For Quick Alerts
  ALLOW NOTIFICATIONS  
  For Daily Alerts

  ಮುಸುಕುಧಾರಿಗಳಿಂದ ಆಸಿಡ್ ದಾಳಿ ಯತ್ನ, ಬೆಚ್ಚಿಬಿದ್ದ ಗ್ಲಾಮರಸ್ ನಟಿ

  |

  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ನಟಿ ಪಾಯಲ್ ಘೋಷ್ ಆಘಾತಕಾರಿ ವಿಷಯವೊಂದನ್ನು ಹೊರಗೆ ಹಾಕಿದ್ದಾರೆ. ತಮ್ಮ ಮೇಲೆ ಮುಸುಕುಧಾರಿ ಗುಂಪೊಂದು ದಾಳಿ ಮಾಡಿತು, ಅವರು ನನ್ನ ಮುಖಕ್ಕೆ ಆಸಿಡ್ ಎರಚಲು ಯತ್ನಿಸಿದರು ಎಂದಿದ್ದಾರೆ.

  ವಿಡಿಯೋದಲ್ಲಿ ಮಾತನಾಡಿರುವ ಪಾಯಲ್ ಘೋಷ್, ''ನಾನು ರಾತ್ರಿ 10 ಗಂಟೆ ಸುಮಾರಿಗೆ ಔಷಧ ತರಲು ಹೋಗಿದ್ದೆ. ಔಷಧ ತೆಗೆದುಕೊಂಡು ಇನ್ನೇನು ನಾನು ನನ್ನ ಕಾರಿನ ಡ್ರೈವರ್ ಸೀಟ್‌ನಲ್ಲಿ ಕೂರಬೇಕು ಎನ್ನುವಷ್ಟರಲ್ಲಿ ಒಂದು ಗುಂಪೊಂದು ನನ್ನ ಮೇಲೆ ದಾಳಿ ಮಾಡಿತು'' ಎಂದಿದ್ದಾರೆ.

  ''ಮುಸುಕುಧಾರಿಗಳಾಗಿದ್ದ ಅವರ ಕೈಯಲ್ಲಿ ಬಾಟಲಿ ಇತ್ತು ಅದರಲ್ಲಿ ಆಸಿಡ್ ಇತ್ತು ಎನಿಸುತ್ತದೆ. ಜೊತೆಗೆ ಅವರ ಬಳಿ ಕಬ್ಬಿಣದ ರಾಡ್ ಇತ್ತು. ಅವರು ದಾಳಿ ಮಾಡಿದ ಕೂಡಲೇ ನನಗೆ ಭಯವಾಗಿ ಕೂಗಲು ಆರಂಭಿಸಿದೆ. ಅವರಲ್ಲಿ ಒಬ್ಬ ಕಬ್ಬಿಣದ ರಾಡ್‌ನಿಂದ ನನಗೆ ಹೊಡೆಯಲು ಬಂದ ನಾನು ತಪ್ಪಿಸಿಕೊಂಡೆ ಆದರೆ ರಾಡ್‌ನ ಹೊಡೆತ ನನ್ನ ಕೈಗೆ ತಗುಲಿ ಪೆಟ್ಟಾಯಿತು'' ಎಂದು ಪಾಯಲ್ ಘೋಷ್ ಹೇಳಿದ್ದಾರೆ.

  ಈ ರೀತಿಯ ಘಟನೆ ನನ್ನ ಜೀವನದಲ್ಲಿ ಈವರೆಗೆ ನಡೆದಿಲ್ಲ. ನನಗೆ ಬಹಳ ಭಯವಾಗಿಬಿಟ್ಟಿತ್ತು. ನಾನು ಇಂದು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುತ್ತೇನೆ ಎಂದ ಪಾಯಲ್ ಘೋಷ್ ತಮಗಾದ ಗಾಯವನ್ನು ವಿಡಿಯೋನಲ್ಲಿ ತೋರಿಸಿದ್ದಾರೆ. ಪಾಯಲ್‌ ಘೋಷ್‌ಗೆ ಆದ ಸ್ಥಿತಿಯನ್ನು ಕಂಡು ವಿಚಾರಿಸಲು ಕೇಂದ್ರ ಮಂತ್ರಿ ರಾಮ್‌ದಾಸ್ ಅಠಾವಳೆ ಪಾಯಲ್ ಘೋಷ್ ಮನೆಗೆ ಇಂದು ಬೆಳಿಗ್ಗೆ ಭೇಟಿ ನೀಡಿದ್ದಾರೆ.

  ನಟಿ ಪಾಯಲ್ ಘೋಷ್ ತಮ್ಮ ಗ್ಲಾಮರಸ್ ಮೈಮಾಟದಿಂದ ಖ್ಯಾತರು. ಕೆಲವು ತಿಂಗಳ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪವನ್ನು ಪಾಯಲ್ ಹೊರಿಸಿದ್ದರು. ಕನ್ನಡದ 'ವರ್ಷಧೀರ' ಸೇರಿ ಏಳು ಸಿನಿಮಾಗಳಲ್ಲಿ ಈವರೆಗೆ ನಟಿಸಿದ್ದಾರೆ ಪಾಯಲ್ ಘೋಷ್.

  ಕೆಲವು ದಿನಗಳ ಹಿಂದಷ್ಟೆ ನಟಿ ನಿಖಿತಾ ರಾವಲ್‌ಗೆ ಬಂದೂಕು ತೋರಿಸಿ ಆಕೆಯ ಬಳಿ ಹಣ ಮತ್ತು ಏಳು ಲಕ್ಷ ಮೌಲ್ಯದ ಆಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಘಟನೆ ಮುಂಬೈನಲ್ಲಿ ನಡೆದಿತ್ತು. ಅದಕ್ಕೂ ಮುನ್ನಾ ನಟಿ ಚಂಡೀಘಡದಲ್ಲಿ ನಟಿ ಅಲಂಕೃತಾ ಸಹಾಯ್ ಮನೆಗೆ ನುಗ್ಗಿದ ಕಳ್ಳರು ನಟಿಯ ಮೇಲೆ ಹಲ್ಲೆ ಮಾಡಿ ಹಣ, ಒಡವೆ ದೋಚಿ ಪರಾರಿಯಾಗಿದ್ದರು.

  English summary
  Actress Payal Ghosh said she has been attacked by few masked people, she also said they tried to acid attack her. Payal had a injury.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X