ಜಾನ್ ಅಬ್ರಹಾಂ, ಅನುಷ್ಕಾ ಶರ್ಮಾರನ್ನು ಸೋಲಿಸಿ 2023 ರ ಅತ್ಯಂತ ಸುಂದರ ಸಸ್ಯಾಹಾರಿ ಸೆಲೆಬ್ರಿಟಿ ಪಟ್ಟ ಪಡೆದ ಜಾಕಿ ಶ್ರಾಫ್
PETA (People for the Ethical Treatment of Animals) ಇಂಡಿಯಾ ನೀಡುವ '2023 ರ ಅತ್ಯಂತ ಸುಂದರವಾದ ಸಸ್ಯಾಹಾರಿ ಸೆಲೆಬ್ರಿಟಿ' ಪ್ರಶಸ್ತಿ ಈ ಬಾರಿ ನಟ ಜಾಕಿ ಶ್ರಾಫ್ ಪಾಲಾಗಿದೆ. ಸಸ್ಯಹಾರಿಗಳನ್ನು ಉತ್ತೇಜಿಸುವ ಮತ್ತು ಆರೋಗ್ಯಕರ ಜೀವನಶೈಲಿಗೆ ಜನರನ್ನು ಸೆಳೆಯಲು ಈ ಪ್ರಶಸ್ತಿ ನೀಡಲಾಗುತ್ತದೆ.
ಜಾಕಿ ಶ್ರಾಫ್ 2023 ರ ಅತ್ಯಂತ ಸುಂದರ ಸಸ್ಯಾಹಾರಿ ಸೆಲೆಬ್ರಿಟಿ
ನಟ ಜಾಕಿ ಶ್ರಾಫ್ ಇತ್ತೀಚೆಗೆ ತಮ್ಮ ಇತ್ತೀಚಿನ ಸಿನಿಮಾ 'ಮಸ್ತ್ ಮೇ ರೆಹನೆ ಕಾ' ದಲ್ಲಿ ಕಾಣಿಸಿಕೊಂಡಿದ್ದಾಎ. ಇದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನಟ ರಜನಿಕಾಂತ್ ಅಭಿನಯದ ತಮಿಳು ಸಿನಿಮಾ 'ಜೈಲರ್' ಬಳಿಕ ಬಾಲಿವುಡ್‌ನಲ್ಲಿ ಜಾಕಿ ಶ್ರಾಫ್ ಕಾಣಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆಯ ಜೊತೆಗೆ ಜಾಕಿ ಶ್ರಾಫ್, ಸಾಮಾಜಿಕ ಕೆಲಸಗಳಿಗೂ ಹೆಸರುವಾಸಿಯಾಗಿದ್ದಾರೆ.

