»   » ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ ಓಡಾಟ

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ ಓಡಾಟ

Posted By:
Subscribe to Filmibeat Kannada

ಮಂಗಳೂರು ಮೂಲದ ರೋಹಿತ್ ಶೆಟ್ಟಿಗೆ ನಿಜಕ್ಕೂ ಲಕ್ ತಿರುಗಿದೆ. ದಕ್ಷಿಣ ಭಾರತದ ಹಿಟ್ ಚಿತ್ರಗಳನ್ನು, ಸಕ್ಸಸ್ ಫಾರ್ಮುಲಾಗಳನ್ನು ಹೆಕ್ಕಿ ತೆಗೆದು ಬಾಲಿವುಡ್ ಮಂದಿಗೆ ಅರ್ಥವಾಗುವಂತೆ ನೀಡುವಲ್ಲಿ ರೋಹಿತ್ ಪಳಗಿದ್ದಾರೆ. ಈಗ ಚೆನ್ನೈ ಎಕ್ಸ್ ಪ್ರೆಸ್ ಎಂಬ ಚಿತ್ರದ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ಶೆಟ್ಟಿ ತನ್ನ ಚಿತ್ರಕ್ಕೆ ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಜನಪ್ರಿಯ ಜೋಡಿಯನ್ನು ಹಾಕಿಕೊಂಡು ಒಳ್ಳೆ ಪ್ರಚಾರ ನೀಡುತ್ತಿದ್ದಾರೆ.

ಮುಂಬೈ ನಿಂದ ರಾಮೇಶ್ವರಂಗೆ ನಾಯಕ ಹೋಗುವ ಜರ್ನಿಯಲ್ಲಿ ನಡೆಯುವ ಸನ್ನಿವೇಶಗಳನ್ನು ರಸವತ್ತಾಗಿ ಚಿತ್ರಕಥೆಯ ಮೂಲಕ ನೀಡಲು ನಿರ್ದೇಶಕ ಶೆಟ್ಟಿ ಮುಂದಾಗಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಒಡೆಯ ಶಾರುಖ್ ಖಾನ್ ಅವರು ಐಪಿಎಲ್ ಬಿಟ್ಟರೆ ಸದ್ಯಕ್ಕೆ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಓಡಾಟ ಮಾಡುತ್ತಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್ ಗಾಗಿ ವಿಶಿಷ್ಟ ಜಾಹೀರಾತುಗಳನ್ನು ಶೆಟ್ಟಿ ರೂಪಿಸುತ್ತಿದ್ದಾರೆ.

ಚಹಾ ಹಾಗೂ ಆಟೋಮೊಬೈಲ್ ಬ್ರ್ಯಾಂಡ್ ಗಳ ಜೊತೆ ಕೈಜೋಡಿಸಲು ಶಾರುಖ್ ಸಲಹೆ ನೀಡಿದ್ದಾರೆ. ಸದ್ಯದಲ್ಲೇ ಲುಂಗಿ ಉಟ್ಟ ಶಾರುಖ್ ಜಾಹೀರಾತುಗಳು ನಿಮ್ಮ ಮುಂದೆ ಬರಲಿದೆ.ಸದ್ಯಕ್ಕೆ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್ ಹಾಗೂ ಬೆಂಗಳೂರು ಬೆಡಗಿ ದೀಪಿಕಾ ಓಡಾಟದ ದೃಶ್ಯಗಳು ನಿಮಗಾಗಿ

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ

ಶೂಟಿಂಗ್ ವೇಳೆ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಪೋಸ್

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ

ವಾಯ್ ನಲ್ಲಿ ಶೂಟಿಂಗ್ ವೇಳೆ ಲುಂಗಿ ಉಟ್ಟ ಕಿಂಗ್ ಖಾನ್ ಶಾರುಖ್

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ

ಚೆನ್ನೈ ಎಕ್ಸ್ ಪ್ರೆಸ್ ಶೂಟಿಂಗ್ ವೇಳೆ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ

ಚೆನ್ನೈ ಎಕ್ಸ್ ಪ್ರೆಸ್ ಚಿತ್ರತಂಡದ ಗ್ರೂಪ್ ಫೋಟೋ

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ

ಚೆನ್ನೈ ಎಕ್ಸ್ ಪ್ರೆಸ್ ಚಿತ್ರತಂಡದ ಜೊತೆ ಚಿನಕುರುಳಿಯಂತೆ ಓಡಾಡುತ್ತಿದ್ದ ಶಾರುಖ್

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ

ಚೆನ್ನೈ ಎಕ್ಸ್ ಪ್ರೆಸ್ ಚಿತ್ರೀಕರಣದಲ್ಲಿ ಹಗಲು ರಾತ್ರಿ ತೊಡಗಿಸಿಕೊಂಡಿರುವ ಕಿಂಗ್ ಖಾನ್ ಶಾರುಖ್

ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಶಾರುಖ್, ದೀಪಿಕಾ

ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಸಾಹಸ ಭರಿತ ದೃಶ್ಯದಲ್ಲಿ ಶಾರುಖ್ ಖಾನ್

English summary
Shahrukh Khan and Deepika Padukone are all set to create magic on screen once again with their upcoming film Chennai Express. Directed by Rohit Shetty, the film is about a man's jouney from Mumbai to Rameshwaram and what happens during the journey. Since it's a Rohit Shetty film one can expect lots of action in it with a romantic twist.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada