ಚಿತ್ರಗಳು: ಉದ್ಯಮಿ ಜೊತೆ ಸಪ್ತಪದಿ ತುಳಿದ ನಟಿ ಅಸಿನ್

By ಸೋನು ಗೌಡ

ಬಾಲಿವುಡ್ ನಟ ಅಮೀರ್ ಖಾನ್ ಅವರ ಜೊತೆ 2008ರಲ್ಲಿ ತೆರೆಕಂಡ 'ಘಜನಿ' ಚಿತ್ರದ ಮೂಲಕ ಬಾಲಿವುಡ್ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಮಲ್ಲು ಕುಟ್ಟಿ ನಟಿ ಅಸಿನ್ ತೊಟ್ಟುಮಾಕಳ್ ಅವರು ಉದ್ಯಮಿ ರಾಹುಲ್ ಅವರ ಜೊತೆ ನಿನ್ನೆ (ಜನವರಿ 19) ಸಪ್ತಪದಿ ತುಳಿದಿದ್ದಾರೆ.

ಮೈಕ್ರೋಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಮತ್ತು ಮಲಯಾಳಿ ಬೆಡಗಿ ನಟಿ ಅಸಿನ್ ಅವರು ಎರಡು ರೀತಿಯಲ್ಲಿ ಮದುವೆಯಾಗಿದ್ದಾರೆ. ಬೆಳಗ್ಗೆ ವಧು ಅಸಿನ್ ಅವರ ಸಂಪ್ರದಾಯದಂತೆ ಚರ್ಚ್ ನಲ್ಲಿ ಮದುವೆಯಾದರೆ, ಸಂಜೆಯ ವೇಳೆ ವರ ರಾಹುಲ್ ಶರ್ಮಾ ಅವರ ಹಿಂದು ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಈ ಎರಡು ತರದ ಮದುವೆಗಳು ನವ ದೆಹಲಿಯ NH8 ಮಾರ್ಗದಲ್ಲಿರುವ ದಸಿತ್ ದೇವರಾನ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿದೆ.[ಆಸಿನ್ ಮದುವೆ ಡೇಟ್ ಫಿಕ್ಸ್ ಆಯ್ತು]

ಅಂದಹಾಗೆ ಈ ಜೋಡಿಗಳು ಇದೀಗ ಮದುವೆ ಮೂಲಕ ಒಂದಾಗಲು ಮುಖ್ಯ ಕಾರಣ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಂತೆ.

ರಾಹುಲ್ ಶರ್ಮಾ ಮತ್ತು ತನ್ನ ಭೇಟಿಯ ಬಗ್ಗೆ ನಟಿ ಅಸಿನ್ ಅವರು ಖ್ಯಾತ ಇಂಗ್ಲೀಷ್ ದಿನಪತ್ರಿಕೆಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ 'ನಟ ಅಕ್ಷಯ್ ಅವರು ಅಸಿನ್ ಅವರನ್ನು ರಾಹುಲ್ ಶರ್ಮಾ ಅವರಿಗೆ ಪರಿಚಯ ಮಾಡಿದ ನಂತರ 2-3 ಬಾರಿ ಫೋನ್ ಮೂಲಕ ಸಂಭಾಷಣೆ ನಡೆದಿತ್ತು. ಆ ಸಂದರ್ಭದಲ್ಲಿ ರಾಹುಲ್ ತಾನು ಮದುವೆಯಾಗುವುದಾಗಿಯೂ ಮತ್ತು ಅದಕ್ಕಾಗಿ ಹುಡುಗಿಯ ತಲಾಷ್ ನಲ್ಲಿದ್ದೇನೆ ಎಂದಿದ್ದರು.[ದಕ್ಷಿಣದ ಸಿನಿಮಾಗಳ ಮೇಲೆ ಅಸಿನ್ ಗೇಕೆ ಮುನಿಸು?]

