ಜನಸಂಖ್ಯೆ ಹೆಚ್ಚಳಕ್ಕೆ ಆಮೀರ್ ಖಾನ್ ಅಂತವರೇ ಕಾರಣ: ಬಿಜೆಪಿ ಸಂಸದ ಸುಧೀರ್ ಗುಪ್ತಾ
ದೇಶದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್ ಗುಪ್ತಾ, ಬಾಲಿವುಡ್‌ನ ಆಮೀರ್ ಖಾನ್ ಅವರಂತ ಜನರಿಂದ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜನಸಂಖ್ಯಾ ಸ್ಫೋಟದ ಬಗ್ಗೆ ಮಾತನಾಡಿದ ಬಿಜೆಪಿ ಎಂಪಿ ಸುಧೀರ್ ಗುಪ್ತಾ, "ಭಾರತೀಯ ದೃಷ್ಟಿಕೋನದಲ್ಲಿ ಮಾತನಾಡುತ್ತಾ, ಇದು ಆಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾಗೆ ಇಬ್ಬರು ಮಕ್ಕಳು. ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ಒಂದು ಮಗುವಿದೆ. ಇದೀಗ ಮೂರನೇ ಹೆಂಡತಿಗೆ ಹುಡುಕಾಟ ಪ್ರಾರಂಭಿಸಿದ್ದಾರೆ" ಎಂದು ಹೇಳಿದ್ದಾರೆ.
"ಇದು ಜಗತ್ತಿಗೆ ಭಾರತ ನೀಡುತ್ತಿರುವ ಸಂದೇಶವೇ?" ಎಂದು ಗುಪ್ತಾ ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ ಜನಸಂಖ್ಯೆ ಅಸಮತೋಲನದ ಹಿಂದೆ ಆಮೀರ್ ಖಾನ್ ಅವರಂತಹ ಜನರು ಪ್ರಮುಖ ಪಾತ್ರವಹಿಸುತ್ತಿರುವುದು ದುರದೃಷ್ಟಕರ" ಎಂದು ಗುಪ್ತಾ ಹೇಳಿದ್ದಾರೆ.

ವಿಶ್ವ ಜನಸಂಖ್ಯೆ ದಿನದಂದು ಸುಧೀರ್ ಗುಪ್ತಾ ಈ ಮಾತುಗಳನ್ನು ಹೇಳಿದ್ದಾರೆ. ಉತ್ತರ ಪ್ರದೇಶದ ಜನಸಂಖ್ಯಾ ನೀತಿಯು 2026 ರ ವೇಳೆಗೆ ಪ್ರತಿ ಸಾವಿರಕ್ಕೆ 2.1 ಮತ್ತು 2030ರ ವೇಳೆಗೆ 1.9ಗೆ ಇಳಿಸುವ ಗುರಿ ಹೊಂದಿದೆ. ಕಳೆದ ಏಳು ದಶಕಗಳಲ್ಲಿ ಭಾರತದ ಭೂಪ್ರದೇಶ ವಿಸ್ತರಿಸಿಲ್ಲ. ಆದರೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದು ದೇಶಕ್ಕೆ ಒಳ್ಳೆಯದಲ್ಲ ಎಂದು ಗುಪ್ತಾ ಹೇಳಿದ್ದಾರೆ.
Recommended Video
ಬಾಲಿವುಡ್ ನಟ ಆಮೀರ್ ಖಾನ್ ಇತ್ತೀಚಿಗಷ್ಟೆ 2ನೇ ಪತ್ನಿ ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದರು. ಆಮೀರ್ ಖಾನ್ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಇದೀಗ ಆಮೀರ್ ಖಾನ್ ಬಗ್ಗೆ ಬಿಜೆಪಿ ಸಂಸದರ ವಿವಾದಾತ್ಮಕ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.


Click it and Unblock the Notifications










