»   » ಕಿರಿಕಿರಿ ಮಾಡಿದ್ದ ಹಾಟ್, ಬೋಲ್ಡ್ ಪೋಸ್ಟರ್ಸ್

ಕಿರಿಕಿರಿ ಮಾಡಿದ್ದ ಹಾಟ್, ಬೋಲ್ಡ್ ಪೋಸ್ಟರ್ಸ್

Posted By:
Subscribe to Filmibeat Kannada

ತನುಜಾ ಕಾಲದಲ್ಲಿ ಆರಂಭವಾದ ಬಾಲಿವುಡ್ ಫ್ಯಾಶನ್ ಟ್ರೆಂಡ್ ಕೊನೆಗೆ ಕಾಜೋಲ್ ಕುಚ್ ಕುಚ್ ಹೋತಾ ಹೇ ಸ್ಯಾರಿ ಟ್ರೆಂಡ್ ಆಗಿ ಬೆಳೆದರೂ ಈಗ ಹಿಂದಿ ಚಿತ್ರರಂಗ ಟ್ರೆಂಡ್ ಲೆಸ್ ಆಗಿರುವುದಂತೂ ಸತ್ಯ. ತೀರಾ ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಬೆತ್ತಲೆ ಬೆನ್ನ ದಬ್ಬಾಂಗ್ ಡ್ರೆಸ್ ಕೊಂಚ ಸದ್ದು ಮಾಡಿತ್ತು. ಡ್ರೆಸ್ ಟ್ರೆಂಡ್ ಕೊಂದ ನಗ್ನತೆಯೇ ನಮ್ಮ ಹಕ್ಕು ಎಂಬಂತೆ ಕುಣಿಯುವ ನಟಿಮಣಿಯರ ಪೋಸ್ ಕಥೆಯೇ ಈ ಲೇಖನಕ್ಕೆ ವಿಷಯ ಒದಗಿಸಿದೆ.

ಈಗಿನ ಹೀರೋಯಿನ್ ಗಳು ಸೀರೆ ಉಡುವುದಿರಲಿ, ಇಂಚು ಲೆಕ್ಕದಲ್ಲಿ ಬಟ್ಟೆ ಕಳಚುವುದರಲ್ಲಿ ನಿಸ್ಸೀಮರು. ಇದು ಚಿತ್ರದಲ್ಲಿ ಮಾತ್ರವಲ್ಲದೆ, ಪೋಸ್ಟರ್ ಹೊರಬೀಳುತ್ತಿದ್ದಂತೆ ಕಿಡಿ ಹೊತ್ತಿಸಿಬಿಡುತ್ತದೆ. ಟ್ರೇಲರ್ ಬರುವಷ್ಟರಲ್ಲಿ ಅಭಿಮಾನಿಗಳಿಂದ ಪ್ರಶಂಸೆಯ ವರ್ಷಧಾರೆಯಾಗುತ್ತದೆ. ಕಾಮಸೂತ್ರ 3ಡಿ ಟ್ರೇಲರ್ ಒಂದೇ ಸಾಕು ಶರ್ಲೀನ್ ಛೋಪ್ರಾ ಯಾರು ಎಂದು ಹೇಳಲು. ಅದೇ ರೀತಿ ಪೋಸ್ಟರ್ ಗಳೇ ಚಿತ್ರದ ಪ್ರಚಾರದ ಜೀವಾಳ