ತದನಂತರ ಅವರು ಒಂದು ಬಾರಿ ನೇರವಾಗಿ ನನ್ನನ್ನೇ ಕೇಳಿದಾಗ ನಾನು ನನ್ನ ಮನೆಯವರನ್ನು ಭೇಟಿಯಾಗಲು ಹೇಳಿದೆ ಅವರು ಒಪ್ಪಿಕೊಂಡು ಮನೆಯವರನ್ನು ಭೇಟಿಯಾದರು' ಎಂದು ಅಸಿನ್ ಮೊದಲ ಭೇಟಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಅಸಿನ್ ಅವರ ಮದುವೆ ಆಲ್ಬಂ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

ಹಿಂದು ಸಂಪ್ರದಾಯ ಮದುವೆ ಫೋಟೋ

ಹಿಂದು ಸಂಪ್ರದಾಯ ಮದುವೆ ಫೋಟೋ

ಬಾಲಿವುಡ್ ನ ಖ್ಯಾತ ನಟಿ ಅಸಿನ್ ಅವರು ಮೈಕ್ರೋಮ್ಯಾಕ್ಸ್ ಉದ್ಯಮಿ ರಾಹುಲ್ ಶರ್ಮಾ ಅವರನ್ನು ಮಂಗಳವಾರ (ಜನವರಿ 19) ನವದೆಹಲಿಯ ಅದ್ಧೂರಿ ರೆಸಾರ್ಟ್ ನಲ್ಲಿ ಗ್ರ್ಯಾಂಡ್ ಆಗಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಅಸಿನ್ ಮತ್ತು ರಾಹುಲ್ ಶರ್ಮಾ ಅವರು ಎರಡು ರೀತಿಯ ಮದುವೆಯನ್ನು (ಹಿಂದು ಮತ್ತು ಕ್ರಿಶ್ಚಿಯನ್ ಪದ್ಧತಿ) ಒಂದೇ ದಿನ ಆಗುವ ಪ್ಲಾನ್ ಮಾಡಿದ್ದರು. (ಚಿತ್ರದಲ್ಲಿ ಹಿಂದು ಸಂಪ್ರದಾಯ)

ಬಾಲಿವುಡ್ ನಟ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್

ದೆಹಲಿಯಲ್ಲಿ ನಡೆದ ಕ್ರಿಶ್ಚಿಯನ್ ಪದ್ಧತಿಯ ಮದುವೆಯಲ್ಲಿ ನಟ ಅಕ್ಷಯ್ ಕುಮಾರ್ ಅವರು ಭಾಗವಹಿಸಿದ್ದರು. ನೂತನ ವಧುವರರೊಂದಿಗೆ ಬಾಲಿವುಡ್ ನಟ ಅಕ್ಕಿ ನೀಡಿದ ಫೋಸ್.

ಮದುವೆ ನಂತರ ನಟನೆಗೆ ಬ್ರೇಕ್

ಮದುವೆ ನಂತರ ನಟನೆಗೆ ಬ್ರೇಕ್

ಖ್ಯಾತ ದಿನಪತ್ರಿಕೆ ಒಂದಕ್ಕೆ ಮಾಹಿತಿ ನೀಡಿದಂತೆ ನಟಿ ಅಸಿನ್ ಅವರು ಉದ್ಯಮಿ ರಾಹುಲ್ ಶರ್ಮಾ ಅವರನ್ನು ಮದುವೆಯಾದ ನಂತರ ನಟನಾ ಕ್ಷೇತ್ರಕ್ಕೆ ಸ್ವಲ್ಪ ಕಾಲ ಬ್ರೇಕ್ ನೀಡುತ್ತಾರಂತೆ.

ನಟ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್

ಯಾರಿಗೂ ಗೊತ್ತಿಲ್ಲದ ವಿಷಯ ಏನಪ್ಪಾ ಅಂದ್ರೆ, ಅಸಿನ್ ಮತ್ತು ರಾಹುಲ್ ಶರ್ಮಾ ಅವರ ಮದುವೆಯ ಕಾರ್ಡ್ ಪಡೆದುಕೊಂಡ ಮೊದಲ ವ್ಯಕ್ತಿ ಅಂದರೆ ಅದು ನಟ ಅಕ್ಷಯ್ ಕುಮಾರ್ ಅವರು.

