Just In
- 13 min ago
ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್
- 14 min ago
ಆರ್ಆರ್ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
Don't Miss!
- Sports
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಮತ್ತೊಂದು ಚಿಕಿತ್ಸೆ
- News
ನಾಗರಹೊಳೆಯಲ್ಲಿ ಆರು ಹೊಸ ಜಾತಿಯ ಪಕ್ಷಿಗಳು ಪತ್ತೆ
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- Finance
ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿರುವ ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಲಿವುಡ್ ನಟರು ಹಣವಂತರಿಗೆ ನಟಿಯರನ್ನು ಸರಬರಾಜು ಮಾಡುತ್ತಾರೆ: ಪಾಯಲ್ ಘೋಷ್
ನಟಿ ಪಾಯಲ್ ಘೋಷ್ ಈ ವರ್ಷ ವಿವಾದದಲ್ಲಿದ್ದ ನಟಿಯರಲ್ಲಿ ಒಬ್ಬರು. ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ನಟಿ ಆ ನಂತರ ಬಾಲಿವುಡ್ ಮೇಲೆ, ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಮುಗಿಬಿದ್ದಿದ್ದಾರೆ.
ಬಾಲಿವುಡ್ ಮೇಲೆ ಸತತ ಆರೋಪಗಳನ್ನು ಮಾಡುತ್ತಲೇ ಬರುತ್ತಿರುವ ಈ ನಟಿ, ಈಗ ಇನ್ನೂ ಮುಂದೆ ಹೋಗಿ, ಬಾಲಿವುಡ್‌ನಲ್ಲಿ 'ಹೆಣ್ಣುಗಳು ವ್ಯಾಪಾರ' ನಡೆಯುತ್ತದೆ ಎಂದಿದ್ದಾರೆ.
'ಶೇ. 85% ಬಾಲಿವುಡ್‌ನ ಜನ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ. ವೇಶ್ಯಾವಾಟಿಕೆಯಲ್ಲಿ ಶಾಮೀಲಾಗಿರುವ ತಲೆಹಿಡುಕರು, ಮೈಮಾರಿಕೊಳ್ಳುವವರು ಮಾತ್ರವೇ 'ಎಕೆ vs ಎಕೆ' ಸಿನಿಮಾವನ್ನು ಇಷ್ಟಪಡುತ್ತಾರೆ. ದೊಡ್ಡ ಸ್ಟಾರ್ ನಟರುಗಳೇ ಶೇಖ್‌ಗಳಿಗೆ ಇತರೆ ಹಣವಂತರಿಗೆ ನಟಿಯರನ್ನು ಸರಬರಾಜು ಮಾಡುತ್ತಾರೆ' ಎಂದು ಟ್ವೀಟ್ ಮಾಡಿದ್ದಾರೆ ನಟಿ ಪಾಯಲ್ ಘೋಷ್.
ನಟಿ ಪಾಯಲ್ ಘೋಷ್ ರ ಟ್ವೀಟ್‌ನಲ್ಲಿ ಸಾಕಷ್ಟು ಕೆಟ್ಟ ಪದಗಳ ಬಳಕೆಯೂ ಆಗಿದೆ. ವಿಚಿತ್ರವೆಂದರೆ ಪಾಯಲ್ ಘೋಷ್ ಟ್ವಿಟ್ಟರ್‌ನಲ್ಲಿ ತಮ್ಮ ಹೆಸರಿನ ಪಕ್ಕ 'ಓಂ' ಹಾಕಿಕೊಂಡಿದ್ದಾರೆ!
ಇನ್ನು ಪಾಯಲ್ ಘೋಷ್ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ 'ಎಕೆ vs ಎಕೆ' ಸಿನಿಮಾದಲ್ಲಿ ಅನಿಲ್ ಕಪೂರ್ ಜೊತೆಗೆ ಅನುರಾಗ್ ಕಶ್ಯಪ್ ಸಹ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿಬಂದಿವೆ. ಅನುರಾಗ್ ಕಶ್ಯಪ್ ಅನ್ನು ವಿರೋಧಿಸುತ್ತಲೇ ಬಂದಿರುವ ಪಾಯಲ್ ಘೋಷ್ ಅದೇ ಸಿಟ್ಟಿನಿಂದ ಈ ಟ್ವೀಟ್ ಮಾಡಿರುವ ಸಂಭವ ಇದೆ.