For Quick Alerts
ALLOW NOTIFICATIONS  
For Daily Alerts

  ಸಲ್ಲೂ ಬಗ್ಗೆ ನಿಮಗೆ ತಿಳಿದಿರದ 10 ವಿಷ್ಯಗಳು

  By Mahesh
  |

  ಬಾಲಿವುಡ್ ನ ಸುರಸುಂದರಾಂಗ ಬಾಡ್ ಬ್ಯಾಯ್ ಸಲ್ಲೂ ಮಿಯಾಗೆ ಇಂದು 47ನೇ ಹುಟ್ಟುಹಬ್ಬದ ಸಂಭ್ರಮ. ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದ ಕ್ರೇಜ್ ಕಳೆದ ರಾತ್ರಿ 12 ಗಂಟೆಯಿಂದಲೇ ಆರಂಭಗೊಂಡಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ #HappyBirthdaySalmanKhan ಟಾಪ್ ಟ್ರೆಂಡ್ ನಲ್ಲಿ ಇನ್ನೂ ಮುಂದುವರೆದಿದೆ.

  ದಬಾಂಗ್ 2 ಭರ್ಜರಿ ಓಪನಿಂಗ್ ಬೇರೆ ಸಲ್ಲೂ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಸಲ್ಲೂ ಮದ್ವೆ ಬಗ್ಗೆ ಇನ್ನೂ ಕೂಡಾ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

  ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್ - ಇದು ಸಲ್ಲೂ ಮಿಯಾ ಪೂರ್ತಿ ಹೆಸರು. ಡಿ.27, 1965 ರಲ್ಲಿ ಜನನ. ಚಿತ್ರಕಥೆಗಾರ ಸಲೀಂ ಖಾನ್ ಹಾಗೂ ಅವರ ಮೊದಲ ಪತ್ನಿ ಸಲ್ಮಾ ಖಾನ್ ಅವರ ಮೊದಲ ಪುತ್ರನಾಗಿ ಸಲ್ಮಾನ್ ಖಾನ್ ಹುಟ್ಟಿದರು.

  ಸಲ್ಮಾನ್ ಖಾನ್ ಈ ವರ್ಷ ಕೂಡಾ ಯಶಸ್ವಿ ವರ್ಷ ಹೊಂದಿದ್ದಾರೆ. ಕಳೆದ ವರ್ಷ ಭರ್ಜರಿ ಹಿಟ್ ಗಳನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ತಮ್ಮ ಅರ್ಬಾಜ್ ಖಾನ್ ಕೂಡಾ ನಿರ್ದೇಶಕನಾಗಿ ಬೆಳೆಯುತ್ತಿರುವುದು ಸಲ್ಮಾನ್ ಖಾನ್ ಕುಟುಂಬದ ಖುಷಿ ಹೆಚ್ಚಿಸಿದೆ. ಸಲ್ಲೂ ಮಿಯಾ ಬಗ್ಗೆ ಕೆಲವು ಕುತೂಹಲಕಾರಿ ವಿಷ್ಯಗಳು ಇಲ್ಲಿದೆ ಓದ್ಕೊಳ್ಳಿ

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ಶಾಲಾ ದಿನಗಳಲ್ಲಿ ಸಲ್ಲೂ ಅದ್ಭುತ ಈಜುಪಟು ಆಗಿದ್ದರು. ನಂತರ ಕೂಡಾ ಅವರ ಅಂಗ ಸೌಷ್ಟವ ಬೆಳೆಸಲು ಈಜು ಸಹಕಾರಿಯಾಗಿದೆ.

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  1988ರಲ್ಲಿ ಬಿವಿ ಹೋ ತೋ ಐಸಾ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರೂ 1989 ರ ಸೂಪರ್ ಹಿಟ್ ಚಿತ್ರ ಮೈನೇ ಪ್ಯಾರ್ ಕಿಯಾ ಅವರ ಪ್ರಥಮ ಚಿತ್ರ ಎನ್ನಬಹುದು.

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ಕಷ್ಟದ ದಿನಗಳಲ್ಲೂ ಸಲ್ಮಾನ್ ಖಾನ್ ತಮ್ಮ ತಂದೆ ಸಲೀಂ ಖಾನ್ ಅವರ ಹೆಸರು ಬಳಸಿಕೊಂಡು ಮೇಲಕ್ಕೇರಲು ಯತ್ನಿಸಲಿಲ್ಲ. ನಿರ್ಮಾಪಕರ ಮುಂದೆ ಕೈಯೊಡ್ಡುತ್ತಾ ಆಡೀಷನ್ ಗಳಲ್ಲಿ ಪಾಲ್ಗೊಂಡಿದ್ದು ವಿಶೇಷ.

