»   » ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಐಶ್-ಅಭಿ

ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಐಶ್-ಅಭಿ

By: ಸೋನು ಗೌಡ
Subscribe to Filmibeat Kannada

ಇಂದು (ಏಪ್ರಿಲ್ 20, 2016), ಬಚ್ಚನ್ ಕುಟುಂಬದವರಿಗೆ ಮರೆಯಲಾರದ ದಿನ. ಈ ದಿನ ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರ ಹೆಸರಿನಲ್ಲಿ ತಮ್ಮ ಹೆಸರನ್ನು ಜೋಡಿಸಿಕೊಂಡ ದಿನ. ಅದಕ್ಕಿಂತ ಹೆಚ್ಚಾಗಿ ನೀಲಿ ಕಂಗಳ ತಾರೆ 'ಬಚ್ಚನ್' ಫ್ಯಾಮಿಲಿಯ ಸೊಸೆ ಆದ ಅಪೂರ್ವ ದಿನ.

ಹೌದು ಇಂದು ಬಾಲಿವುಡ್ ಕ್ಷೇತ್ರದ ಎಲ್ಲರ ಹಾಟ್ ಫೇವರಿಟ್, ಹಾಗೂ ಸ್ಟೈಲಿಷ್ ದಂಪತಿಗಳಾದ ಅಭಿಷೇಕ್ ಬಚ್ಚನ್ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ 9ನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನ.[ಸುಂದರಿ ಐಶ್ವರ್ಯ ರೈ ಅವರ ಹೊಸ ಫೋಟೋ ಶೂಟ್]

In Pics: Aishwarya Rai and Abhishek Bachchan celebrate 9th Wedding Anniversary

ಅಂದಹಾಗೆ ಐಶ್ವರ್ಯ ರೈ ದಂಪತಿಗಳು ಹೆಚ್ಚು ಆಡಂಬರ ಬಯಸದೆ ಬಹಳ ಸಿಂಪಲ್ ಆಗಿ ಮನೆಯಲ್ಲಿಯೇ ಕುಟುಂಬದ ಸದಸ್ಯರೊಡನೆ ಮಾತ್ರ 9ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಲು ಪ್ಲ್ಯಾನ್ ಮಾಡಿದ್ದಾರೆ.

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗ ನಟ ಅಭಿಷೇಕ್ ಬಚ್ಚನ್ ಅವರು 2007 ರಲ್ಲಿ ಮಾಜಿ ವಿಶ್ವಸುಂದರಿ 'ಕುಡ್ಲದ' ಬೆಡಗಿ ಐಶ್ವರ್ಯ ರೈ ಅವರನ್ನು ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಇವರಿಬ್ಬರ ಪ್ರೀತಿಯ ಸಂಕೇತ ಅಂತ 2011 ರಲ್ಲಿ ಇವರಿಗೆ ಹೆಣ್ಣು ಮಗು ಆರಾಧ್ಯ ಹುಟ್ಟಿದಳು.[ಕನ್ನಡ ಚಿತ್ರದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ನಟನೆ?]

ವಿಶ್ವದ ಅತೀ ಸುಂದರಿಯಾದ ತಮ್ಮ ಹೆಂಡತಿಯನ್ನು ಅಭಿಷೇಕ್ ಬಚ್ಚನ್ ಅವರು ಬಹಳ ಪ್ರೀತಿಸುತ್ತಾರಂತೆ. ಮಾತ್ರವಲ್ಲದೇ ಇವರಿಬ್ಬರಿಗೆ ಏನೇ ಸಮಸ್ಯೆ ಬಂದರೂ ಇವರಿಬ್ಬರೂ ಸೇರಿಯೇ ಪರಿಹಾರ ಕಂಡುಕೊಳ್ಳುತ್ತಾರಂತೆ. ಅದಕ್ಕೆ ಐಶ್ ಮತ್ತು ಅಭಿ ಮಧ್ಯೆ ಗಾಢವಾದ ಪ್ರೇಮ ಬಂಧನ ಏರ್ಪಟ್ಟಿದೆ.

ಅದೇನೇ ಇರಲಿ ಇಂದು ಸಂಭ್ರಮದಿಂದ ಭರ್ಜರಿ 9ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸುತ್ತಿರುವ ಬಚ್ಚನ್ ಕುಡಿಯ ದಂಪತಿಗಳಾದ ಐಶ್-ಅಭಿಗೆ ನಮ್ಮ ಕಡೆಯಿಂದಲೂ 'ಹ್ಯಾಪಿ ಮ್ಯಾರೇಜ್ ಆನಿವರ್ಸರಿ'.[ಸೂಪರ್ ಸ್ಟಾರ್ ರಜಿನಿ ಕೈ ಹಿಡಿದ ಬಿಗ್ ಬಿ ಅಮಿತಾಭ್ ಬಚ್ಚನ್]

ಮದುವೆ ವಾರ್ಷಿಕೋತ್ಸವದ ವಿಶೇಷವಾಗಿ ದಂಪತಿಗಳ ಕಲರ್ ಫುಲ್ ಫೋಟೋ ಗ್ಯಾಲರಿ ಕೇವಲ ನಿಮಗಾಗಿ ನೋಡಿ ಸ್ಲೈಡುಗಳಲ್ಲಿ...

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಐಶ್-ಅಭಿ

ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಐಶ್-ಅಭಿ

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Bollywood's most loved couple Aishwarya Rai Bachchan and Abhishek Bachchan are celebrating their 9th Anniversary today (20th April). And even after 9 years of togetherness, Aishwarya and Abhishek are truly, madly, deeply in love

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada