For Quick Alerts
  ALLOW NOTIFICATIONS  
  For Daily Alerts

  ಬಿಕಿನಿಯಲ್ಲಿ ಕತ್ರೀನಾ ಅದು ರಣಬೀರ್ ಜೊತೆ !

  By ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ನ ಬಹುಚರ್ಚಿತ ಪ್ರಣಯ ಪಕ್ಷಿಗಳು ರೆಕ್ಕೆಬಿಚ್ಚಿ ದೂರದ ಸ್ಪೇನ್ ನಲ್ಲಿ ಸ್ವಚ್ಛಂದವಾಗಿ ಹಾರಾಡಿವೆ. ನಮ್ಮ ನಡುವೆ ಏನಿಲ್ಲ ಏನಿಲ್ಲ ಎನ್ನುತ್ತಿದ್ದ ಈ ಜೋಡಿ ಬೀಚ್ ಉಡುಗೆ ತೊಟ್ಟು ವಿಹರಿಸಿ ಬಂದಿದೆ.

  ಕತ್ರೀನಾ ಕೈಫ್ ಬಿಕಿನಿ ತೊಟ್ಟು ರಣಬೀರ್ ಜೊತೆ ಇರುವ ಚಿತ್ರವನ್ನು ಸ್ಟಾರ್ ಡಸ್ಟ್ ಮ್ಯಾಗಜೀನ್ ಪ್ರಕಟಿಸಿದೆ. ಈ ಬಗ್ಗೆ ಈ ಜೋಡಿ ಏನೂ ಬಾಯ್ಬಿಟ್ಟಿಲ್ಲ. ಅಸಲಿಗೆ ಇಬಿಜಾಗೆ ವಿಹಾರಕ್ಕೆ ಹೋಗೇ ಇಲ್ಲ ಎಂದು ವಾದಿಸಿದ್ದರು.

  ನಮ್ಮಿಬ್ಬರಿಗೆ ಕೈಲಿರುವ ಫಿಲಂ ಮುಗಿಸುವುದು ಮುಖ್ಯವಾಗಿದೆ. ಈ ನಡುವೆ ಸುತ್ತಾಡಲು ಪುರುಸೊತ್ತೇ ಇಲ್ಲ. ಇಬ್ಬರು ಒಳ್ಳೆ ಗೆಳೆಯರು ಅಷ್ಟೇ ಎಂದು ಕೈಫ್ ಹೇಳಿಕೊಂಡಿದ್ದರು.

  ಆದರೆ, ಇತ್ತೀಚಿನ ಕೈಫ್ ಬರ್ಥಡೇ ದಿನ ಆಕೆ ಕಿವಿಗಳಲ್ಲಿ ವಜ್ರದ ಓಲೆ ಮಿನುಗುತ್ತಿತ್ತು. ಇದು ರಣಬೀರ್ ವಿಶೇಷವಾಗಿ ನೀಡಿದ ಕೊಡುಗೆ ಎಂದೇ ಎಲ್ಲೆಡೆ ಪುಕಾರು ಹಬ್ಬಿದೆ. ಅಂದ ಹಾಗೆ ಕತ್ರೀನಾ ತುಂಬಾ ಬ್ಯುಸಿ ಇರುವುದೇನೋ ನಿಜ. ಆದರೆ, ಹೃತಿಕ್ ರೋಷನ್ ಗೆ ಮೆದುಳಿನ ಸರ್ಜರಿ ನಡೆದ ಕಾರಣ ಬಾಂಗ್ ಬಾಂಗ್ ಚಿತ್ರ ಶೂಟಿಂಗ್ ನಿಂತಿತ್ತು. ಈ ಗ್ಯಾಪ್ ನಲ್ಲಿ ಈ ಜೋಡಿ ಇಬಿಜಾದ ಡೇವಿಡ್ ಗ್ವೆಟ್ಟಾಗೆ ಹಾರಿದೆ ಎನ್ನುತ್ತಿದೆ ಮೂಲಗಳು. ಇತ್ತೀಚಿಗೆ ಈ ಜೋಡಿ ಜೊತೆಗಿದ್ದ ಚಿತ್ರಗಳು ಸಂಗ್ರಹಿಸಿ ನೀಡಲಾಗಿದೆ ನೋಡಿ ಆನಂದಿಸಿ...

  ಬೀಚಿನಲ್ಲಿ ಕಂಡಿದ್ದು ಹೀಗೆ

  ಬೀಚಿನಲ್ಲಿ ಕಂಡಿದ್ದು ಹೀಗೆ

  ಎಲ್ಲರಿಗೂ ತಿಳಿದಿರುವಂತೆ ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ನಡುವೆ ಪ್ರೇಮಾಂಕುರವಾಗಿದ್ದು ಅಜಬ್ ಪ್ರೇಮ್ ಕಿ ಘಜಬ್ ಕಹಾನಿ ಚಿತ್ರದಲ್ಲಿ ನಂತರ ಪ್ರಕಾಶ್ ಜಾ ಅವರ ರಾಜ್ ನೀತಿಯಲ್ಲಿ ಇದು ಇನ್ನಷ್ಟು ಬೆಳೆಯಿತು.

  ನಾನು ನೀನು ಜೋಡಿ

  ನಾನು ನೀನು ಜೋಡಿ

  ಸ್ಪೇನಿನ ಕಡಲ ತೀರದಲ್ಲಿ ಸುತ್ತ ಮುತ್ತಾ ಯಾರೂ ಇಲ್ಲ ಎನ್ನುತ್ತಿದ್ದಾನೆ ರಣಬೀರ್

  ಪ್ರವಾಸ ಪ್ರಿಯೆ ಕೈಫ್

  ಪ್ರವಾಸ ಪ್ರಿಯೆ ಕೈಫ್

  ಮಾಮೂಲಿ ಪ್ರವಾಸಿಗರಂತೆ ರಣಬೀರ್ ಹಾಗೂ ಕತ್ರೀನಾ ಎಲ್ಲೆಡೆ ಸ್ವಚ್ಛಂದವಾಗಿ ವಿಹರಿಸಿದ್ದಾರೆ

  ಸಹ ಭೋಜನ

  ಸಹ ಭೋಜನ

  ಆಪ್ತ ಸ್ನೇಹಿತರೊಡನೆ ಕಲೆತು ಬೆರೆತು ನಲಿದಾಡಿದ್ದಾರೆ. ಈ ವಿಷ್ಯ ಟ್ವಿಟ್ಟರ್ ಗಳಲ್ಲಿ ಮೊದಲಿಗೆ ಸೋರಿಕೆಯಾಗಿತ್ತು.

  ಆಹಾ ಎಂಥಾ ಅಪ್ತತೆ

  ಆಹಾ ಎಂಥಾ ಅಪ್ತತೆ

  ಪ್ರವಾಸಿಗರಂತೆ ರಣಬೀರ್ ಹಾಗೂ ಕತ್ರೀನಾ ಎಲ್ಲೆಡೆ ಸುತ್ತಾಟ ನಡೆಸಿ ಆನಂದದಿಂದ ಇದ್ದರು ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

  ರಣಬೀರ್ ಅಭಿಮಾನಿಗಳಿಂದ

  ರಣಬೀರ್ ಅಭಿಮಾನಿಗಳಿಂದ

  ರಣಬೀರ್ ಕಪೂರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಂಡು ಸಂತೋಷದಿಂದ ಸಿಕ್ಕಿ ಫೋಟೊವನ್ನು ವೆಬ್ ನಲ್ಲಿ ತೇಲಿಬಿಟ್ಟಿದ್ದಾರೆ.ಇನ್ನಷ್ಟು ನಿರೀಕ್ಷಿಸಿ..

