For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟರು ಹಣವಂತರಿಗೆ ನಟಿಯರನ್ನು ಸರಬರಾಜು ಮಾಡುತ್ತಾರೆ: ಪಾಯಲ್ ಘೋಷ್

  |

  ನಟಿ ಪಾಯಲ್ ಘೋಷ್ ಈ ವರ್ಷ ವಿವಾದದಲ್ಲಿದ್ದ ನಟಿಯರಲ್ಲಿ ಒಬ್ಬರು. ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ನಟಿ ಆ ನಂತರ ಬಾಲಿವುಡ್‌ ಮೇಲೆ, ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಮುಗಿಬಿದ್ದಿದ್ದಾರೆ.

  ಬಾಲಿವುಡ್‌ ಮೇಲೆ ಸತತ ಆರೋಪಗಳನ್ನು ಮಾಡುತ್ತಲೇ ಬರುತ್ತಿರುವ ಈ ನಟಿ, ಈಗ ಇನ್ನೂ ಮುಂದೆ ಹೋಗಿ, ಬಾಲಿವುಡ್‌ನಲ್ಲಿ 'ಹೆಣ್ಣುಗಳು ವ್ಯಾಪಾರ' ನಡೆಯುತ್ತದೆ ಎಂದಿದ್ದಾರೆ.

  'ಶೇ. 85% ಬಾಲಿವುಡ್‌ನ ಜನ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ. ವೇಶ್ಯಾವಾಟಿಕೆಯಲ್ಲಿ ಶಾಮೀಲಾಗಿರುವ ತಲೆಹಿಡುಕರು, ಮೈಮಾರಿಕೊಳ್ಳುವವರು ಮಾತ್ರವೇ 'ಎಕೆ vs ಎಕೆ' ಸಿನಿಮಾವನ್ನು ಇಷ್ಟಪಡುತ್ತಾರೆ. ದೊಡ್ಡ ಸ್ಟಾರ್ ನಟರುಗಳೇ ಶೇಖ್‌ಗಳಿಗೆ ಇತರೆ ಹಣವಂತರಿಗೆ ನಟಿಯರನ್ನು ಸರಬರಾಜು ಮಾಡುತ್ತಾರೆ' ಎಂದು ಟ್ವೀಟ್ ಮಾಡಿದ್ದಾರೆ ನಟಿ ಪಾಯಲ್ ಘೋಷ್.

  ನಟಿ ಪಾಯಲ್ ಘೋಷ್‌ ರ ಟ್ವೀಟ್‌ನಲ್ಲಿ ಸಾಕಷ್ಟು ಕೆಟ್ಟ ಪದಗಳ ಬಳಕೆಯೂ ಆಗಿದೆ. ವಿಚಿತ್ರವೆಂದರೆ ಪಾಯಲ್ ಘೋಷ್ ಟ್ವಿಟ್ಟರ್‌ನಲ್ಲಿ ತಮ್ಮ ಹೆಸರಿನ ಪಕ್ಕ 'ಓಂ' ಹಾಕಿಕೊಂಡಿದ್ದಾರೆ!

  ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada

  ಇನ್ನು ಪಾಯಲ್ ಘೋಷ್ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ 'ಎಕೆ vs ಎಕೆ' ಸಿನಿಮಾದಲ್ಲಿ ಅನಿಲ್ ಕಪೂರ್ ಜೊತೆಗೆ ಅನುರಾಗ್ ಕಶ್ಯಪ್ ಸಹ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿಬಂದಿವೆ. ಅನುರಾಗ್ ಕಶ್ಯಪ್ ಅನ್ನು ವಿರೋಧಿಸುತ್ತಲೇ ಬಂದಿರುವ ಪಾಯಲ್ ಘೋಷ್ ಅದೇ ಸಿಟ್ಟಿನಿಂದ ಈ ಟ್ವೀಟ್ ಮಾಡಿರುವ ಸಂಭವ ಇದೆ.

  English summary
  Payal Ghosh tweeted 85% of the Bollywood industry is into flesh business. She also accused big stars supply heroines to sheikhs and other wealthy men across the world.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X