twitter
    For Quick Alerts
    ALLOW NOTIFICATIONS  
    For Daily Alerts

    ನಟಿಯರ ಮೊಬೈಲ್ ಎನ್‌ಸಿಬಿ ಕೈಯಲ್ಲಿ, ಹೆಚ್ಚಾದ ಆತಂಕ

    |

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಅವರುಗಳನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸಿದೆ.

    ಈ ನಟಿಯರ ಮೊಬೈಲ್ ಫೋನ್‌ಗಳನ್ನು ಎನ್‌ಸಿಬಿ ತನಿಖೆ ಕಾರಣಕ್ಕೆ ತೆಗೆದುಕೊಂಡಿದೆ. ಮೊಬೈಲ್ ಫೋನ್‌ನ ಕರೆ ಮಾಹಿತಿ, ವಾಟ್ಸ್‌ಆಪ್ ಚಾಟ್, ಗೂಗಲ್ ಹುಡುಕಾಟ ಇನ್ನೂ ಹಲವು ಮಾಹಿತಿಗಳನ್ನು ಎನ್‌ಸಿಬಿ ಬಗೆದು ತೆಗೆಯಲಿದೆ.

    ಎನ್‌ಸಿಬಿಯಿಂದ ಮತ್ತೊಬ್ಬ ಸೆಲೆಬ್ರಿಟಿ ಅರೆಸ್ಟ್: ಕರಣ್ ಜೋಹರ್‌ಗೆ ಆತಂಕಎನ್‌ಸಿಬಿಯಿಂದ ಮತ್ತೊಬ್ಬ ಸೆಲೆಬ್ರಿಟಿ ಅರೆಸ್ಟ್: ಕರಣ್ ಜೋಹರ್‌ಗೆ ಆತಂಕ

    ಈ ನಟಿಯರು ಡ್ರಗ್ಸ್‌ ಬಗ್ಗೆ ಮಾತನಾಡಿದ್ದರೆ, ಡ್ರಗ್ಸ್ ಕುರಿತಾಗಿ ಸಂದೇಶಗಳನ್ನು ಕಳುಹಿಸಿದ್ದರೆ, ಡ್ರಗ್ಸ್ ಪೆಡ್ಲಿಂಗ್ ಗ್ಯಾಂಗ್ ಜೊತೆಗೆ ಸಂಪರ್ಕ ಹೊಂದಿದ್ದರೆ ಎಂಬ ಅಂಶಗಳು ಮೊಬೈಲ್ ಫೋನ್ ತನಿಖೆಯಿಂದ ಗೊತ್ತಾಗಲಿದೆ. ಅಷ್ಟೆ ಅಲ್ಲದೆ ಇನ್ನೂ ಎಷ್ಟು ಮಂದಿ ಸೆಲೆಬ್ರಿಟಿಗಳು ಈ ಜಾಲದಲ್ಲಿದ್ದಾರೆಂಬುದು ಸಹ ಬಹಿರಂಗವಾಗು ಸಾಧ್ಯತೆ ಇದೆ.

    ಆರು ಗಂಟೆ ಕಾಲ ವಿಚಾರಣೆ

    ಆರು ಗಂಟೆ ಕಾಲ ವಿಚಾರಣೆ

    ದೀಪಿಕಾ ಪಡಕೋಣೆ, ಸಾರಾ ಆಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಅವರು ನಿನ್ನೆ ಎನ್‌ಸಿಬಿ ಇಂದ ವಿಚಾರಣೆಗೆ ಒಳಪಟ್ಟಿದ್ದಾರೆ. ದೀಪಿಕಾ ಪಡುಕೋಣೆಯನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎನ್‌ಸಿಬಿ ಅಧಿಕಾರಿಗಳು.

