ಪಾಕಿಸ್ತಾನದಲ್ಲಿ ಫ್ಯಾಂಟಮ್ ಗೆ ಹೆದರಿದ 'ಉಗ್ರ'

By ಬ್ರಹ್ಮಾನಂದ ಅರಳಿ

ಉಗ್ರಗಾಮಿ, ಪಾಕಿಸ್ತಾನದ ಜೆಡಿಯು ಮುಖಂಡ, 26, 2011ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, ಕಬೀರ ಖಾನ್ ನೀರ್ದೆಶನದ 'ಫ್ಯಾಂಟಮ್' ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡದಂತೆ ಸಲ್ಲಿಸಿದ್ದ ಮನವಿಯನ್ನು ಲಾಹೋರ್ ಹೈಕೋರ್ಟ್ ಪುರಸ್ಕರಿಸಿದೆ.

ತನ್ನ ಬಗ್ಗೆ ಚಿತ್ರದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ಇದು ಪಾಕಿಸ್ತಾನ ಜನತೆಯು ತನ್ನ ಬಗ್ಗೆ ಮತ್ತು ಜೆಡಿಯು ಸಂಘಟನೆ ಬಗ್ಗೆ ತಪ್ಪು ತಿಳಿಯುತ್ತಾರೆ. ನನ್ನನ್ನು ಕೆಟ್ಟದಾಗಿ ತೋರಿಸುವುದು ಭಾರತದ ಒಂದು ಷಡ್ಯಂತ್ರ,

ಆದ್ದರಿಂದ ಪಾಕಿಸ್ತಾನದಲ್ಲಿ ಫ್ಯಾಂಟಮ್ ಚಿತ್ರವನ್ನುನೀಷೆಧಿಸಬೇಕು ಎಂದು ಉಗ್ರಗಾಮಿ ಹಫೀಜ್ ಸಯೀದ್ ಪಾಕಿಸ್ತಾನದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು.

ಸಂಘಟನೆಯ ಅಹವಾಲನ್ನು ಆಲಿಸಿದ ಪಾಕಿಸ್ತಾನ ಹೈಕೋರ್ಟ್ ನ್ಯಾಯಮೂರ್ತಿ ಶಾಹಿದ್ ಬಿಲಾಲ್ ಫ್ಯಾಂಟಮ್ ಚಿತ್ರವನ್ನು ಪಾಕ್ ನಾದ್ಯಂತ ಬಿಡುಗಡೆ ನಿಷೇಧಕ್ಕೆ ಆದೇಶ ನೀಡಿದೆ.

ಹಫೀಜ್ ಸಯೀದ್ ಕೋರ್ಟ್ ವಿವಾದದ ಪೂರ್ಣ ಸುದ್ದಿ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ,.

ನ್ಯಾಯಮೂರ್ತಿ ತೀರ್ಪಿನ ವೇಳೆ, ಇಡೀ ಪಾಕಿಸ್ತಾನದ ತುಂಬಾ ಭಾರತೀಯ ಚಿತ್ರದ ಸಿಡಿ ಕ್ಯಾಸೆಟ್ ದೊರೆಯುತ್ತವೆ.

ನ್ಯಾಯಾಲಯ ಚಿತ್ರವನ್ನು ನೀಷೆಧಿಸಿದ ಬಳಿಕ ಮಾರ್ಕೆಟ್ ನಲ್ಲಿ ಚಿತ್ರದ ಸಿಡಿ ದೊರೆಯದಂತೆ ಮಾಡುವುದು ಸರ್ಕಾರದ ಕೆಲಸ, ಸರ್ಕಾರ ಯಾವ ರೀತಿಯಲ್ಲಿ ಕೆಲಸ ಮಾಡಿದೆ ಎಂಬುದನ್ನು ಕೋರ್ಟ್ ಪರಿಶೀಲಿಸಬಹುದು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಫ್ಯಾಂಟಮ್ ಚಿತ್ರವನ್ನು ಸಲ್ಮಾನ್ 'ಭಜರಂಗಿ ಭಾಯ್ ಜಾನ್' ಖ್ಯಾತಿಯ ಕಬೀರ್ ಖಾನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸೈಫ್ ಆಲಿ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 28ರಂದು ಚಿತ್ರ ದೇಶದಾದ್ಯಂತ ತೆರೆ ಕಾಣುತ್ತಿದೆ.

ಈ ಹಿಂದೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟಿಸಿದ್ದ 'ಏಕ್ತಾ ಟೈಗರ್' ಚಿತ್ರವು ಪಾಕಿಸ್ತಾನಕ್ಕೆ ಸಂಬಂಧಿಸಿದ್ದು, ಆ ಸಂದರ್ಭದಲ್ಲೂ ಪಾಕಿಸ್ತಾನದಲ್ಲಿ ಚಿತ್ರ ನಿಷೇಧಕ್ಕೊಳಪಟ್ಟಿತ್ತು.

ಭಾರತದ ವಾಣಿಜ್ಯ ನಗರಿ ಮುಂಬಯಿ ಮೇಲೆ ನಡೆದ 26, 2011ರ ಉಗ್ರರ ದಾಳಿಯ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದ್ದು, ಈ ಚಿತ್ರದಲ್ಲಿ ಪಾಕಿಸ್ತಾನದಲ್ಲಿ ಇರುವ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಪಾತ್ರವನ್ನು ಬಹಳ ಕೆಟ್ಟದಾಗಿ ತೋರಿಸಲಾಗಿದೆ ಆದ ಕಾರಣ ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಬಾರದು ಎಂದು ಜೆಡಿಯು ಸಂಘಟನೆ ಆಗಸ್ಟ 8ರಂದು ಪಾಕಿಸ್ತಾನ ಹೈಕೋರ್ಟನ ಮೊರೆ ಹೋಗಿತ್ತು.

More from Filmibeat

English summary
A Pakistani court banned the release of Bollywood movie 'Phantom' in the country on a plea filed by JUD chief and Mumbai attack mastermind Hafiz Saeed against it. 'Phantom' features Hindi Actor Saif Ali Khan, Hindi Actress Katrina Kaif in the lead role. The movie is directed by Kabir Khan of 'Bajrangi Bhaijaan' fame. He had alleged that the film, set on post-26/11 attacks is to disgrace Pakistan. He had even said that film has "venom against Pakistan and JuD". Back in 2012, Kabir Khan-directed Ek Tha Tiger had also faced a ban in Pakistan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X