ಬಾಲಿವುಡ್ ನಲ್ಲಿ ವಿವಾದ ಹುಟ್ಟಿಸಿದ ಸಿನಿಮಾಗಳು ಹಲವಿದ್ದರೂ ಚಿತ್ರಕ್ಕಿಂತ ಚಿತ್ರದ ಪ್ರಚಾರ ಕಲೆಗೆ ಬಳಸುವ ಪೋಸ್ಟರ್ ಕಿಡಿ ಹತ್ತಿಸಿದ್ದು ಇದೆ. ನೇಹಾ ಧೂಪಿಯಾ ಅವರ ಜೂಲಿ ಚಿತ್ರದ ಪೋಸ್ಟರ್ ಗಳನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹರಿದು ಕಿತ್ತಾಕಿದ್ದು ಇನ್ನೂ ಮರೆತಿಲ್ಲ. ನೇಹಾ ತನ್ನ ಬೆನ್ನಿನ ಮೇಲೆ ಒಂದರ್ಧ ಇಂಚು ಬಟ್ಟೆ ಕೂಡಾ ತೊಟ್ಟಿರಲಿಲ್ಲ. ಹಾಟ್ ಚಿತ್ರದ ಪೋಸ್ಟರ್ ಕಂಡಿದ್ದು 2004ರಲ್ಲಿ ಆದರೆ, ನೇಹಾ ಸಮರ್ಥನೆ ಮಾಡಿಕೊಂಡಿದ್ದರು.

ಹೀಗೆ ಹುಡುಕುತ್ತಾ ಹೋದರೆ ಅನೇಕ ಚಿತ್ರಗಳು ಹಾಟ್ ಅಂಡ್ ಸೆಕ್ಸಿ ಪೋಸ್ಟರ್ ನಿಂದಲೇ ಸದ್ದು ಮಾಡಿದ್ದವು ಎಂಬುದು ತಿಳಿದು ಬರುತ್ತದೆ. ಅಯ್ದ ಕೆಲವು ಪೋಸ್ಟರ್ ಗಳು ಇಲ್ಲಿವೆ ಸರಣಿ ಚಿತ್ರಗಳನ್ನು ಮೌಸ್ ನಿಂದ ಸವರುತ್ತಾ ಮುಂದೆ ಓದಿ....ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಜೂಲಿ

ಜೂಲಿ ಚಿತ್ರದಲ್ಲಿ ನಟಿ ನೇಹಾ ಧೂಪಿಯಾ ಬೆತ್ತಲೆ ಬೆನ್ನು

ಪಾಪ್ ಚಿತ್ರದ ಪೋಸ್ಟರ್

ನಂ.1 ಕಾಮ ಪುರುಷ ಜಾನ್ ಅಬ್ರಹಾಂ ಹಾಗೂ ಉದಿತಾ ಗೋಸ್ವಾಮಿ ಪಾಪ್ ಚಿತ್ರದ ಪೋಸ್ಟರ್ ನಲ್ಲಿ

ಡರ್ಟಿ ಪಿಕ್ಚರ್

ಇತ್ತೀಚೆಗೆ ಭಾರಿ ಸದ್ದು ಮಾಡಿದ ಸಿಲ್ಕ್ ಸ್ಮಿತಾ ಜೀವನ ಆಧರಿಸಿದ ಚಿತ್ರ ಡರ್ಟಿ ಪಿಕ್ಚರ್ ನಲ್ಲಿ ವಿದ್ಯಾಬಾಲನ್ ಮೇಲೆ ಬಿದ್ದಿರುವ ನಾಸೀರುದ್ದೀನ್ ಶಾ, ತುಷಾರ್ ಕಪೂರ್, ಹಿಂಬದಿಯಲ್ಲಿ ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ

ಎಕ್ ಛೋಟಿ ಸಿ ಲವ್ ಸ್ಟೋರಿ

ಮನೀಷಾ ಕೊಯಿರಾಲಾ ಅವರ ಎಕ್ ಛೋಟಿ ಸಿ ಲವ್ ಸ್ಟೋರಿ ಚಿತ್ರ ಹಾಗೂ ಚಿತ್ರದ ಪೋಸ್ಟರ್ ಗಾಗಿ ವಿವಾದಕ್ಕೆ ಈಡಾಗಿತ್ತು.