    ಡಿಲೀಟ್ ಆಗಿರುವ ಮಾಹಿತಿಯೂ ಹೊರಕ್ಕೆ

    ಡಿಲೀಟ್ ಆಗಿರುವ ಮಾಹಿತಿಯೂ ಹೊರಕ್ಕೆ

    ನಟಿಯರಿಂದ ವಶಪಡಿಸಿಕೊಂಡಿರುವ ಮೊಬೈಲ್‌ಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಮೊಬೈಲ್‌ನಲ್ಲಿರುವ ಎಲ್ಲಾ ಡಾಟಾವನ್ನು ಹೊರಗೆತೆಗೆಯಲಾಗುತ್ತದೆ. ಡಿಲೀಟ್ ಆಗಿರುವ ಮಾಹಿತಿಯನ್ನು ಸಹ ಹೊರಗೆ ತೆಗೆಯಲಾಗುತ್ತದೆ.

    ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು?ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು?

    ಕರಿಶ್ಮಾ ಪ್ರಸಾದ್, ಸಿಮೋನ್ ಕಂಬಾಟಾ ಮೊಬೈಲ್ ಸಹ ವಶ

    ಕರಿಶ್ಮಾ ಪ್ರಸಾದ್, ಸಿಮೋನ್ ಕಂಬಾಟಾ ಮೊಬೈಲ್ ಸಹ ವಶ

    ನಟಿಯರನ್ನು ಮಾತ್ರವಲ್ಲದೆ, ದೀಪಿಕಾ ಅವರ ವ್ಯವಸ್ಥಾಪಕಿ ಕರಿಶ್ಮಾ ಪ್ರಕಾಶ್ ಅವರನ್ನೂ ವಿಚಾರಣೆಗೆ ಒಳಪಡಿಸಿ ಅವರ ಮೊಬೈಲ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಟ್ಯಾಲೆಂಟ್ ಮ್ಯಾನೇಜರ್ ಜಯಾ ಸಾಹಾ, ಫ್ಯಾಷನ್ ಡಿಸೈನರ್ ಸಿಮೋನ್ ಕಂಬಾಟಾ ಅವರ ಮೊಬೈಲ್ ಅನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    Recommended Video

    ಸಚಿವರ ಕೆಟ್ಟ ಅಂತ್ಯಕ್ರಿಯೆ ನೋಡಿ ಕಂಬನಿ ಮಿಡಿದ ಜಗ್ಗೇಶ್ | Filmibeat Kannada
    ಧರ್ಮಾ ಪ್ರೊಡಕ್ಷನ್‌ನ ಕ್ಷಿತಿಜ್ ಬಂಧನ

    ಧರ್ಮಾ ಪ್ರೊಡಕ್ಷನ್‌ನ ಕ್ಷಿತಿಜ್ ಬಂಧನ

    ಈ ಮಧ್ಯೆ, ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್‌ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ಆಗಿದ್ದ ಕ್ಷಿತಿಜ್ ರವಿ ಪ್ರಸಾದ್ ಅನ್ನು ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಸುಶಾಂತ್ ಮಾಜಿ ಮ್ಯಾನೇಜರ್ ಜಯಾ ಸಾಹಾ ಮೊಬೈಲ್ ಮಾಹಿತಿ ಆಧಾರದಮೇಲೆ ಕ್ಷಿತಿಜ್ ಅನ್ನು ವಿಚಾರಣೆಗೆ ಒಳಪಡಿಸಿ, ಬಂಧಿಸಲಾಗಿದೆ.

    ಡ್ರಗ್ಸ್ ಪ್ರಕರಣ: ವೈರಲ್ ಆಗಿರುವ ಪಾರ್ಟಿ ವಿಡಿಯೋ ಬಗ್ಗೆ ಕರಣ್ ಜೋಹರ್ ಸ್ಪಷ್ಟನೆಡ್ರಗ್ಸ್ ಪ್ರಕರಣ: ವೈರಲ್ ಆಗಿರುವ ಪಾರ್ಟಿ ವಿಡಿಯೋ ಬಗ್ಗೆ ಕರಣ್ ಜೋಹರ್ ಸ್ಪಷ್ಟನೆ

    English summary
    Mobile phones of Deepika Padukone, Shraddha Kapoor, Sara Ali Khan, Karishma Prakash, Rakul Preet Singh, Simone Khambatta and Jaya Shah have been seized: Narcotics Control Bureau (NCB) official.
    Monday, September 28, 2020, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X