  ಬಾಲಿವುಡ್ ಜೋಡಿ ನಂ.1

  ಬಾಲಿವುಡ್ ಜೋಡಿ ನಂ.1

  ಈ ನಡುವೆ ದೀಪಿಕಾ ಜೊತೆ ರಣಬೀರ್ ಸುತ್ತಾಟ, ಮದುವೆ ತನಕ ಮಾತುಕತೆ ಎಂಬ ಸುದ್ದಿ ನಡೆದು ಕೈಫ್ ದೂರಾಗಿದ್ದಳು ಈಗ ಮತ್ತೆ ಜೋಡಿ ಜೀವ ನಲಿದಾಡುತ್ತಿದೆ.

  ಬಾಲಿವುಡ್ ಜೋಡಿ ನಂ.1

  ಬಾಲಿವುಡ್ ಜೋಡಿ ನಂ.1

  ಈ ಹಿಂದೆ ಖಾಸಗಿ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ

  ಬಾಲಿವುಡ್ ಜೋಡಿ 1

  ಬಾಲಿವುಡ್ ಜೋಡಿ 1

  ಚಿತ್ರ ಪ್ರಚಾರಕ್ಕಾಗಿ ವಿವಿಧೆಡೆ ಒಟ್ಟಿಗೆ ಸಾಗುತ್ತಿದ್ದ ಜೋಡಿ ಎಲ್ಲರ ಗಮನ ಸೆಳೆದಿತ್ತು.

  ದೀಪಿಕಾ ಹಾಗೂ ಕೈಫ್ ?

  ದೀಪಿಕಾ ಹಾಗೂ ಕೈಫ್ ?

  ಇಬ್ಬರು ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್ ನೀಡುವ ಪರಿಪಾಠ ಮುಂದುವರೆಸಿಕೊಂಡು ಬಂದಿದ್ದಾರೆ. ರಣಬೀರ್ ಮನೆಯಲ್ಲಿ ದೀಪಿಕಾ ಹಾಗೂ ಕೈಫ್ ನಡುವೆ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲವಿದೆಯಂತೆ

  RK ಎಂಬ ಹಚ್ಚೆ

  RK ಎಂಬ ಹಚ್ಚೆ

  RK ಎಂಬ ಹಚ್ಚೆ ದೀಪಿಕಾ ಹಾಕಿಸಿಕೊಂಡು ಗುಲ್ಲೆಬ್ಬಿಸಿದ ಮೇಲೆ ಕತ್ರೀನಾ ಮೈಮೇಲೂ ರಣಬೀರ್ ಹೆಸರು ಕೆತ್ತಲಾಗಿದೆ ಎನ್ನಲಾಗಿತ್ತು. ಅದರೆ, ಹೃದಯದಲ್ಲಿ ಅವನ ಹೆಸರಿಗೆ ಹಚ್ಚೆ ಏಕೆ ಎಂದು ಕೈಫ್ ಆಪ್ತರಲ್ಲಿ ಹೇಳಿಕೊಂಡಿದ್ದಳಂತೆ

  ಬಾಲಿವುಡ್ ಜೋಡಿ ನಂ.1

  ಬಾಲಿವುಡ್ ಜೋಡಿ ನಂ.1

  ಮುಂಬೈನಲ್ಲಿ ಖಾಸಗಿ ಸಮಾರಂಭಕ್ಕೆ ಆಗಮಿಸಿದ್ದಾಗ ಸಿಕ್ಕ ಚಿತ್ರ

  ಖಾಸಗಿ ಭೇಟಿ

  ಖಾಸಗಿ ಭೇಟಿ

  ಗುಟ್ಟು ಗುಟ್ಟಾಗಿ ಎಲ್ಲೆಂದರಲ್ಲಿ ಈ ಜೋಡಿ ಸುತ್ತಿದ್ದನ್ನು ಮಾಧ್ಯಮದವರ ಜೊತೆಗೆ ಅಭಿಮಾನಿಗಳು ಸೆರೆ ಹಿಡಿದು ಪ್ರಸಾರ ಮಾಡಿದ್ದಾರೆ.