ಬ್ಲಡ್ ಮನಿ

ಕುನಾಲ್ ಖೆಮು ಅಭಿನಯದ ಬ್ಲಡ್ ಮನಿ ಚಿತ್ರದ ಪೋಸ್ಟರ್

ಡೋನ್ನೊ ವೈ ನಾ ಜಾನೆ ಕ್ಯೂ ಚಿತ್ರ

ಭಾರತೀಯ ಚಿತ್ರರಂಗದಲ್ಲಿ ಈಗ ಗೇ, ಲೆಸ್ಬಿಯನ್ ಸೆಕ್ಸ್ ಚಿತ್ರಗಳು ಹೊಸ ದೇನಲ್ಲ. ಆದರೆ, ಹಾದಿ ಬೀದಿಯಲ್ಲಿ ಈ ರೀತಿ ಚಿತ್ರಗಳ ಪೋಸ್ಟರ್ ಗಳಿಗೆ ಮಾತ್ರ ಉಳಿಗಾಲವಿಲ್ಲ. ಯುವರಾಜ್ ಪರಾಶರ್ ಹಾಗೂ ಕಪಿಲ್ ಶರ್ಮ್ ನಗ್ನರಾಗಿ ಕಿಸ್ಸಿಂಗ್ ಮಾಡಿದ್ದ ಪೋಸ್ಟರ್ ಚಿಂದಿ ಚಿಂದಿಯಾಗಿತ್ತು.

ಜಿಸ್ಮಂ 2

ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಗೆ ಬಾಲಿವುಡ್ ನಲ್ಲಿ ಭರ್ಜರಿ ಎಂಟ್ರಿ ಕೊಡಿಸಲು ಸೃಷ್ಟಿಸಿದ ಜಿಸ್ಮಂ 2 ಚಿತ್ರ ಪೋಸ್ಟರ್

ಗರ್ಲ್ ಫ್ರೆಂಡ್

ಲೆಸ್ಬಿಯನ್ ಲವ್ ಕುರಿತ ಗರ್ಲ್ ಫ್ರೆಂಡ್ ಚಿತ್ರದಲ್ಲಿ ಇಶಾ ಕೊಪ್ಪಿಕ್ಕರ್ ಹಾಗೂ ಅಮೃತಾ ಅರೋರಾ ಹಾಟ್ ಪೋಸ್

ಹೇಟ್ ಸ್ಟೋರಿ

ಹೇಟ್ ಸ್ಟೊರಿ ಚಿತ್ರದ ಹಾಟ್ ಪೋಸ್ಟರ್

ಕುರ್ಬಾನ್ ಚಿತ್ರ

ಕುರ್ಬಾನ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್

ಪೂನಂ ಪಾಂಡೆ ನಶಾ

ಚಿತ್ರವಿಲ್ಲದೆ ಟ್ವಿಟ್ಟರ್ ನಲ್ಲೇ ಬಟ್ಟೆ ಕಳಚಿ ಪೋಸ್ ನೀಡುತ್ತಿದ್ದ ಪೂನಂ ಪಾಂಡೆಗೂ ನಶಾ ಎಂಬ ಚಿತ್ರ ಸಿಕ್ಕಿದ್ದು, ವಿವಿಧ ಭಂಗಿಯಲ್ಲಿ ಕಾಣಿಸಿಕೊಂಡ ಪೋಸ್ಟರ್ ಇಲ್ಲಿದೆ

ಸಿನ್ಸ್

ಶೈನಿ ಅಹುಜಾ ಸಿನ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಹೀಗೆ

ರೋಗ್

ಇಲೀನಾ ಹಮಾನ್ ರೋಗ್ ಚಿತ್ರದಲ್ಲಿ

ಮರ್ಡರ್ 2

ಮರ್ಡರ್ -2 ಚಿತ್ರದಲ್ಲಿ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡೀಸ್, ಇಮ್ರಾನ್ ಹಶ್ಮಿ

English summary
Gone are the days when Bollywood actress were only seen in sarees on-screen as well as off-screen. Heroines today are not afraid of shedding their clothes if the script demands it...or even for publicity. Take a look at the boldest and most controversial Bollywood posters featuring Kareena Kapoor, Saif Ali Khan, John Abraham, Vidya Balan and many others.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada