ಮಲ್ಲಿಕಾ ಶೆರಾವತ್ 'ಡರ್ಟಿ' ಚಿತ್ರಕ್ಕೆ ಕೋರ್ಟ್ ನಿಷೇಧ

By Rajendra

ತಮ್ಮ ಸೆಕ್ಸಿ ಮೈಮಾಟದಿಂದ ಪಡ್ಡೆಗಳನ್ನು ಹಾಫ್ ಮರ್ಡರ್ ಮಾಡಿರುವ ತಾರೆ ಮಲ್ಲಿಕಾ ಶೆರಾವತ್. ಅವರ ಅಭಿನಯದ ಬಾಲಿವುಡ್ ಚಿತ್ರ 'ಡರ್ಟಿ ಪೊಲಿಟಿಕ್ಸ್' ಈಗ ಬಹು ಚರ್ಚಿತ ಚಿತ್ರ. ಈ ಚಿತ್ರ ಬಿಡುಗಡೆಗೆ ಪಟ್ನಾ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಚಿತ್ರದಲ್ಲಿ ಹಲವಾರು ಆಕ್ಷೇಪಾರ್ಹ ಸನ್ನಿವೇಶಗಳಿವೆ ಎಂದು ಸರ್ಕಾರಿ ಪರ ವಕೀಲರು ತಿಳಿಸಿದ್ದಾರೆ.

ಈ ಚಿತ್ರವನ್ನು ನಿಷೇಧಿಸಬೇಕು ಎಂಬ ದೂರನ್ನು ಪರಿಗಣಿಸಿದ ನ್ಯಾಯಾಲಯದ ವಿಭಾಗೀಯ ಪೀಠ, ಚಿತ್ರದಲ್ಲಿನ ಆಕ್ಷೇಪಾರ್ಹ ಸನ್ನಿವೇಶಗಳನ್ನು ತೊಲಗಿಸುವ ತನಕ ಚಿತ್ರ ಬಿಡುಗಡೆಗೆಯನ್ನು ತಡೆಹಿಡಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದೆ. [ವಿವಾದದಲ್ಲಿ ಮಲ್ಲಿಕಾ ಶೆರಾವತ್ 'ಡರ್ಟಿ' ಪೋಸ್ಟರ್]

Patna High Court banned Dirty Politics

ಈ ಸಂಬಂಧ ಕೇಂದ್ರ ಸೆನ್ಸಾರ್ ಮಂಡಳಿಗೂ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ಈ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಅವರು ರಾಷ್ಟ್ರಧ್ವಜವನ್ನು ಮೈಗೆ ಸುತ್ತಿಕೊಂಡು ಅಪಮಾನ ಮಾಡಿದ್ದು, ರಾಷ್ಟ್ರಧ್ವಜಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಷ್ಟಕ್ಕೂ 'ಡರ್ಟಿ ಪೊಲಿಟಿಕ್ಸ್' ಚಿತ್ರ 'ಡರ್ಟಿ ಪಿಕ್ಚರ್'ನಂತೆ ಭಾರಿ ಸದ್ದು ಮಾಡದಿದ್ದರೂ ಕುತೂಹಲವನ್ನಂತೂ ಕೆರಳಿಸಿದೆ. ಈ ಚಿತ್ರದ ಕಥೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ರಾಜಸ್ತಾನದ ಗುರ್ಜಾರಿ ಸಮುದಾಯಕ್ಕೆ ಸೇರಿದ ಭನ್ವಾರಿ ದೇವಿ ಕುರಿತಾದದ್ದು ಎನ್ನಲಾಗಿದೆ. ಆದರೆ ಚಿತ್ರದ ನಿರ್ದೇಶಕರು ಇದು ಭನ್ವಾರಿ ದೇವಿ ಕಥೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಚಿತ್ರದ ಪಾತ್ರವರ್ಗದಲ್ಲಿ ಓಂ ಪುರಿ, ರಾಜ್ ಪಾಲ್ ಯಾದವ್ ಮುಂತಾದವರಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಸುತ್ತ ಕಥೆ ಸುತ್ತುತ್ತದೆ ಎನ್ನಲಾಗಿದೆ. ಮಲ್ಲಿಕಾ ಶೆರಾವತ್ ಅವರು ಅನೂಕಿ ದೇವಿ ಪಾತ್ರವನ್ನು ಚಿತ್ರದಲ್ಲಿ ಪೋಷಿಸಿದ್ದಾರೆ. ಮಾರ್ಚ್ 6ರಂದು ಬಿಡುಗಡೆಗೆ ಸಿದ್ಧವಾಗಿತ್ತು ಡರ್ಟಿ ಪೊಲಿಟಿಕ್ಸ್. (ಏಜೆನ್ಸೀಸ್)

More from Filmibeat

English summary
The Patna High Court banned the release Mallika Sherawat's Bollywood film 'Dirty Politics' over some objectionable scenes, a government lawyer said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X