ಈ ಕಾರಣದಿಂದಲೇ ಜನ ಅವರನ್ನು ಪ್ರೀತಿಯಿಂದ ಜಗ್ಗು ದಾದಾ ಎಂದು ಕರೆಯುತ್ತಾರೆ. ಜಾಕಿ ಶ್ರಾಫ್ ಅವರ ಫಿಟ್‌ನೆಸ್‌ಗೆ ಕಾರಣವಾದ ಅಂಶವೆಂದರೆ ಸಸ್ಯಾಹಾರ ಮತ್ತು ಆರೋಗ್ಯಕರ ಜೀವನಶೈಲಿ. ಇದಕ್ಕಾಗಿ ಅವರು ತುಂಬಾ ಪ್ರಯತ್ನ ಪಟ್ಟಿದ್ದು, ಅವರ ಸಮರ್ಪಣಾ ಭಾವ ಎಲ್ಲರಿಗೂ ಅಚ್ಚುಮೆಚ್ಚು.
ಅವರ ಇಂತಹ ಬದ್ಧತೆಯನ್ನು ಗುರುತಿಸಿ, PETA ಅವರನ್ನು 2023 ರ ಅತ್ಯಂತ ಸುಂದರ ಸಸ್ಯಾಹಾರಿ ಸೆಲೆಬ್ರಿಟಿ ಎಂದು ಗೌರವಿಸಿದೆ. ಈ ಸಾಲಿನಲ್ಲಿ ಪ್ರಶಸ್ತಿಯನ್ನು ಪಡೆಯಲು ಜಾನ್ ಅಬ್ರಹಾಂ ಮತ್ತು ಅನುಷ್ಕಾ ಶರ್ಮಾ ಕೂಡ ಇದ್ದರು. ಆದರೆ ಅವರನ್ನು ಮೀರಿಸಿ ಜಾಕಿ ಶ್ರಾಫ್ ಗೌರವ ಪಡೆದಿದ್ದಾರೆ.
ನಾನು ಸರಿಯಾದ ದಾರಿಯಲ್ಲಿದ್ದೇನೆ ಎಂದು ಈ ಪ್ರಶಸ್ತಿ ತೋರಿಸಿದೆ: ಜಾಕಿ ಶ್ರಾಫ್
ಪ್ರಶಸ್ತಿ ಪಡೆಯಲು ಜಾಕಿ ಶ್ರಾಫ್ ಹೆಚ್ಚು ವೋಟುಗಳನ್ನು ಪಡೆದಿದ್ದಾರೆ. ಪಡೆದರು. ಈ ಕುರಿತು ಮಾತನಾಡಿದ ಅವರು, "ಈ ಪ್ರಶಸ್ತಿ ನೀಡಿದಕ್ಕಾಗಿ ನಾನು ಪೇಟಾ ಇಂಡಿಯಾಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ನಾನು ಯಾವಾಗಲೂ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಇಷ್ಟಪಡುತ್ತೇನೆ. ಸಸ್ಯಾಹಾರಕ್ಕೆ ತಿರುಗುವುದು ನಾನು ಮಾಡಿದ ಉತ್ತಮ ಆಯ್ಕೆಯಾಗಿದೆ. ಅದಕ್ಕಾಗಿ ಇಂತಹ ಅದ್ಭುತವಾದ ಗೌರವವನ್ನು ಸ್ವೀಕರಿಸುವುದು ನನಗೆ ತುಂಬಾ ಖುಷಿ ಉಂಟುಮಾಡುತ್ತದೆ" ಎಂದಿದ್ದಾರೆ.

"ನಾನು ಯಾವಾಗಲೂ ಜನರಿಗೆ ಹೇಳುವುದೇನೆಂದರೆ, ನಾವು ಬಂದಾಗ ಈ ಜಗತ್ತು ಹೇಗಿತ್ತೋ ಅದಕ್ಕಿಂತ ಉತ್ತಮವಾದ ಸ್ಥಳವಾಗಿ ನಾವು ಈ ಜಗತ್ತನ್ನು ಬಿಟ್ಟು ಹೋಗಬೇಕು. ಈ ಪ್ರಶಸ್ತಿಯು ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂಬುದನ್ನು ಮತ್ತೆ ತೋರಿಸಿದೆ" ಎಂದು ಸಸ್ಯಹಾರದ ಬಗೆಗಿನ ಕಾಳಜಿ ತಿಳಿಸಿದ್ದಾರೆ.
ಜಾಕಿ ಶ್ರಾಫ್
ಜಗ್ಗು ದಾದಾ ಎಮದು ಹೆಸರು ಪಡೆದಿರುವ ಜಾಕಿ ಶ್ರಾಫ್, ಸಮಾಜದ ಒಳಿತಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು, ಜನರಿಗೆ ಜೀವರಕ್ಷಕ ತರಬೇತಿ ನೀಡುವುದು ಸೇರಿ ಹಲವು ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ.
ಇನ್ನು, ತಮ್ಮನ್ನು ಭೇಟಿಯಾಗುವ ಫ್ಯಾನ್ಸ್, ಸೆಲಬ್ರಿಟಿಗಳಿಗೆ ಯಾವಾಗಲೂ ಗಿಡಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಏಕೆಂದರೆ ಆಮ್ಲಜನಕ ಮಾನವಕುಲವು ಪಡೆಯಬಹುದಾದ ಅತ್ಯುತ್ತಮ ಗಿಫ್ಟ್ ಆಗಿದ್ದು, ಅದನ್ನು ಗಿಡಗಳಿಂದ ಪಡೆಯಬಹುದು ಎಂದು ಜಾಕಿ ಶ್ರಾಫ್ ನಂಬುತ್ತಾರೆ.


Click it and Unblock the Notifications











