ್ ಕಾಣಿಸಿಕೊಂಡಿದ್ದಾರೆ. ನಂತರ ದೀಪಿಕಾ ಪಡುಕೋಣೆ ಡೈಲಾಗ್ ಇದೆ. ಆ ಬಳಿಕ ಅಸ್ಪಷ್ಟವಾದ ದೃಶ್ಯದಲ್ಲಿ ಶಾರುಖ್ ಎಂಟ್ರಿ ಇದೆ.

25/01/2023ರಂದು 'ಪಠಾಣ್' ರಿಲೀಸ್!
ಚಿತ್ರದ ಮೊದಲ ಟೀಸರ್‌ನಲ್ಲಿ ಕೇವಲ ಪಾತ್ರಗಳ ಪರಿಚಯ ಮಾತ್ರ ಅಲ್ಲ, ಚಿತ್ರದ ರಿಲೀಸ್ ದಿನಾಂಕವನ್ನೂ ಕೂಡ ಪ್ರಕಟ ಮಾಡಲಾಗಿದೆ. ಟೀಸರ್ ಕೊನೆಯಲ್ಲಿ ಬ್ಲರ್ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಶಾರುಖ್ ಖಡಕ್ ಧ್ವನಿಯಲ್ಲಿ ಚಿತ್ರದ ರಿಲೀಸ್ ಬಗ್ಗೆ ಹೇಳಲಾಗಿದೆ. ಪಠಾಣ್ ಮೂಲಕ ನಿಮ್ಮನ್ನು ಆದಷ್ಟು ಬೇಗ ಭೇಟಿ ಆಗುತ್ತೇನೆ ಎಂದು ಶಾರುಖ್ ಹೇಳಿದ ಬಳಿಕ ಚಿತ್ರದ ರಿಲೀಸ್ ದಿನಾಂಕ ಟೀಸರ್‌ನಲ್ಲಿ ಮೂಡಿ ಬರುತ್ತೆ. 2023ರ ಜನವರಿ 25ಕ್ಕೆ ಪಠಾಣ್ ರಿಲೀಸ್ ಮಾಡುವುದಾಗಿ ಚಿತ್ರ ತಂಡ ಪ್ರಕಟ ಮಾಡಿದೆ.

4 ವರ್ಷದ ಬಳಿಕ ಶಾರುಖ್ ಚಿತ್ರ ರಿಲೀಸ್!
ನಟ ಶಾರುಖ್ ಖಾನ್ 2018ರಲ್ಲಿ ತೆರೆಕಂಡ 'ಝೀರೊ' ಚಿತ್ರದ ಬಳಿಕ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡರು. ಎರಡು ವರ್ಷ ಬ್ರೇಕ್ ತೆಗೆದುಕೊಂಡ ನಂತರ 2021 ಶಾರುಖ್ ಮತ್ತೆ ಬಣ್ಣ ಹಚ್ಚುವ ಮನಸ್ಸು ಮಾಡಿದರು. ಅತಿ ಎಚ್ಚರಿಕೆಯಿಂದ ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಂಡ ನಟ ರಾಕೆಟ್ರಿ, ಪಠಾಣ್ ಮತ್ತು ಅಟ್ಲಿ ನಿರ್ದೇಶನದ ಚಿತ್ರಗಳನ್ನು ಮಾಡುತ್ತಿದ್ದಾರೆ. ಈ ಚಿತ್ರಗಳ ಪೈಕಿ ಸದ್ಯ 'ಪಠಾಣ್' ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದ 2023ರಲ್ಲಿ ತೆರೆಗೆ ಬರ್ತಿದೆ. ಅಂದರೆ ಅಲ್ಲಿಗೆ 4 ವರ್ಷಗಳ ನಂತರ ಶಾರುಖ್ ಖಾನ್ ಚಿತ್ರವೊಂದು ತೆರೆಗೆ ಬರ್ತಿದೆ.

ಶಾರುಖ್ ಖಾನ್‌ಗೆ ಕೈಕೊಟ್ಟಿದ್ದ ಅದೃಷ್ಟ!
ದಶಕಗಳ ಕಾಲ ಸ್ಟಾರ್ ನಟನಾಗಿ ಬಾಲಿವುಡ್ ಆಳಿದ ನಟ ಶಾರುಖ್ ಖಾನ್ ಅವರಿಗೆ ಅದ್ಯಾಕೋ ಅದೃಷ್ಟ ಕೈ ಕೊಟ್ಟಿತ್ತು. ಹಾಗಾಗಿ ಅವರ ಸಾಲು, ಸಾಲು ಸಿನಿಮಾಗಳು ಫ್ಲಾಪ್ ಲಿಸ್ಟ್ ಸೇರಿವೆ. ಹಾಗಾಗಿ 'ಝೀರೊ' ಚಿತ್ರದ ಬಳಿಕ ಶಾರುಖ್ ಬ್ರೇಕ್ ತೆಗೆದುಕೊಳ್ಳುವ ಯೋಚನೆ ಮಾಡಿದ್ದರು. 'ಪಠಾಣ್' ಶಾರುಖ್ ಅದೃಷ್ಟವನ್ನು ಮರಳಿ ತಂದುಕೊಡುತ್ತಾ ನೋಡಬೆಕು. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಮ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನ ಇರುವ ಈ ಚಿತ್ರ ಯಶ್ ರಾಜ್ ಬ್ಯಾನರ್‌ನಡಿ ನಿರ್ಮಾಣ ಆಗಿದೆ.


Click it and Unblock the Notifications











