For Quick Alerts
  ALLOW NOTIFICATIONS  
  For Daily Alerts

  4 ತಿಂಗಳು ಆಯ್ತು, ಕಶ್ಯಪ್ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ? ಪಾಯಲ್ ಘೋಷ್ ಪ್ರಶ್ನೆ

  |

  ಬಾಲಿವುಡ್ ಸ್ಟಾರ್ ನಿರ್ದೇಶಕದ ಅನುರಾಗ್ ಕಶ್ಯಪ್ ವಿರುದ್ಧ ಮೀಟೂ ಆರೋಪ ಮತ್ತೆ ಸುದ್ದಿಯಾಗಿದೆ. ನಟಿ ಪಾಯಲ್ ಘೋಷ್ ದೂರು ನೀಡಿ ನಾಲ್ಕು ತಿಂಗಳು ಕಳೆದರೂ ನಿರ್ದೇಶಕನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

  ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಬಲವಂತ ಮಾಡಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಪಾಯಲ್ ಘೋಷ್ ಆರೋಪಿಸಿದ್ದರು. ಈ ಸಂಬಂಧ ಮುಂಬೈ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಈ ದೂರಿನ ಅನ್ವಯ ಮುಂಬೈ ಪೊಲೀಸರು ಕಶ್ಯಪ್‌ಗೆ ಸಮನ್ಸ್ ಸಹ ನೀಡಿದ್ದರು. ಆದ್ರೆ, ಕಾನೂನಿನ ಅಡಿಯಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ಮುಂದೆ ಓದಿ...

  ನಾಲ್ಕು ತಿಂಗಳಲ್ಲಿ ಕ್ರಮ ಏಕಿಲ್ಲ?

  ನಾಲ್ಕು ತಿಂಗಳಲ್ಲಿ ಕ್ರಮ ಏಕಿಲ್ಲ?

  ಅತ್ಯಾಚಾರಕ್ಕೆ ಯತ್ನ ಪ್ರಕರಣದಡಿಯಲ್ಲಿ ನಟಿ ಪಾಯಲ್ ಘೋಷ್ ನೀಡಿರುವ ದೂರಿನ ಹಿನ್ನೆಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ''ನಾಲ್ಕು ತಿಂಗಳು ಕಳೆದಿದೆ, ನಾನು ಪುರಾವೆ ನೀಡಿದರೂ ಅನುರಾಗ್ ಕಶ್ಯಪ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿಚಾರಣೆಯನ್ನು ಮುಂದುವರಿಸಬೇಕು ಅಂದ್ರೆ ನಾನು ಸಾಯಬೇಕೆ?'' ಎಂದು ಟ್ವೀಟ್ ಮಾಡಿದ್ದಾರೆ.

  ''ನನ್ನನ್ನು ಕೆಟ್ಟದಾಗಿ ಬಲವಂತ ಮಾಡಿದ್ದ': ನಟಿಯ ಆರೋಪಕ್ಕೆ ಅನುರಾಗ್ ಕಶ್ಯಪ್ ಸ್ಪಷ್ಟನೆ''ನನ್ನನ್ನು ಕೆಟ್ಟದಾಗಿ ಬಲವಂತ ಮಾಡಿದ್ದ': ನಟಿಯ ಆರೋಪಕ್ಕೆ ಅನುರಾಗ್ ಕಶ್ಯಪ್ ಸ್ಪಷ್ಟನೆ

  ಇದು ಮಹಿಳೆಯರ ವಿಷಯ

  ಇದು ಮಹಿಳೆಯರ ವಿಷಯ

  ''ತುಂಬಾ ಸಮಯ ಕಳೆದಿದೆ. ಮುಂಬೈ ಪೊಲೀಸರು ಇದನ್ನು ಸರಿಯಾಗಿ ನಿಭಾಯಿಸಿಲ್ಲ. ನಾನು ಶ್ರದ್ಧೆಯಿಂದ ವಿನಂತಿಸುತ್ತಿದ್ದೇನೆ, ಇದು ಮಹಿಳೆಯರ ವಿಷಯ. ನಾವು ಯಾವ ರೀತಿ ಉದಾಹರಣೆಯಾಗುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ತಿಳಿದಿರಬೇಕು'' ಎಂದು ಪಾಯಲ್ ಘೋಷ್ ಪ್ರಶ್ನಿಸಿದ್ದಾರೆ.

  ಆರೋಪ ನಿರಾಕರಿಸಿದ್ದ ಕಶ್ಯಪ್

  ಆರೋಪ ನಿರಾಕರಿಸಿದ್ದ ಕಶ್ಯಪ್

  ಪಾಯಲ್ ಘೋಷ್ ಅವರ ಆರೋಪಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಅನುರಾಗ್ ಕಶ್ಯಪ್ ಸಾಮಾಜಿಕ ಜಾಲತಾಣದಲ್ಲಿಯೇ ಉತ್ತರಿಸಿದ್ದರು. ಪಾಯಲ್ ಮಾಡಿರುವ ಆರೋಪದಲ್ಲಿ ಸತ್ಯವಿಲ್ಲ ಎಂದು ಹೇಳಿದ್ದ ಕಶ್ಯಪ್ ''ಮೇಡಂ ನಾನು ಎರಡು ಬಾರಿ ಮದುವೆಯಾಗಿದ್ದೇನೆ. ನಾನು ಅಪರಾಧಿಯಾಗಿದ್ದರೆ ಅದನ್ನು ಸ್ವೀಕರಿಸುತ್ತೇನೆ'' ಎಂದು ಸ್ಪಷ್ಟನೆ ನೀಡಿದ್ದರು.

  ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್

  ಮೊದಲ ಸಿನಿಮಾ ರಿಲೀಸ್ ಗೂ ಮುನ್ನವೇ ಬದಲಾಯ್ತು Shashikumar ಮಗನ ಅದೃಷ್ಟ | Filmibeat Kannada
  ಸ್ಟಾರ್ ಕಲಾವಿದರ ಹೆಸರು ಎಳೆದಾಡಿದ್ದರು

  ಸ್ಟಾರ್ ಕಲಾವಿದರ ಹೆಸರು ಎಳೆದಾಡಿದ್ದರು

  ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪಾಯಲ್ ಘೋಷ್, ಬಚ್ಚನ್ ಕುಟುಂಬ, ರಿಚಾ ಚಡ್ಡಾ, ಜೂನಿಯರ್ ಎನ್‌ಟಿಆರ್ ಅವರ ಹೆಸರು ಹೆಸರುಗಳನ್ನು ಎಳೆದು ತಂದು, ಇವರ ಬಗ್ಗೆಯೂ ಕಶ್ಯಪ್ ಕೆಟ್ಟದಾಗಿ ಮಾತನಾಡಿದ್ದರು ಎಂದು ಹೇಳಿದ್ದರು. ಈ ಸಂಬಂಧ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಜೀವ ಬೆದರಿಕೆ ಇದೆ, ವೈ+ ಭದ್ರತೆ ನೀಡುವಂತೆ ಸರ್ಕಾರವನ್ನು ವಿನಂತಿಸಿದ್ದರು.

  English summary
  Me too Case: Actress Payal ghosh questioned Why did not take any action against anurag kashyap?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X