  ಮಿರ್ಚಿ ಜೋಡಿ

  ಮಿರ್ಚಿ ಜೋಡಿ

  ರಣಬೀರ್ ಜೊತೆ ಕತ್ರೀನಾ ಎಫ್ ಎಂ ವಾಹಿನಿ ರೇಡಿಯೋ ಮಿರ್ಚಿಯ ಕಾರ್ಯಕ್ರಮವೊಂದರಲ್ಲಿ

  ಕೆಮಿಸ್ಟ್ರಿ ಸೂಪರ್

  ಕೆಮಿಸ್ಟ್ರಿ ಸೂಪರ್

  ಅಜಬ್ ಪ್ರೇಮ್ ಕಿ ಘಜಬ್ ಕಹಾನಿ ಚಿತ್ರ ಹಿಟ್ ಆದ ಮೇಲೆ ಮಾಧ್ಯಮಗಳಲ್ಲೂ ಈ ಜೋಡಿ ಕೆಮಿಸ್ಟ್ರಿ ಸೂಪರ್ ಎಂದು ಹೊಗಳಿಕೆ ಸಿಕ್ಕಿತ್ತು. ಈಗ ಯೇ ಜವಾನಿ ಹೇ ದಿವಾನಿ ಚಿತ್ರದಲ್ಲಿ ದೀಪಿಕಾ ಜೋಡಿ ರಣಬೀರ್ ಸೂಪರ್ ಎಂದು ಪ್ರಶಂಸಿಸಲಾಗಿದೆ. ಅಭಿಮಾನಿಗಳಿಗೂ ಇಬ್ಬರಲ್ಲಿ ಯಾವ ನಾಯಕಿ ಬೆಸ್ಟ್ ಎಂಬ ಗೊಂದಲವಿದೆ.

  ಖಾಸಗಿ ಸಮಾರಂಭದಲ್ಲಿ

  ಖಾಸಗಿ ಸಮಾರಂಭದಲ್ಲಿ

  ಹಲವಾರು ಖಾಸಗಿ ಸಮಾರಂಭಗಳಲ್ಲಿ ಇಬ್ಬರ ಜೋಡಿ ನೋಡಿ ಪ್ರೇಮಾಂಕುರವಾಗಿದೆಯೇ? ಎಂದು ಹಲವು ಬಾರಿ ಪ್ರಶ್ನಿಸಿದರೂ ತಾಳ್ಮೆಯಿಂದಲೇ ಇಲ್ಲ ಇಲ್ಲ ಎಂದು ಇಬ್ಬರು ಉತ್ತರಿಸಿದ್ದುಂಟು

  ಸಿನ್ಮಾ ನೋಡಲು ಹೋದಾಗ

  ಸಿನ್ಮಾ ನೋಡಲು ಹೋದಾಗ

  ಶಿಪ್ ಆಫ್ ಥೆಸ್ಯೂಸ್ ಸಿನಿಮಾ ವಿಶೇಷ ಪ್ರದರ್ಶನಕ್ಕೆ ಬಂದ ರಣಬೀರ್ ಕಪೂರ್

  ಸಿನ್ಮಾ ನೋಡಲು

  ಸಿನ್ಮಾ ನೋಡಲು

  ರಣಬೀರ್ ಜೊತೆ ಕತ್ರೀನಾ ಕೂಡಾ ಶಿಪ್ ಆಫ್ ಥೆಸ್ಯೂಸ್ ಸಿನಿಮಾ ವಿಶೇಷ ಪ್ರದರ್ಶನಕ್ಕೆ ಬಂದಿದ್ದರು.

  English summary
  Shocked! So are we. Katrina Kaif was recently spotted in a bikini with rumoured beau Ranbir Kapoor. The couple was holidaying in Ibiza, Spain, when these pictures were clicked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X