ನಟಿ ಅಸಿನ್ ಮದುವೆಗೆ ಆಳೆತ್ತರದ ಕೇಕ್

ನಟಿ ಅಸಿನ್ ಮದುವೆಗೆ ಆಳೆತ್ತರದ ಕೇಕ್

ನಟಿ ಅಸಿನ್ ಅವರು ನಟ ಅಕ್ಷಯ್ ಕುಮಾರ್ ಅವರ ಜೊತೆ 'ಹೌಸ್ ಫುಲ್ 2' ಚಿತ್ರದಲ್ಲಿ ನಟಿಸುತ್ತಿದ್ದಾಗ ಶೂಟಿಂಗ್ ಸಂದರ್ಭದಲ್ಲಿ ಉದ್ಯಮಿ ರಾಹುಲ್ ಶರ್ಮಾ ಅವರನ್ನು ಅಕ್ಷಯ್ ಕುಮಾರ್ ಅಸಿನ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದರಂತೆ. (ಚಿತ್ರ ಕೃಪೆ: ಬಾಂಬೆ ಟೈಮ್ಸ್)

ಆರತಕ್ಷತೆ

ಆರತಕ್ಷತೆ

ಅಸಿನ್ ಅವರ ಬಾಲಿವುಡ್ ಗೆಳೆಯರಿಗಾಗಿ ಜನವರಿ 23 ರಂದು ವಿಶೇಷ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿದೆ. (ಚಿತ್ರದಲ್ಲಿರುವುದು ಅಸಿನ್ ಅವರ ಕ್ರಿಶ್ಚಿಯನ್ ಪದ್ಧತಿಯ ಮದುವೆ ಡೆಕೊರೇಶನ್. ಚಿತ್ರಕೃಪೆ: ಬಾಂಬೆ ಟೈಮ್ಸ್)

ಅತಿಥಿಗಳು

ಅತಿಥಿಗಳು

ಅಸಿನ್ ಮತ್ತು ರಾಹುಲ್ ಶರ್ಮಾ ಅವರ ಮದುವೆಯ ಸಮಾರಂಭದಲ್ಲಿ ಕ್ರಿಶ್ಚಿಯನ್ ಮದುವೆ ಸಮಾರಂಭಕ್ಕೆ ಸುಮಾರು 50 ಜನ ಮತ್ತು ಹಿಂದು ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭಕ್ಕೆ ಸುಮಾರು 200 ಜನ ಭಾಗವಹಿಸಿದ್ದರು.

ಅಸಿನ್ ಮತ್ತು ರಾಹುಲ್ ಮದುವೆ

ಅಸಿನ್ ಮತ್ತು ರಾಹುಲ್ ಮದುವೆ

ಹಿಂದು ಸಂಪ್ರದಾಯದ ಮದುವೆ ಸಮಾರಂಭಕ್ಕೆ ಕಡ್ಡಾಯವಾಗಿ ಸಂಪೂರ್ಣ ತರಕಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮದುಮಗಳು ಅಸಿನ್ ಅವರು ಸಭ್ಯಸಾಚಿ ಮುಖರ್ಜಿಗಳ ಸಂಪ್ರದಾಯಬದ್ಧ ಉಡುಗೆ ತೊಟ್ಟು ಪಕ್ಕಾ ಹಿಂದು ಸಂಪ್ರದಾಯದ ಮದುಮಗಳಂತೆ ಕಂಗೊಳಿಸುತ್ತಿದ್ದರು.

More from Filmibeat

English summary
Asin Thottumkal's and Rahul Sharma are married now. The beautiful couple had planned two weddings on the same day - a church wedding in the morning, followed by an evening Hindu marriage ceremony. Both the functions took place at Dusit Devarana hotel on NH8, NCR. We bring to you the inside pictures from Asin's grand wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X