twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾಗಳು ಕಾಲ್ಪನಿಕವಾದವು.. ರಿಯಲ್ ಅಲ್ಲ: ಜಾನ್ ಅಬ್ರಹಾಂ ಹೀಗೆ ಹೇಳಿದ್ದೇಕೆ?

    By Suneel
    |

    'ಧೂಮ್' ಚಿತ್ರ ಖ್ಯಾತಿಯ ಬಾಲಿವುಡ್ ನಟ ಜಾನ್ ಅಬ್ರಹಾಂ ಭಾರತದ ಸಾಮಾಜಿಕ ಸಮಸ್ಯೆಗಳು ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇದೇ ನಟ ಈಗ 'ಸಿನಿಮಾಗಳು ಕೇವಲ ಕಾಲ್ಪನಿಕವಾದವು.. ರಿಯಲ್ ಅಲ್ಲ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಸಿನಿಮಾದಲ್ಲಿನ ಯಾವ ಅಂಶವನ್ನು ಅಳವಡಿಸಿಕೊಳ್ಳಬೇಕು,, ಯಾವುದನ್ನು ಮಾತ್ರ ಪ್ರೇರಣೆ ಆಗಿ ತೆಗೆದುಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು' ಎಂದಿದ್ದಾರೆ.

    ದಕ್ಷಿಣ ಏಷಿಯಾ ಕೈಗೊಂಡಿದ್ದ 'ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಂ' ಆಂದೋಲನದ ಯಶಸ್ವಿಗಾಗಿ ತಮ್ಮ ಬೆಂಬಲ ನೀಡಿರುವ ಜಾನ್ ಅಬ್ರಹಾಂ ಮೇಲಿನಂತೆ ಹೇಳಿದ್ದಾರೆ. 'ಮಾನವ ಕಳ್ಳಸಾಗಣೆ ಮತ್ತು ಮಾದಕ ದ್ರವ್ಯ ದುರುಪಯೋಗ'ದ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ತಮ್ಮ ಆಲೋಚನೆಗಳನ್ನು ಹೀಗೆ ವ್ಯಕ್ತಪಡಿಸಿದ್ದಾರೆ.

    Peoples Must Realise Films Are Fictional, Not Real: John Abraham

    'ಸಿನಿಮಾಗಳು ಪ್ರತಿಯೊಬ್ಬರ ಜೀವನದ ಪ್ರತಿಬಿಂಬವಾಗಿದ್ದು, ಪ್ರತಿಕ್ರಮ ಬೀರುತ್ತವೆ. ಮಾದಕ ದ್ರವ್ಯ ದುರುಪಯೋಗದಲ್ಲಿ ತೊಡಗಿಕೊಳ್ಳಲು ಸಿನಿಮಾಗಳು ಪರಿಣಾಮಕಾರಿ ಮಾಧ್ಯಮವಾಗಿದೆ. ಆದಾಗ್ಯೂ ನನ್ನ ಸಿನಿಮಾಗಳನ್ನು ನೋಡಿದಲ್ಲಿ.. ಅಲ್ಲಿ ಡ್ರಗ್ಸ್ ಬಳಕೆಯ ವಿರುದ್ಧವಾಗಿ ಪರಿಣಾಮಕಾರಿ ಸಂದೇಶ ಇರುತ್ತದೆ' ಎಂದಿದ್ದಾರೆ.

    'ಸಿನಿಮಾಗಳನ್ನು ನೋಡಿಯೇ ಇವತ್ತಿನ ದಿನ ಬಹುಸಂಖ್ಯಾತ ಯುವಜನತೆ ತಮ್ಮ ಆರೋಗ್ಯ ಮತ್ತು ಬಾಡಿ ಫಿಟ್‌ನೆಸ್ ಕಡೆ ಗಮನಹರಿಸುತ್ತಿದ್ದಾರೆ. ಉತ್ತಮ ಚಟುವಟಿಕೆಗಳನ್ನು ಮಾಡಿ ಸುರಕ್ಷಿತವಾಗಿ ಇರಲು ಬಯಸುತ್ತಿದ್ದಾರೆ. ಇದು ಸಿನಿಮಾ ಸಹ ಹೇಗೆ ಜನತೆಯನ್ನು ಬದಲಾವಣೆ ಮಾಡುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ'.

    'ಮಾದಕ ದ್ರವ್ಯ ಸೇವನೆ ಕೇವಲ ಒಬ್ಬ ವ್ಯಕ್ತಿಯ ಮೇಲೆ ದುಷ್ಪರಿಣಾಮ ಬೀರದೆ, ಆತನ ಕುಟುಂಬ, ಆತನ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ' ಎಂದು ಡ್ರಗ್ಸ್ ಸೇವನೆ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನದಲ್ಲಿ ಹೇಳಿದ್ದಾರೆ. ಜಾನ್ ಅಬ್ರಹಾಂ ನೂರಕ್ಕೆ ನೂರರಷ್ಟು ಶೇಕಡ ಮಾದಕ ದ್ರವ್ಯ ಸೇವನೆಯಿಂದ ದೂರವಿದ್ದು, ಇಂತಹ ಚಟಗಳಿಂದ ದೂರ ಉಳಿಯಲು ರನ್ನಿಂಗ್, ಕ್ರೀಡೆ, ಸೈಕಲಿಂಗ್ ಮತ್ತು ಮುಂತಾದ ಉತ್ತಮ ಚಟಗಳಿಗೆ ದಾಸರಾಗುವುದೇ ಮೂಲಮಂತ್ರ ಎಂದಿದ್ದಾರೆ.

    English summary
    Actor John Abraham, who is actively involved in spreading awareness about social issues in India, says people need to realise that films are fictional and not real, and realise where to draw the line when it comes to imbibing some facts.
    Wednesday, August 2, 2017, 17:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X