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ದಾನ ಧರ್ಮ ಸಲ್ಮಾನ್ ಖಾನ್ ರಕ್ತಗತವಾಗಿ ಬಂದಿದೆ. ಆಗಾಗ್ಗೆ ರಕ್ತದಾನ ಮಾಡುವ ಸಲ್ಲೂ, ಆಸ್ಪತ್ರೆಗಳಿಗೆ ತೆರಳಿ ತೀವ್ರವಾಗಿ ಕಾಯಿಲೆಗೊಳಗಾಗಿರುವ ಮಕ್ಕಳಿಗೆ ಆರೈಕೆ ಮಾಡುತ್ತಾರೆ. ಕ್ಯಾನ್ಸರ್, ಏಡ್ಸ್ ಪೀಡಿತ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ.

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ಮೈ ಕಟ್ಟಿನ ಬಗ್ಗೆ ಮೊದಮೊದಲು ಅಸಡ್ಡೆ ಹೊಂದಿದ್ದ ಸುರಸುಂದರಾಂಗ ಸಲ್ಲೂ ವಿಶ್ವದ 7ನೇ ಸುಂದರ ಎನಿಸಿದ ಮೇಲೆ ಸೀರಿಯಸ್ ಆಗಿ ಜಿಮ್ ಗೆ ತೆರಳಲು ಆರಂಭಿಸಿದರು. ದೈನಂದಿನ ದೈಹಿಕ ಕಸರತ್ತು ಇಲ್ಲದೆ ಸಲ್ಲೂ ಬೇರೆ ಕೆಲಸ ಮಾಡುವುದಿಲ್ಲ. ಹೆಲ್ತ್ ಇಸ್ ವೆಲ್ತ್ ಸಲ್ಲೂ ಫಿಟ್ನೆಸ್ ಮಂತ್ರ

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ಸಲ್ಮಾನ್ ಗೆ ಬಿಎಂಡಬ್ಲ್ಯೂ, ಮರ್ಸಿಡೀಸ್ ಬೆಂಜ್, ಲ್ಯಾಂಡ್ ಕ್ರೂಸರ್ ವಾಹನಗಳೆಂದರೆ ತುಂಬಾ ಇಷ್ಟ

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ಸಲ್ಮಾನ್ ಖಾನ್ ಅವರು ಅನಿಲ್ ಕಪೂರ್, ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ ಗೆ ನಟನೆ, ನೃತ್ಯ ತರಬೇತಿ ನೀಡಿದ್ದಾರೆ ಗೊತ್ತಾ? ಅದೇ ರೀತಿ ಹಿರಿಯ ನಟರಿಂದ ಸಾಕಷ್ಟು ನಟನೆ ಕಲಿತ್ತಿದ್ದೇನೆ ಎಂದು ಸಲ್ಲೂ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  2004 ರಲ್ಲಿ ಜನಪ್ರಿಯ ಪೀಪಲ್ ಮ್ಯಾಗಜೀನ್ ನಲ್ಲಿ ಸಲ್ಮಾನ್ ಖಾನ್ ರನ್ನು ವಿಶ್ವದ 7ನೇ ಸುರಸುಂದರಾಂಗ ಎಂದು ಆಯ್ಕೆ ಮಾಡಿತ್ತು.

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ಸಲ್ಮಾನ್ ಗೆ ಪ್ರವಾಸ ಇಷ್ಟವಾದರೂ ಲಂಡನ್ ಗೆ ಹೋಗುವುದು ಸಲ್ಲೂಗೆ ತುಂಬಾ ಇಷ್ಟ.

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ

  ಸಲ್ಮಾನ್ ಖಾನ್ ಗೆ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ಇಷ್ಟವಾದ ನಟ ಹಾಗೂ ಬಾಲಿವುಡ್ ನ ಕನಸಿನ ಕನ್ಯೆ ಹೇಮಮಾಲಿನಿ ಇಷ್ಟವಾದ ನಟಿ

  English summary
  Salman Khan is celebrating his 47th birthday today. And he has such a fan following that right after 12 in the night, #HappyBirthdaySalmanKhan began trending on Twitter. The actor who is basking in the success of Dabangg 2 is still one of the most good looking bachelors.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more