twitter
    For Quick Alerts
    ALLOW NOTIFICATIONS  
    For Daily Alerts

    ಇಲ್ಲಿ ದೇವತೆಯಂತೆ ನೋಡುತ್ತಾರೆ: ಬಾಲಿವುಡ್‌ಗಿಂತ ದಕ್ಷಿಣ ಭಾರತದ ಚಿತ್ರರಂಗವೇ ಬೆಸ್ಟ್ ಎಂದ ನಟಿ

    By Avani Malnad
    |

    ಬಾಲಿವುಡ್‌ಗಿಂತಲೂ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡಲಾಗುತ್ತದೆ ಎಂದು ನಟಿ ಪಾಯಲ್ ಘೋಷ್ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಚಿತ್ರರಂಗ ಮತ್ತು ಇಲ್ಲಿನ ನಟಿಯರ ಬಗ್ಗೆ ತಪ್ಪು ತಿಳಿವಳಿಕೆ ಇದೆ ಎಂದು ಪಾಯಲ್ ಹೇಳಿದ್ದಾರೆ.

    ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ಪಾಯಲ್ ಘೋಷ್, ದಕ್ಷಿಣ ಭಾರತದ ಚಿತ್ರರಂಗ ನಟಿಯರಿಗೆ ಹೆಚ್ಚು ಸುರಕ್ಷಿತವಾಗಿದೆ ಎಂದಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತಾದವರಾದ ಪಾಯಲ್, 2010ರಲ್ಲಿ ಕನ್ನಡದ 'ವರ್ಷಧಾರೆ' ಎಂಬ ಚಿತ್ರದಲ್ಲಿ ನಟಿಸಿದ್ದರು. ತೆಲುಗಿನಲ್ಲಿ 'ಪ್ರಯಾಣಂ', 'ಊಸರವಳ್ಳಿ', 'ಮಿ. ರಾಸ್ಕಲ್' ಚಿತ್ರಗಳಲ್ಲಿ ಅಭಿನಯಿಸಿರುವ ಅವರು, ತಮಿಳಿನ 'ತೇರೊದುಮ್ ವೀದಿಯಿಲೆ', ಹಿಂದಿಯ 'ಫ್ರೀಡಂ', 'ಪಟೇಲ್ ಕಿ ಪಂಜಾಬಿ ಶಾದಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂದೆ ಓದಿ...

    ಚಿಕ್ಕ ವಯಸ್ಸಿನಲ್ಲಿಯೆ ನನ್ನನ್ನು ಬೇರೆ ದೃಷ್ಟಿಯಿಂದ ನೋಡುತ್ತಿದ್ದರು: ಬಾಲಿವುಡ್ ವಿರುದ್ಧ ಅಸಮಾಧಾನ ಹೊರಹಾಕಿದ ರಿಯಾಚಿಕ್ಕ ವಯಸ್ಸಿನಲ್ಲಿಯೆ ನನ್ನನ್ನು ಬೇರೆ ದೃಷ್ಟಿಯಿಂದ ನೋಡುತ್ತಿದ್ದರು: ಬಾಲಿವುಡ್ ವಿರುದ್ಧ ಅಸಮಾಧಾನ ಹೊರಹಾಕಿದ ರಿಯಾ

    ದಕ್ಷಿಣ ಭಾರತದಲ್ಲಿ ಎಂದೂ ಸಮಸ್ಯೆಯಾಗಿಲ್ಲ

    ದಕ್ಷಿಣ ಭಾರತದಲ್ಲಿ ಎಂದೂ ಸಮಸ್ಯೆಯಾಗಿಲ್ಲ

    'ದಕ್ಷಿಣದಲ್ಲಿ ಕೆಲವು ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕರ ಜತೆ ಕೆಲಸ ಮಾಡಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ ದಕ್ಷಿಣ ಭಾರತದ ಕಲಾವಿದರು ಮತ್ತು ನಿರ್ದೇಶಕರ ಜತೆ ನಟಿಸುವಾಗ ನನಗೆ ಕಿಂಚಿತ್ತೂ ಸಮಸ್ಯೆಯಾಗಲಿಲ್ಲ. ಯಾವ ಕೆಟ್ಟ ಅನುಭವವೂ ಆಗಲಿಲ್ಲ' ಎಂದು ತಿಳಿಸಿದ್ದಾರೆ.

    ದೇವತೆಯಂತೆ ನೋಡುತ್ತಾರೆ

    ದೇವತೆಯಂತೆ ನೋಡುತ್ತಾರೆ

    'ದಕ್ಷಿಣ ಭಾರತದಲ್ಲಿ ತಮ್ಮ ಹೀರೋಯಿನ್‌ಗಳನ್ನು ದೇವತೆಯಂತೆ ಪರಿಗಣಿಸುತ್ತಾರೆ. ತಮಿಳುನಾಡಿನಲ್ಲಿ ಅನೇಕ ನಟಿಯರ ಹೆಸರಿನಲ್ಲಿ ದೇವಸ್ಥಾನಗಳಿವೆ. ಅಕ್ಷರಶಃ ಅವರನ್ನು ಜನರು ಆರಾಧಿಸುತ್ತಾರೆ' ಎಂದು ಪಾಯಲ್ ಘೋಷ್ ದಕ್ಷಿಣ ಭಾರತದ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.

    ಸುಶಾಂತ್ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ: ನಟಿ, ಸಂಸದೆ ರೂಪಾ ಗಂಗೂಲಿ ಒತ್ತಾಯಸುಶಾಂತ್ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ: ನಟಿ, ಸಂಸದೆ ರೂಪಾ ಗಂಗೂಲಿ ಒತ್ತಾಯ

    ನಟಿಯರ ಬಗ್ಗೆ ತಪ್ಪು ತಿಳಿವಳಿಕೆ ಇದೆ

    ನಟಿಯರ ಬಗ್ಗೆ ತಪ್ಪು ತಿಳಿವಳಿಕೆ ಇದೆ

    'ನಾನು ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಲು ಪ್ರಯತ್ನಿಸುವಾಗ, ನಾನು ದಕ್ಷಿಣದಲ್ಲಿ ಕೆಲಸ ಮಾಡಿದ್ದೇನೆಂದು ಹೇಳಿಕೊಳ್ಳಬೇಡಿ. ಏಕೆಂದರೆ ಬಾಲಿವುಡ್‌ನ ಜನರು ನಿಮ್ಮನ್ನು ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಅನೇಕರು ನನಗೆ ಸಲಹೆ ನೀಡಿದ್ದರು. ದಕ್ಷಿಣ ಭಾರತದ ನಟಿಯರ ಬಗ್ಗೆ ಅವರಿಗೆ ಬಹಳ ತಪ್ಪು ತಿಳಿವಳಿಕೆಗಳಿವೆ. ನಿರ್ಮಾಣ ಸಂಸ್ಥೆಯೊಂದಕ್ಕೆ ನನ್ನ ಹೆಸರನ್ನು ಸ್ನೇಹಿತರೊಬ್ಬರು ಶಿಫಾರಸು ಮಾಡಿದಾಗ, 'ಅರೆ ದಕ್ಷಿಣದಲ್ಲಿ ಮಾಡಿದ್ದಾರೆಯೇ? ಹಾಗಾದರೆ ಆಕೆ ಬಹಳ ಸಲೀಸು' ಎಂದಿದ್ದರು' ಎಂಬುದನ್ನು ಪಾಯಲ್ ನೆನಪಿಸಿಕೊಂಡಿದ್ದಾರೆ.

    ದಕ್ಷಿಣದಲ್ಲಿಯೇ ನಟಿಸಬೇಕಿತ್ತು...

    ದಕ್ಷಿಣದಲ್ಲಿಯೇ ನಟಿಸಬೇಕಿತ್ತು...

    ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ಹೆಚ್ಚು ಗಮನ ನೀಡದೆ ಇರುವುದಕ್ಕೆ ಅವರು ಪಶ್ಚಾತ್ತಾಪಪಟ್ಟುಕೊಂಡಿದ್ದಾರೆ. 'ದಕ್ಷಿಣ ಭಾರತದ ಚಿತ್ರಗಳಲ್ಲಿ ಮಾಡಬೇಡ, ಅವರು ನಿನ್ನ ವೃತ್ತಿಯನ್ನು ಹಾಳು ಮಾಡುತ್ತಾರೆ ಎಂದು ಜನರು ಹೇಳುತ್ತಿದ್ದರು. ನಾನು ಬಾಲಿವುಡ್ ಕಡೆ ಗಮನ ಹರಿಸಿದಷ್ಟು ದಕ್ಷಿಣ ಭಾರತದ ಚಿತ್ರಗಳತ್ತ ಏಕೆ ಗಮನ ಹರಿಸಲಿಲ್ಲ ಎಂದು ಈಗ ಬೇಸರವಾಗುತ್ತಿದೆ. ದೊಡ್ಡ ಬ್ಯಾನರ್ ಚಿತ್ರದಡಿ ನಟಿಸಿ ದೊಡ್ಡ ಹಿಟ್ ಪಡೆಯುವುದೇ ಮುಖ್ಯವಲ್ಲ, ನನಗೆ ದೊರೆತ ಯಾವುದೇ ಸಿನಿಮಾವಾದರೂ ನನ್ನ ಕೆಲಸವೇ ನನ್ನ ಬಗ್ಗೆ ಮಾತನಾಡುವಂತೆ ಮಾಡುತ್ತೇನೆ ಎಂದಿದ್ದಾರೆ.

    ಬಾಲಿವುಡ್‌ನಲ್ಲಿ ಸ್ವಂತದ್ದು ಇಲ್ಲ...

    ಬಾಲಿವುಡ್‌ನಲ್ಲಿ ಸ್ವಂತದ್ದು ಇಲ್ಲ...

    'ಬಾಲಿವುಡ್‌ನಲ್ಲಿ ಕಂಟೆಂಟ್ ಕೊರತೆಯಿದೆ. ಕಂಟೆಂಟ್‌ಗಾಗಿ ಅವರು ದಕ್ಷಿಣ ಭಾರತದ ಚಿತ್ರಗಳನ್ನು ಅವಲಂಬಿಸುತ್ತಿದ್ದಾರೆ. ಪ್ರಾದೇಶಿಕ ಭಾಷೆ ಚಿತ್ರಗಳು ಅದ್ಭುತ ಸಿನಿಮಾಗಳನ್ನು ಮಾಡುತ್ತಿವೆ. ಬಾಲಿವುಡ್ ಈಗ ದಕ್ಷಿಣ ಭಾರತದ ನಿರ್ದೇಶಕರು ಮತ್ತು ನಟರೊಂದಿಗೆ ಸಹಭಾಗಿತ್ವ ಹೊಂದಲು ಬಯಸುತ್ತಿದೆ. ಅವರ ಬಗ್ಗೆ ಅವರಿಗೇ ನಂಬಿಕೆ ಉಳಿದಿಲ್ಲ. ತಮ್ಮದೇ ಸ್ವಂತ ಎನ್ನುವುದು ಅವರಲ್ಲಿ ಏನೂ ಇಲ್ಲ' ಎಂದು ಪಾಯಲ್ ವ್ಯಂಗ್ಯವಾಡಿದ್ದಾರೆ.

    ಪ್ರಶಸ್ತಿ ಸಮಾರಂಭಕ್ಕೆ ಹೋಗಲು ಬಟ್ಟೆ ಖರೀದಿಸಲು ಹಣ ಇರಲಿಲ್ಲ: ಕಷ್ಟದ ದಿನಗಳನ್ನು ನೆನೆದ ನಟಿ ಕಂಗನಾಪ್ರಶಸ್ತಿ ಸಮಾರಂಭಕ್ಕೆ ಹೋಗಲು ಬಟ್ಟೆ ಖರೀದಿಸಲು ಹಣ ಇರಲಿಲ್ಲ: ಕಷ್ಟದ ದಿನಗಳನ್ನು ನೆನೆದ ನಟಿ ಕಂಗನಾ

    English summary
    Actress Payal Ghosh who worked in South India and Bollywood said, South Indian people treats their heroines as goddesses.
    Saturday, June 27, 2020, 10:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X